
ವೈಭವದಿಂದ ಜರುಗಿದ ಗುಡ್ಡಾಪುರ ದಾನಮ್ಮ ದೇವಿಯ ಪುರಾಣ ಮಹಾಮಂಗಲೋತ್ಸವ.
ಗಜೇಂದ್ರಗಡ : ಸತ್ಯಮಿಥ್ಯ (ಸೆ -03).
ನಗರದ ಮೈಸೂರು ಮಠದಲ್ಲಿ ಸೋಮವಾರ ಸಾಯಂಕಾಲ ಶ್ರೀ ಗುಡ್ಡಾಪುರ ದಾನಮ್ಮ ದೇವಿಯ ಪುರಾಣ ಮಹಾಮಂಗಳೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ರೋಣ ಮತಕ್ಷೇತ್ರದ ಶಾಸಕ ಜಿ. ಎಸ್. ಪಾಟೀಲ್ ಮಾತನಾಡಿ. ಒಗ್ಗಟ್ಟಿನಲ್ಲಿ ಸಮಾಜದ ಶಕ್ತಿ ಅಡಗಿದೆ.ನಿಮ್ಮ ಸಮಾಜ ರಾಜಕೀಯವಾಗಿ ಮುನ್ನೆಲೆಗೆ ಬರಬೇಕಾದರೆ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯಬೇಕು. ರಾಜಕೀಯ ಚರಿತ್ರೆ ಇತಿಹಾಸ ನೋಡಿದರೆ ಒಂದು ಕಾಲದಲ್ಲಿ ನಮ್ಮ ಸಮಾಜದ ಅದರಲ್ಲೂ ಉತ್ತರ ಕರ್ನಾಟಕದ ಅನೇಕ ಮಹನೀಯರು ಆಡಳಿತ ಚುಕ್ಕಾಣಿ ಹಿಡಿದು ಪ್ರಸಿದ್ದರಾಗಿದ್ದಾರೆ. ಅವರು ಬೇರೆ ಇವರು ಬೇರೆ ಎನ್ನುತ್ತಾ ನಮ್ಮ ಶಕ್ತಿ ಕಡಿಮೆ ಆಗುತ್ತಿದೆ. ಆದ್ದರಿಂದ ಒಗ್ಗಟ್ಟಿನಿಂದ ಸಮಾಜ ಮುನ್ನಡೆಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೃತ್ತಿಯಿಂದ ನಿವೃತ್ತಿ ಹೊಂದಿದವರಿಗೆ ಸನ್ಮಾನ ಮಾಡಲಾಯಿತು ಮತ್ತು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಕುದರಿಮೋತಿ ಸಂಸ್ಥಾನ ಮಠದ ಶ್ರೀ ಮ.ನಿ.ಪ್ರ. ಜಗದ್ಗುರು ವಿಜಯ ಮಹಾಂತ ಮಹಾಸ್ವಾಮಿಗಳು.
ಸಾನಿಧ್ಯವನ್ನು ಹಿರೇಮಠ ನರೇಗಲ್- ಸವದತ್ತಿ ಮಠದ ಶ್ರೀ ಷ. ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯರು ವಹಿಸಿಕೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಸಿದ್ದಪ್ಪ ಬಂಡಿ ವಹಿಸಿಕೊಂಡು ಮಾತನಾಡುತ್ತಾ ನಿಮ್ಮೆಲ್ಲರ ಒಗ್ಗಟ್ಟು, ನಮ್ಮ ಮೇಲೆ ಇಟ್ಟ ನಂಬಿಕೆಯಿಂದ ಇಂತಹ ಅಸಾಧ್ಯ ಕಾರ್ಯವನ್ನು ಸಾಧಿಸಬಹುದು ಎಂದರು . ವೇದಿಕೆಯ ಮೇಲೆ ಟಿ.ಎಸ್.ರಾಜೂರ, ಡಾ. ಬಿ.ವಿ.ಕಂಬಳ್ಯಾಳ, ಮಿಥುನ್ ಪಾಟೀಲ್, ಶರಣಪ್ಪ ರೇವಡಿ, ಅಪ್ಪು ಮತ್ತಿಕಟ್ಟಿ, ಶಿವಕುಮಾರ ಕೊರಧಾನ್ಯಮಠ, ಸಂಗಪ್ಪ ಕುಂಬಾರ, ಚಿದಾನಂದ ಹಡಪದ,ಎಸ್. ಎಸ್. ವಾಲಿ,ಪಂಪನಗೌಡ ಸಿನ್ನೂರ, ಹೇಮರಡ್ಡಿ ದೇವರಡ್ಡಿ, ಬಾಳು ಕುಂಬಾರ, ದೇವಪ್ಪ ಮಡಿವಾಳರ, ನಿಂಗಪ್ಪ ಹೂಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ