ಕುಕನೂರ : ಸತ್ಯಮಿಥ್ಯ (ಸೆ -23).
ಶ್ರೀ ರುದ್ರಮುನೇಶ್ವರ ಹಮಾಲರ ಮತ್ತು ಕಾರ್ಮಿಕರ ಸಂಘದ ವತಿಯಿಂದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮತ್ತು ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ರಾಜ್ಯದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಕೊಪ್ಪಳ ಜಿಲ್ಲೆ ಕುಕುನೂರು ಪಟ್ಟಣದ ಶ್ರೀ ರುದ್ರಮುನೇಶ್ವರ ಹಮಾಲಿ ಕಾರ್ಮಿಕರ ಸಂಘದ ವತಿಯಿಂದ ಪಟ್ಟಣದ ಎಪಿಎಂಸಿ ಇಂದ ಕುಕುನೂರು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಅಂಬೇಡ್ಕರ್ ಸರ್ಕಲ್ ವರೆಗೆ ಪ್ರತಿಭಟನೆ ನೆರವೇರಿಸಿ ನಂತರ ವೀರಭದ್ರಪ್ಪ ಸರ್ಕಲ್ ನಲ್ಲಿ ಪ್ರತಿಭಟನೆಯನ್ನು ನಡೆಸಿ ತಹಶೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವೆಯನ್ನು ಸಲ್ಲಿಸಲಾಯಿತು.
ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ನಿಂಗಪ್ಪ ಗೊರಲೆಕೊಪ್ಪ ಮಾತನಾಡಿ
ಹಮಾಲಿ ಕಾರ್ಮಿಕರ ಬೇಡಿಕೆಗಳು :
೧) 23 ವಲಯದ ಅಸಂಘಟಿತ ಕಾರ್ಮಿಕರ ಸಹಜ ಮರಣಕ್ಕೂ 1 ಲಕ್ಷ ರೂಗಳ ಪರಿಹಾರ ನೀಡಬೇಕು ಹಾಗೂ ಶವ ಸಂಸ್ಕಾರದ ಪರಿಹಾರದ ಮೊತ್ತವನ್ನು ರೂಪಾಯಿ 25 ಸಾವಿರಕ್ಕೆ ಹೆಚ್ಚಿಸಬೇಕು,
೨) ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆ ಹಾಗೂ ಸೂಕ್ತ ಪಿಂಚಣಿ ಯೋಜನೆ ಜಾರಿ ಮಾಡಬೇಕು
೩) ಎಲ್ಲಾ ಹಮಾಲಿ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು. ಎಪಿಎಂಸಿ ಕಾಯಕ ನಿಧಿ ಯಡಿ ನಿವೃತ್ತಿ ಪರಿಹಾರ ನೀಡಬೇಕು. ಮರಣ ಪರಿಹಾರವನ್ನು ರೂ 2 ಲಕ್ಷಕ್ಕೆ ಹೆಚ್ಚಿಸಬೇಕು.
೪) ಕೇಂದ್ರ ಸರಕಾರ ಇ -ಶ್ರಮ ಕಾರ್ಡ್ ಪಡೆದ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಸೌಲಭ್ಯಗಳನ್ನು ಜಾರಿ ಮಾಡಬೇಕು.
೫) ಮಿಲ್ ಗೋಡೌನ್ ವೇರ ಹೌಸ್ ಗಳಲ್ಲಿ ಕೆಲಸ ನಿರ್ವಹಿಸುವ ಹಮಾಲಿ ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡಬೇಕು.
೬) ವಸತಿಹೀನ ಹಮಾಲರಿಗೆ ವಸತಿ ಯೋಜನೆ ಜಾರಿ ಮಾಡಬೇಕು ಎಂದು ಈ ಕೂಡಲೇ ಸರ್ಕಾರ ಕಮಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಹಮಾಲಿ ಕಾರ್ಮಿಕ ಸಂಘದ ಪದಾಧಿಕಾರಿಗಳಾದ ನಿಂಗಪ್ಪ ಗೊರಲೆಕೊಪ್ಪ, ವಿರುಪಾಕ್ಷಪ್ಪ, ಮಹೇಶ್ ಪತ್ತಾರ್ , ದೊಡ್ಡ ಈರಪ್ಪ, ದೇವಪ್ಪ, ಶರಣಪ್ಪ, ಬಸವರಾಜ್, ಯಲ್ಲಪ್ಪ, ಮಾರುತಿ, ಶಿವಬಸಪ್ಪ, ಸುರೇಶ, ಹನುಮಪ್ಪ, ಶಂಕ್ರಯ್ಯ, ಯಮನೂರ, ಲಿಂಗಪ್ಪ, ರಮೇಶ, ಮಲ್ಲಪ್ಪ, ಶರಣಪ್ಪ, ಹಾಲಪ್ಪ, ಮತ್ತು ಶ್ರೀ ರುದ್ರಮದೇಶ್ವರ ಹಮಾಲರ ಮತ್ತು ಕಾರ್ಮಿಕ ಸಂಘದ ಪದಾಧಿಕಾರಿಗಳು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ್.