ಸ್ಥಳೀಯ ಸುದ್ದಿಗಳು

ಕೊಪ್ಪಳ : ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವ ಮೂಲಕ ಬ್ಯಾಂಕಗಳೊಂದಿಗೆ ಸಹಕರಿಸಿ :ರವಿ ಬಾಗಲಕೋಟೆ.

Share News

ಕೊಪ್ಪಳ : ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವ ಮೂಲಕ ಬ್ಯಾಂಕಗಳೊಂದಿಗೆ ಸಹಕರಿಸಿ :ರವಿ ಬಾಗಲಕೋಟೆ.

ಕುಕನೂರ :ಸತ್ಯಮಿಥ್ಯ (ಅಗಸ್ಟ್ -29).

ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಬೀದಿ ಬದಿ ವ್ಯಾಪಾರಸ್ಥರಿಗೆ ಅನೇಕ ಕಾರ್ಯಕ್ರಮಗಳ ಅಡಿಯಲ್ಲಿ ಹಣ ನೀಡುತ್ತಾ ಬಂದಿದ್ದೇವೆ. ಮೊದಲನೆಯದಾಗಿ 10,ಸಾವಿರ ರೂಪಾಯಿಗಳನ್ನು ನೀಡಿದ್ದು. ಫೋನ್ ಪೇ ಅಥವಾ ನಿಮ್ಮ ಫೋಟೋ ಇರುವ ಸ್ಕ್ಯಾನ್ ಕಾರ್ಡ್ನ್ನು ನೀಡಿರುತ್ತೇವೆ.

ವ್ಯಾಪಾರಕ್ಕಾಗಿ ಲೈಸನ್ಸ್ನ್ನು ನೀಡಿರುತ್ತೇವೆ. ಪೊಲೀಸ್ ಇಲಾಖೆ ಪಟ್ಟಣ ಪಂಚಾಯಿತಿಯವರು ಯಾವುದೇ ರೀತಿಯಿಂದ ಬೀದಿ ಬದಿ ವ್ಯಾಪಾರಸ್ಥರಿಗೆ ತೊಂದರೆಗಳನ್ನು ನೀಡಿರುವುದಿಲ್ಲ. ಬೀದಿ ಬದಿಯ ವ್ಯಾಪಾರಸ್ಥರು ಆದೇಶಗಳನ್ನು ಉಲ್ಲಂಘನೆ ಮಾಡಿದರೆ ಅಂತ ಅವರ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಬೀದಿ ಬದಿಯ ವ್ಯಾಪಾರಸ್ಥರಿಗೆ ಸೌಲಭ್ಯಗಳನ್ನು ಪಡೆದುಕೊಂಡು ಸಾಲವನ್ನು ಬೇಗನೆ ಮರುಪಾವತಿಸಿ, ಬ್ಯಾಂಕುಗಳೊಂದಿಗೆ ಸರಿಯಾಗಿ ಸಹಕರಿಸಿ ಎಂದು ಕುಕುನೂರು ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ರವಿ ಬಾಗಲಕೋಟಿ ಬೀದಿ ಬದಿ ವ್ಯಾಪಾರಸ್ಥರಿಗೆ ಕರೆ ನೀಡಿದರು.

ಅವರು ಕುಕನೂರನಲ್ಲಿ ನಡೆದ ಜಿಲ್ಲಾಡಳಿತ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಕೊಪ್ಪಳ ಮತ್ತು ಪಟ್ಟಣ ಪಂಚಾಯಿತಿ ಕುಕನೂರ್ ಡೆನ್ಮ ಯೋಜನೆಯ ಪಿ ಎಂ ಸ್ವ-ನಿಧಿ ಸಮೃದ್ಧಿ ಕಾರ್ಯಕ್ರಮ ಧಡಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರುಗಳಿಗೆ ಸಾಲ ಮೇಳ ಕಾರ್ಯಕ್ರಮದಲ್ಲಿ ಜ್ಯೋತಿ ಉದ್ಘಾಟಿಸಿ ಮಾತನಾಡಿದರು.

ನಂತರ ಮಾತನಾಡಿದ ಶಿವಕುಮಾರ್ ಕಟ್ಟಿಮನಿ ಸಮುದಾಯ ಸಂಘಟನಾಧಿಕಾರಿ ಪಟ್ಟಣ ಪಂಚಾಯಿತಿ, ಅಹಮದ್ ಹುಸೇನ್ ಅಭಿಯಾನ ವ್ಯವಸ್ಥಾಪಕರು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ಜಿಲ್ಲಾ ಆಡಳಿತ ಭವನ ಕೊಪ್ಪಳ, ಇವರು ಬೀದಿ ಬದಿ ವ್ಯಾಪಾರಸ್ಥರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಲಲಿತಮ್ಮ ಆರ್ ಯೆಡಿಯಾಪುರ, ಪಟ್ಟಣ ಪಂಚಾಯತ್ ಸದಸ್ಯರಾದ ಗಗನ್ ನೋಟಗಾರ್, ಶಿವರಾಜ ಯಲ್ಲಪ್ಪ ಗೌಡರ್, ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಕಲ್ಲಪ್ಪ ಮರಡಿ, ಅಕ್ಕಮಹಾದೇವಿ , ಬಸವರಾಜ ಜಾಲಣ್ಣವರ, ಮೊಕ್ಷ್ಮಮ್ಮ, ಪಟ್ಟಣ ಪಂಚಾಯತ್ ಸಿಬ್ಬಂದಿ ವರ್ಗದವರು ಮತ್ತು ವಿವಿಧ ಬ್ಯಾಂಕುಗಳ ಅಧಿಕಾರಿ ವರ್ಗದವರು ಬೀದಿ ಬದಿ ವ್ಯಾಪಾರಸ್ಥರು ಇತರರು ಇದ್ದರು.

ವರದಿ : ಚೆನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!