ನರೇಗಲ್ಲ: ನಟ ಡಾ.ವಿಷ್ಣುವರ್ಧನ್ ಜನ್ಮದಿನಾಚರಣೆ.
ನರೇಗಲ್ಲ:ಸತ್ಯಮಿಥ್ಯ (ಸೆ.೧೯).
ಪಟ್ಟಣದ ಅಬ್ಬಿಗೇರಿ ರಸ್ತೆಯಲ್ಲಿ ಬುಧವಾರ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸಂಘದಿಂದ ವಿಷ್ಣುವರ್ಧನ್‌ರವರ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಈ ವೇಳೆ ರಾಜ್ಯ ಪ್ರಶಸ್ತಿ ವಿಜೇತ ಚಂದ್ರಾಮ ಗ್ರಾಮಪುರೋಹಿತ ಮಾತನಾಡಿ, ಸಾಹಸಸಿಂಹ ಎಂದೇ ಖ್ಯಾತರಾಗಿದ್ದ ವಿಷ್ಣುವರ್ದನ್ ನಮ್ಮನ್ನು ಅಗಲಿ ೧೩ ವರ್ಷಗಳು ಕಳೆಯುತ್ತಿವೆ. ಆದರೂ ಇಂದಿಗೂ ಕನ್ನಡಿಗರ ಮನದಲ್ಲಿ ನೆಚ್ಚಿನ ಯಜಮಾನನಾಗಿ ಉಳಿದುಕೊಂಡಿದ್ದಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಚಿತ್ರಗಳಲ್ಲಿ ಡಾ.ವಿಷ್ಣುವರ್ಧನ್ ನಟಿಸಿ ಅಧಿಕ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದರು. ಸಾಹಸಸಿಂಹ ವಿಷ್ಣುವರ್ಧನ್ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆ ಸೇರಿದಂತೆ ೨೨೦ಕ್ಕೂ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ೧೪ಕ್ಕೂ ಹೆಚ್ಚು ಚಿತ್ರಗಳಲ್ಲಿ ದ್ವಿ-ಪಾತ್ರದಲ್ಲಿ ನಟಿಸಿರುವ ಏಕೈಕ ನಟ ಅಂದರೆ ಡಾ ವಿಷ್ಣುವರ್ಧನ್ ಅನ್ನೋದು ಹೆಮ್ಮೆಯ ವಿಷಯ. ಡಾ. ವಿಷ್ಣುವರ್ಧನ್ ಕೇವಲ ನಟನಾಗಿರದೇ ಒಬ್ಬ ಆದರ್ಶ ವ್ಯಕ್ತಿಯಾಗಿದ್ದರು. ಇಂದಿನ ಯುವ ನಟರಿಗೆ ಅವರು ಮಾದರಿಯಾಗಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಪ್ರವೀಣ ಮಡಿವಾಳರ, ಗಂಗಾಧರ ಮಡಿವಾಳರ, ವೀರೇಶ ವಾಲಿ, ವಿಶ್ವನಾಥ ಅಬ್ಬಿಗೇರಿ, ಅಯ್ಯಪ್ಪ ಜಕ್ಕಲಿ, ರಾಜೇಸಾಬ ನಶೇಖಾನ, ಸಲಿಂ ನದಾಫ, ಭರತ ಬಳಗಾನೂರ, ವಿನೋದ ಮಡಿವಾಳರ, ಸಂಗಪ್ಪ ಮಡಿವಾಳರ, ದಯಾನಂದ ಮರಿಗೌಡ್ರ ಸೇರಿದಂತೆ ಅಭಿಮಾನಿಗಳು ಇದ್ದರು.
ವರದಿ : ಸಂಗಮೇಶ ಮೆಣಸಗಿ.