ಯೋಗಭ್ಯಾಸದಿಂದ ಸಮಾಜವನ್ನು ರೋಗ ಮುಕ್ತ ಮಾಡುವ ಸಂಕಲ್ಪ ತೊಡಬೇಕು – ಬಸವಲಿಂಗೇಶ್ವರ ಶ್ರೀ.
ಕೊಪ್ಪಳ -ಸತ್ಯಮಿಥ್ಯ (ಜುಲೈ -29).
ಪತಂಜಲಿ ಯೋಗ ಶಿಕ್ಷಣ ಸಮಿತಿಯವರು ಯೋಗಭ್ಯಾಸದಿಂದ ಸಮಾಜವನ್ನು ರೋಗ ಮುಕ್ತ ಮಾಡುವ ಸಂಕಲ್ಪ ತೊಡಬೇಕು ಎಂದು ಶ್ರೀ ಬಸವಲಿಂಗೇಶ್ವರ ಮಹಾಸ್ವಾಮಿಗಳು ಶ್ರೀ ಧರಮುರುಡಿ ಹಿರೇಮಠ ಯಲಬುರ್ಗಾ ರವರು ಸಾರ್ವಜನಿಕರಿಗೆ ಕರೆ ನೀಡಿದರು.
ಅವರು ಕೊಪ್ಪಳದ ಪತಂಜಲಿ ಯೋಗ ಸಮಿತಿ ಬನ್ನಿಕಟ್ಟಿ ಸಮಿತಿ ವತಿಯಿಂದ ಕೊಪ್ಪಳದ ಶ್ರೀ ವೀರಮಹೇಶ್ವರ ಸಭಾಂಗಣದಲ್ಲಿ ಆಯೋಜಿಸಿದ ಐದನೇ ವರ್ಷದ ಯೋಗ ವಾರ್ಷಿಕೋತ್ಸವ ಸಂಭ್ರಮದ ಕಾರ್ಯಕ್ರಮ ದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ವಿಶೇಷ ಆಹ್ವಾನಿತರಾಗಿ ಯೋಗಿನಿ ಅಕ್ಕನವರು ಪ್ರಜಾಪಿತ ಬ್ರಹ್ಮ ಕುಮಾರಿ ವಿಶ್ವವಿದ್ಯಾಲಯ ಕೊಪ್ಪಳ ಅವರು ಮಾತನಾಡಿ ಸರ್ವ ಆತ್ಮರಿಗೆ, ಮಹಾತ್ಮರಿಗೆ, ದೇವಾತ್ಮರಿಗೆ ಎಲ್ಲರಿಗೂ ಪರಮಾಪ್ತ ಒಬ್ಬನೇ ಆಗಿದ್ದಾನೆ. ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಯೋಗ ಮತ್ತು ಧ್ಯಾನವು ಮಾನವನಿಗೆ ಅತ್ಯವಶ್ಯಕವಾಗಿ ಬೇಕಾಗಿದೆ ಮನಸ್ಸು , ಆತ್ಮ ದೇಹವನ್ನು ಸಮಗ್ರವಾಗಿ ಗುಣಪಡಿಸಲು ಚಿಕಿತ್ಸೆಯಾಗಿ ಬಳಸಬಹುದು. ದೇಹವನ್ನು ಆರೋಗ್ಯವಾಗಿಡಲು ಯೋಗ ಮುಖ್ಯವಾದರೆ ಮನಸ್ಸನ್ನು ಬಲಪಡಿಸಲು ಮತ್ತು ಆತ್ಮವನ್ನು ಶಾಂತಿ ಗೊಳಿಸಲು ಯೋಗ ಮತ್ತು ಆತ್ಮ ಎರಡಕ್ಕಿಂತ ಉತ್ತಮವಾಗಿ ಬೇರೇನು ಕಾರ್ಯನಿರ್ವಹಿಸುವುದಿಲ್ಲ ಎಂದು ಮಾತನಾಡಿದರು.
ಡಾ. ಎಸ್. ಬಿ .ಹಂದ್ರಾಳ ಗದಗ್ ಮತ್ತು ವಿಜಯನಗರ ಜಿಲ್ಲಾ ಮತ್ತು ರಾಜ್ಯ ಸಮಿತಿಯ ಸದಸ್ಯರು ಪತಂಜಲಿ ಯೋಗ ಸಮಿತಿ ಕರ್ನಾಟಕ ರವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ
ಇದೀಗ ಎಲ್ಲರ ಯೋಗ ಮತ್ತು ಧ್ಯಾನದ ಬಗೆಗಿನ ಮಹತ್ವ ಮತ್ತು ಆಸಕ್ತಿ ಹೆಚ್ಚುತ್ತದೆ. ಕೋವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ ಯೋಗ ಮತ್ತು ಧ್ಯಾನ ಅಭ್ಯಾಸ ಮಾಡುವವರು ಶಾಂತಿಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಇನ್ನೂ ಕೆಲವರು ಈ ಅಭ್ಯಾಸವನ್ನು ಪ್ರಾರಂಭಿಸಲು ಇಚ್ಚಿಸುತ್ತಿದ್ದಾರೆ.
ಮನಸ್ಸಿನ ಶಾಂತಿ ನೆಮ್ಮದಿಯ ಆತ್ಮ ನೆಮ್ಮದಿಯ ನಿದ್ದೆ ಸೇರಿದಂತೆ ಜೀವನದಲ್ಲಿನ ಎಲ್ಲಾ ಆಧ್ಯಾತ್ಮಿಕ ವಿಚಾರಗಳಿಗೆ ಶಾಂತಿಯಂದಿರುವುದು ಪ್ರಮುಖ ಅಂಶವಾಗಿದೆ. ಅಗತ್ಯಕಾರಿ ಅನುಭವಗಳನ್ನು ಹೊಂದಿರುವ ಜನರು ಯೋಗ ಮತ್ತು ಧ್ಯಾನದ ಅಭ್ಯಾಸದಿಂದ ಪ್ರಯೋಜನ ಪಡೆಯಬಹುದು. ಯೋಗ ಮತ್ತು ಧ್ಯಾನದ ನಿಯಮಿತ ಅಭ್ಯಾಸದೊಂದಿಗೆ ಎಲ್ಲಾ ರೋಗಗಳಿಂದ ದೂರವಿರಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಪ್ರಸ್ತಾಪಿಕ ನುಡಿಯನ್ನು ವಿರಯ ವಂಟಿಗೋಡಿ ಮಠ ಸಾಧಕರು ಪತಂಜಲಿ ಯೋಗ ಸಮಿತಿ ಕೊಪ್ಪಳ ವಹಿಸಿದ್ದರು.
ಸ್ವಾಗತವನ್ನು ಸತ್ಯನಾರಾಯಣ ಅಕ್ಕಸಾಲಿ ವಹಿಸಿದರುಈ ಸಂದರ್ಭದಲ್ಲಿ ಶರಣಪ್ಪ ಸಿ. ಹೆಚ್. ಜಿಲ್ಲಾ ಪ್ರಭಾರಿಗಳು ಪತಂಜಲಿ ಯೋಗ ಸಮಿತಿ ಕೊಪ್ಪಳ, ಭೀಮಸೇನ್ ಮೇಘರಾಜ ಜಿಲ್ಲಾ ಉಪ ಪ್ರಭಾರಿಗಳು ಪತಂಜಲಿ ಯೋಗ ಸಮಿತಿ, ಬಸವರಾಜ ಅಂಗಡಿ ತಾಲೂಕ ಪ್ರಭಾರಿಗಳು ಪತಂಜಲಿ ಯೋಗ ಸಮಿತಿ, ಶರಣೆ ಗೌಡರು ಸೋಷಿಯಲ್ ಮೀಡಿಯಾ ರಾಜ್ಯ ಪ್ರಭಾರಿಗಳು, ರಾಮ ಗೋಪಾಲ ತಾಪಾಡಿಯ ಜಿಲ್ಲಾ ಖಜಾಂಚಿ ಪತಂಜಲಿ ಯೋಗ ಸಮಿತಿ, ಸಂಗಣ್ಣ ತೆಂಗಿನಕಾಯಿ ತಾಲೂಕ ಪ್ರಭಾರಿಗಳು ಪತಂಜಲಿ ಯೋಗ ಸಮಿತಿ ಯಲಬುರ್ಗಾ, ನಿಜಗುಣಪ್ಪ ಕೊರ್ಲಳ್ಳಿ ಪತಂಜಲಿ ಯೋಗ ಸಮಿತಿ ಬನ್ನಿಕಟ್ಟಿ ಗೌರವಾನ್ವಿತ ಹಿರಿಯರು ಮಾರ್ಗದರ್ಶಕರು, ಹಿರಿಯ ಯೋಗ ಸಾಧಕರಾದ ಕೃಷ್ಣಪ್ಪದಾಸ ಕನಕಪ್ಪನವರ, ಹಿರಿಯ ಯೋಗ ಸಾಧಕರಾದ ಮಂಜುನಾಥ ಹೊಸಳ್ಳಿ, ಮತ್ತು ಮಹಿಳಾ ಪತಂಜಲಿ ಯೋಗ ಶಿಕ್ಷಣ ಸಮಿತಿ ಬನ್ನಿಕಟ್ಟಿ ಯೋಗ ಸಾಧಕರು ಮತ್ತು ಶಿಬಿರಾರ್ಥಿಗಳು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ್.