ಮಕ್ಕಳ ಕಲಾಭಿರುಚಿಯ ಸಾಮರ್ಥ್ಯವನ್ನು ಸಾಬೀತು ಮಾಡಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ:ರೆಡ್ಡೇರ
2024- 25ನೇ ಸಾಲಿನ ಬಿನ್ನಾಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲ್ಲೋತ್ಸವ ಕಾರ್ಯಕ್ರಮ.
ಮಕ್ಕಳ ಕಲಾಭಿರುಚಿಯ ಸಾಮರ್ಥ್ಯವನ್ನು ಸಾಬೀತು ಮಾಡಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ:ರೆಡ್ಡೇರ
ಕೊಪ್ಪಳ: ಸತ್ಯಮಿಥ್ಯ ( ಸ-12)
ಸ್ಥಳೀಯ ಜನಪದ ನೃತ್ಯ ಮತ್ತು ಗಾಯನ, ಪ್ರಬಂಧ, ಚರ್ಚಾ ಸ್ಪರ್ಧೆ, ಏಕಾಪಾತ್ರಭಿನಯ, ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಇನ್ನು ಅನೇಕ ಕಲಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಭಾ ಕಾರಂಜಿ ವ್ಯಾಪ್ತಿಯಲ್ಲಿ ಬರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಕಲಾಭಿರುಚಿಯ ಸಾಮರ್ಥ್ಯವನ್ನು ಸಾಬೀತು ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಎಂ. ವಿ. ರೇಡ್ಡೆರ ನುಡಿದರು.
ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದ ಕರ್ನಾಟಕ ಸಂಸ್ಕೃತಿ ವಿದ್ಯಾಪೀಠದ ಪ್ರೌಢಶಾಲೆಯಲ್ಲಿ 2024- 25ನೇ ಸಾಲಿನ ಬಿನ್ನಾಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲ್ಲೋತ್ಸವ ಕಾರ್ಯಕ್ರಮದ ಉದ್ಘಾಟನೆಗೈದು ಮಾತನಾಡಿದರು.
ನಿವೃತ್ತ ಪ್ರಾಧ್ಯಾಪಕರಾದ ಶಿವಣ್ಣ ಯಾಳಗಿ ಮಾತನಾಡುತ್ತಾ ಇಂತಹ ವೇದಿಕೆಯಲ್ಲಿ ಮಕ್ಕಳು ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸುತ್ತಾರೆ. ಇಲ್ಲಿ ಮಕ್ಕಳ ಸರ್ವಾಂಗಿಣ ವ್ಯಕ್ತಿತ್ವ ವಿಕಸನಕ್ಕೆ ಬೇಕಾಗುವ ಎಲ್ಲಾ ರೀತಿಯ ಚಟುವಟಿಕೆಯಲ್ಲಿ ಮಕ್ಕಳು ತಮ್ಮನ ತೊಡಗಿಸಿಕೊಂಡು ಸಂತಸ ಪಡುತ್ತವೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆ ಉತ್ತಮ ಆಗಿದೆ. ಸರಕಾರ ಇಂತಹ ಕಾರ್ಯಕ್ರಮಗಳು ಮಕ್ಕಳ ಮಾನಸಿಕ ಒತ್ತಡ ಕಡಿಮೆ ಮಾಡಿ ಕಲಿಕೆಗೆ ಉತ್ತಮ ಪ್ರೇರೇಪಣೆ ಎಂದರು.
ಕರ್ನಾಟಕ ಸಂಸ್ಕೃತಿ ವಿದ್ಯಾಪೀಠದ ಪ್ರೌಢಶಾಲೆಯ ಅಧ್ಯಕ್ಷರಾದ ಸುಭಾಸ ವೀ. ಮಾದಿನೂರು ಮಾತನಾಡುತ್ತಾ ಪ್ರತಿಭಾ ಕಾರಂಜಿ ಕಾರ್ಯಕ್ರಮ ಇದು ಶಿಕ್ಷಣ, ಮನರಂಜನೆ ಹಾಗೂ ಅಭಿವೃದ್ಧಿಗೆ ಉತ್ತೇಜಿಸುತ್ತದೆ. ಮಕ್ಕಳಲ್ಲಿನ ಗುಪ್ತ ಪ್ರತಿಭೆಯನ್ನು ಹೊರತರುತ್ತದೆ. ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ವೇದಿಕೆಯಾಗಿದೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಹೊರ ತರಲು ಶಿಕ್ಷಕರಿಗೆ ಅವಕಾಶವನ್ನ ನೀಡುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಹಾಗೂ ಕಾರ್ಯಕ್ರಮದ ಅಡುಗೆ ಸಹಾಯಕರಿಗೆ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳಿಗೆ ಸನ್ಮಾನ ನೆರವೇರಿಸಲಾಯಿತು.
ಕಾರ್ಯಕ್ರಮದ ನಿರೂಪಣೆ ಸತೀಶ ಕುಮಾರ ಆರ್. ಚನ್ನಪ್ಪ ಗೌಡರ ನೆರವೇರಿಸಿದರು.ಕಾರ್ಯಕ್ರಮದ ವಂದನಾರ್ಪಣೆಯನ್ನು ಹನುಮಂತಪ್ಪ ಸಿದ್ದರಡ್ಡಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದ್ರಾಕ್ಷಾಯಿಣಿ ಸಂಗಪ್ಪ ತಹಸಿಲ್ದಾರ್, ಅಂಜನಪ್ಪ ಮುಖ್ಯೋಪಾಧ್ಯಾಯರು, ಸುಭಾಸ ವೀ. ಮಾದೇನೂರು, ಎಂಎ ರಡ್ಡೇರ ನಿವೃತ್ತ ಉಪ ನಿರ್ದೇಶಕರು, ಬಸವರಾಜ್ ಮೇಟಿ ಅಧ್ಯಕ್ಷರು ಪ್ರೌಢಶಾಲಾ ಶಿಕ್ಷಕರ ಸಂಘ, ಹೇಮರೆಡ್ಡಿಪ್ಪ ಮುಂಡರಗಿ, ಪರಪ್ಪ ಚಿಕ್ಕೊಪ್ಪ, ಶಿವಾನಂದಪ್ಪ ಯಾಳಗಿ, ಭೀಮರೆಡ್ಡಿಪ್ಪ ಮೇಟಿ, ಶಶಿಧರ್ ಮಾದನೂರು, ನಂದ್ಯಪ್ಪ ಹನಿಸಿ, ಶೇಖಪ್ಪ ಅಸೂಟಿ, ಶ್ರೀನಿವಾಸ್ ಮೇಟಿ, ಅವಣ್ಣಿಪ್ಪ ಕಮತರ್, ರೇವಣಪ್ಪ ಅಬ್ಬಿಗೇರಿ, ಮಹಾಂತೇಶ್ ಅಂಗಡಿ, ಉದಯ ಕುಮಾರ ತಳವಾರ್, ಶಿವಕುಮಾರ ಹೊಂಬಾಳ, ಸುರೇಶ ಅಬ್ಬಿಗೇರಿ, ಮಂಜುನಾಥಯ್ಯ ತೆಗ್ಗಿನಮನಿ, ಖಾದರ್ ಭಾಷಾ ಸೋಂಪುರ, ಮಂಜುನಾಥ ಮೇಟಿ, ಶಿವಕುಮಾರ್ ಹೊಸಮನಿ,ಗ್ರಾಮ ಪಂಚಾಯತ್ ಸದಸ್ಯರುಗಳು ಮತ್ತು ಎಸ್‌ಡಿಎಂಸಿ ಅಧ್ಯಕ್ಷರು ಸರ್ವ ಸದಸ್ಯರು ಶಿಕ್ಷಕ ,ಶಿಕ್ಷಕಿಯರು ಗ್ರಾಮದ ಗುರುಹಿರಿಯರು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.