ಪ್ರತಿಭಾಕಾರಂಜಿ ಕಾರ್ಯಕ್ರಮ ನಾಡಿನ ಸಂಸ್ಕೃತಿಯನ್ನು ಬಿಂಬಿಸುತ್ತವೆ :ವಿರೂಪಾಕ್ಷಪ್ಪ ತಳಕಲ್
ಯಡಿಯಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಕಲೋತ್ಸವ ಕಾರ್ಯಕ್ರಮ.
ಪ್ರತಿಭಾಕಾರಂಜಿ ಕಾರ್ಯಕ್ರಮ ನಾಡಿನ ಸಂಸ್ಕೃತಿಯನ್ನು ಬಿಂಬಿಸುತ್ತವೆ :ವಿರೂಪಾಕ್ಷಪ್ಪ ತಳಕಲ್
ಕೊಪ್ಪಳ/ಯಡಿಯಾಪುರ:ಸತ್ಯಮಿಥ್ಯ (ಸ-13).
ನಾಡಿನ ಸಂಸ್ಕೃತಿಯಾದ ಜನಪದ ಹಾಡುಗಳು, ಭಕ್ತಿ ಗೀತೆಗಳು, ಬೀಸುವ ಪದಗಳು, ಸಾಮಾಜಿಕ ಮತ್ತು ಪೌರಾಣಿಕ ನಟನೆಗಳು ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಅವುಗಳನ್ನು ಜೀವಂತವಾಗಿರಿಸುವಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಶಿರೂರು ಗ್ರಾಮ ಪಂಚಾಯತ ಅಧ್ಯಕ್ಷರಾದ ವಿರೂಪಾಕ್ಷಪ್ಪ ತಳಕಲ್ ನುಡಿದರು.
ಕೊಪ್ಪಳ ಜಿಲ್ಲೆಯ ಕುಕುನೂರು ತಾಲೂಕಿನ ಯಡಿಯಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಯಡಿಯಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಕಲೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವದರ ಮೂಲಕ ಉದ್ಘಾಟನೆ ಮಾಡಿದರು
ಇದೆ ಸಂದರ್ಭದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ಮೇಟಿ ಮಾತನಾಡುತ್ತ ಒಂದು ದೇಶದ ಸಂಪತ್ತನ್ನು ಅಲ್ಲಿ ಇರುವ ಆರ್ಥಿಕ ಮತ್ತು ಸಾಮಾಜಿಕ ನೋಡಿ ಹೇಳುವುದಲ್ಲ, ಅಲ್ಲಿ ಇರುವ ಸಾಂಸ್ಕೃತಿಕ, ಕಲೆ, ಎಲ್ಲವನ್ನ ಕೂಡಿಸಿ ನೋಡಿದಾಗ ಆ ದೇಶದ ಸಂಪತ್ತುಗಳನ್ನು ನಾವು ಅಳೆಯಬಹುದು. ಆದ್ದರಿಂದ ಪ್ರತಿಯೊಬ್ಬರೂ ಸಾಂಸ್ಕೃತಿ ಕಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಕಿವಿ ಮಾತು ಹೇಳಿದರು.
ಶಿಕ್ಷಣ ಸಂಯೋಜಕರಾದ ಶರಣಪ್ಪ ರಾೄವಣಕಿ ಮಾತನಾಡುತ್ತಾ.ಪ್ರತಿಯೊಬ್ಬ ವಿದ್ಯಾರ್ಥಿಗಳು ಇಂತಹ ಕಲೆ ಸಂಸ್ಕೃತಿ ಉಳ್ಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಕಲೆಯನ್ನು ಉಳಿಸಿ ಬೆಳೆಸಬೇಕು. ಮತ್ತು ವಿದ್ಯಾರ್ಥಿಗಳ ಕಲೆ, ಸಂಸ್ಕೃತಿಗಳಿಗೆ ನಿರ್ಣಾಯಕರು ಯಾವುದೇ ಸಂಬಂಧಗಳನ್ನ ಹೊಂದದಂತೆ ಉತ್ತಮವಾದ ಕಲೆ ಸಂಸ್ಕೃತಿಗಳನ್ನು ವಿದ್ಯಾರ್ಥಿಗಳಲ್ಲಿ ಗುರುತಿಸಿ ಅಂತಿಮ ತೀರ್ಪನ್ನು ನೀಡಬೇಕು ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನ ಕಮಿಟಿಯ ಕಾರ್ಯದರ್ಶಿ ಮತ್ತು ಮುಖಂಡರಾದ ಅಂದಪ್ಪ ಜವಳಿ ಮತ್ತು ಪ್ರಮುಖರಾದ ಹರೀಶ ಹಿರೇಮಠ ಮಾತನಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಉಮೇಶ ಕಂಬಳಿ ನೆರವೇರಿಸಿದರು. ಸ್ವಾಗತವನ್ನು ಹನುಮಂತಪ್ಪ ಬಿನ್ನಾಳ ಮುಖ್ಯೋಪಾಧ್ಯಾಯರು ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಿಗೆ ಹಾಗೂ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಗಣ್ಯರಿಗೆ ಸನ್ಮಾನ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಅಂದಪ್ಪ ಜವಳಿ, ಹನುಮಂತಪ್ಪ ಬಿನ್ನಾಳ ಮುಖ್ಯೋಪಾಧ್ಯಾಯರು, ಶಾಂತಾದೇವಿ ಹಿರೇಮಠ,ಬಸವರಾಜ ಮೇಟಿ, ಶರಣಪ್ಪ ರಾೄವಣಕಿ, ಮಂಜುನಾಥ ತೆಗ್ಗಿನಮನಿ, ಪೀರ್ ಸಾಬ್ ದಪೇದಾರ, ಉಮೇಶ ಕಂಬಳಿ, ಬಸವರಾಜ ಅಂಗಡಿ, ಮಹೇಶ ಸಬರಾದ, ಮಾರುತಿ ತಳವಾರ, ಅಶೋಕ ಮಾದಿನೂರು, ಶಿವು ಮುತ್ತಾಳ, ಹರೀಶ್ ಹಿರೇಮಠ, ವಿರುಪಾಕ್ಷಪ್ಪ ತಳಕಲ್ ಗ್ರಾ. ಪಂ. ಅಧ್ಯಕ್ಷರು ರೂಪ ಬ್ಯಾಳಿ, ಸಿದ್ದಲಿಂಗಪ್ಪ ಹಂಚಿನಾಳ, ಸಿದ್ದಪ್ಪ ಮಾಲಿ ಪಾಟೀಲ, ಸಿದ್ದಪ್ಪ ಮ್ಯಾಗೇರಿ, ಬಸವರಾಜ ಉಪ್ಪಿನ, ನೀಲಮ್ಮ ಮೇಟಿ, ಶರಣಪ್ಪ ಬೂದಗುಂಪಿ, ವೀರೇಂದ್ರ ಮಾದನೂರು, ಕರಿಯಪ್ಪ ಕುರುಭಟ್ಟರು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಸರ್ವ ಸದಸ್ಯರುಗಳು ಗ್ರಾಮ ಪಂಚಾಯತ್ ಸರ್ವ ಸದಸ್ಯರುಗಳು ಗ್ರಾಮದ ಗುರು ಹಿರಿಯರು ಶಾಲಾ ವಿದ್ಯಾರ್ಥಿಗಳು ಇತರರು ಇದ್ದರು.
ವರದಿ:ಚೆನ್ನಯ್ಯ ಹಿರೇಮಠ.