ಜಕ್ಕಲಿ ಅನ್ನದಾನೇಶ್ವರ ಶ್ರೀಮಠದಲ್ಲಿ ಸೆ.೨೧ರಂದು ಪುರಾಣ ಪ್ರಾರಂಭ
ನರೇಗಲ್ಲ-ಸತ್ಯಮಿಥ್ಯ (ಸೆ.೧೯).
ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮಿಯವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಕೃಪಾ ಆಶೀರ್ವಾದದ ಅಪ್ಪಣೆಯ ಮೇರೆಗೆ ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವ ಹಾಗೂ ಅಡ್ಡಪಲ್ಲಕ್ಕಿ ಉತ್ಸವದ ಅಂಗವಾಗಿ ಸಮೀಪದ ಜಕ್ಕಲಿ ಗ್ರಾಮದ ಅನ್ನದಾನೇಶ್ವರ ಶ್ರೀಮಠದಲ್ಲಿ ಸೆ.೨೧ರ ಶನಿವಾರ ವಳ ಬಳ್ಳಾರಿಯ ಚನ್ನಬಸವ ತಾತನವರ ಮಹಾಪುರಾಣ ಪ್ರವಚನ ಪ್ರಾರಂಭಗೊಳ್ಳಲಿದೆ.
ಈ ಪುರಾಣ ಪ್ರವಚನವು ೨೧ ದಿನಗಳವರೆಗೆ ಪ್ರತಿದಿನ ಸಂಜೆ ೭-೩೦ ಗಂಟೆಯಿಂದ ರಾತ್ರಿ ೯ ಗಂಟೆಯವರೆಗೆ ನಡೆಯಲಿದ್ದು ಪುರಾಣ ಪ್ರವಚನವನ್ನು ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಅಬ್ಬಿಗೇರಿಯ ವೇ. ಮೂ. ಮಂಜುನಾಥ ಶಾಸ್ತ್ರೀಗಳು ಶಿವಪೂಜಿಯವರು ನಡೆಸಿಕೊಡಲಿದ್ದು ಹಾಲಕೆರೆ ಗ್ರಾಮದ ದ್ಯಾಮಣ್ಣ ಮಾಸ್ತರ ಬಡಿಗೇರ ಇವರ ಹಾರ್ಮೋನಿಯಂ ಸಂಗೀತದೊಂದಿಗೆ ನಿಡಗುಂದಿ ಗ್ರಾಮದ ವೀರಣ್ಣ ಕಮ್ಮಾರ ತಬಲಾ ಸಾಥ್ ನೀಡಲಿದ್ದಾರೆ.
ಗ್ರಾಮದ ಹಾಗೂ ಸುತ್ತಮುತ್ತಲಿನ ಸಕಲ ಸದ್ಭಕ್ತರು ಪ್ರತಿದಿನ ಶ್ರೀಮಠಕ್ಕೆ ಆಗಮಿಸಿ ಪುರಾಣ ಪ್ರವಚನವನ್ನು ಕೇಳಿ ಶ್ರೀಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಸದ್ಭಕ್ತರ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.
ವರದಿ : ಸಂಗಮೇಶ ಮೆಣಸಗಿ.