ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಅನಾವರಣಗೊಳಿಸಿದ ರಾಜಾ ಕೃಷ್ಣಪ್ಪ ನಾಯಕ.
ನಾರಾಯಣಪುರ(ಮೇಲಿನ ಗಡ್ಡಿ): ಸತ್ಯಮಿಥ್ಯ (ಡಿ-07 )
ನಾರಾಯಣಪುರ ಸಮೀಪದ ಗ್ರಾಮವಾದ ಮೇಲಿನ ಗಡ್ಡಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾನವನ್ನು ಮಾಡಲಾಯಿತು.
ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಒಟ್ಟು ಮೂರುವರೆ ಫೂಟ್ ( 3.5) ಎತ್ತರ ಹಾಗೂ ಎರಡು ( 2 ) ಅಡಿ ಅಗಲ ಅಳತೆಯ ಕಪ್ಪು ಶಿಲೆಯ ವಿಗ್ರಹವನ್ನು ಬಲವಂತ ಭಹರಿ ಭಹುದ್ದೂರ ಸಂಸ್ಥಾನ ಸುರುಪುರ ರಾಜಾ ಕೃಷ್ಣಪ್ಪ ನಾಯಕ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಮೇಲಿನ ಗಡ್ಡಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಇಡಬೇಕು ಎಂಬ ಬಹುದಿನದ ಆಸೆ, ಇಂದು ರಾಜಾ ಕೃಷ್ಣಪ್ಪ ನಾಯಕರವರ ಸಾಹಾಯದಿಂದ ಈಡೇರಲು ಸಾಧ್ಯವಾಯಿತು. ಈ ಮೂರ್ತಿ 55,000 ರೂಪಾಯಿ ಖರ್ಚು ಒಪ್ಪಿಕೊಂಡು ಮೇಲಿನ ಗಡ್ಡಿ ವಾಲ್ಮೀಕಿ ಸಮಾಜದವರಿಗೆ ಒಂದು ಉಡುಗೊರೆ ರೂಪದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಕೊಟ್ಟಿರುವುದು ಸಂತೋಷ ತರುವ ವಿಷಯವಾಗಿದೆ .
ಗ್ರಾಮಸ್ಥರು ಸಂತೋಷ ಪಡುವುದರ ಜೊತೆಯಲ್ಲಿ ಊರಿನ ಎಲ್ಲಾ ಮಹಿಳೆಯರು ಹಾಗೂ ಯುವತಿಯರು ಕಳಸದೊಂದಿಗೆ ಮಹರ್ಷಿ ವಾಲ್ಮೀಕಿ ಮೂರ್ತಿಯ ಪ್ರತಿಷ್ಠಾನದವರೆಗೂ ಮೆರವಣಿಗೆಯು ಮೂಲಕ ಪರಮ ಪೂಜ್ಯಶ್ರೀ ವರದಾನೇಶ್ವರ ಮಹಾಸ್ವಾಮಿಜಿ ಹಾಗೂ ರಾಜಾ ಕೃಷ್ಣಪ್ಪ ನಾಯಕರವರನು ಕರೆತಂದರು.
ಪರಮ ಪೂಜ್ಯ ಶ್ರೀ ವರದಾನೇಶ್ವರ ಮಹಾಸ್ವಾಮಿಗಳ ಹಾಗೂ ರಾಜಾ ಕೃಷ್ಣಪ್ಪ ನಾಯಕರವರ ನೇತೃತ್ವದಲ್ಲಿ ನಮ್ಮ ಮೇಲಿನ ಗಡ್ಡಿ ಗ್ರಾಮದಲ್ಲಿ ಇಂದು ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ ಬಂದಿರೋದು ಬಹಳ ಸಂತೋಷ ಎಂದು ಹುಣಸಗಿ ತಾಲೂಕು ವಾಲ್ಮೀಕಿ ನಾಯಕ ಸಂಘಟನೆ ಅಧ್ಯಕ್ಷರಾದ ಬಸನಗೌಡ, ಎನ್, ಮಾಲಿ ಪಾಟೀಲ್ ತಮ್ಮ ಭಾಷಣದಲ್ಲಿ ಸಂತೋಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪರಮ ಪೂಜ್ಯ ಶ್ರೀ ವರದಾನೇಶ್ವರ ಮಹಾಸ್ವಾಮಿಗಳು, ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ, ವಾಲ್ಮೀಕಿ ನಾಯಕ್ ಸಂಘ ಯಾದಗಿರಿ ಜಿಲ್ಲಾಧ್ಯಕ್ಷರಾದ ಸಿದ್ದನಗೌಡ ಪೊಲೀಸ್ ಪಾಟೀಲ್ ಕರೆಬಾವಿ, ಸುರಪುರ ಅಧ್ಯಕ್ಷರಾದ ಭೀಮಣ್ಣಗೌಡ ಯಮನೂರ, ಹುಣಸಗಿ ಅಧ್ಯಕ್ಷರಾದ ಬಸನಗೌಡ ಎಂ ಮಾಲಿ ಪಾಟೀಲ್, ವನವಾಸಿ ಕಲ್ಯಾಣ ರಾಜ್ಯ ಕಾರ್ಯದರ್ಶಿಗಳಾದ ಗಂಗಾಧರ ನಾಯಕ್ ತಿಂತಣಿ, ಯಾದಗಿರಿ ಜಿಲ್ಲಾ ಉಪಾಧ್ಯಕ್ಷರಾದ ರಾಮು ನಾಯಕ್ ಅರಳ್ಳಿ , ಸಮಾಜ ಚಿಂತಕರಾದ ಗುರುನಾಥ್ ಹುಲಿಕಲ್, ಮರಿಯಪ್ಪ ನಾಯಕ್ ಮಗದಂಪುರ, ಭೀಮನಗೌಡ ಮಾಲಿ ಪಾಟೀಲ್ ತೀರ್ಥ , ದೇವಿಂದ್ರಪ್ಪ ಬಳಚಕ್ರ, ರಮೇಶ್ ಬಿರಾದಾರ್ ಕರವೇ ಅಧ್ಯಕ್ಷರು ಹುಣಸಗಿ, ಗೌರವಾಧ್ಯಕ್ಷರು ವಾಲ್ಮೀಕಿ ನಾಯಕ ಸಂಘದ ಬಸವರಾಜ್ ಹವಾಲ್ದಾರ್ ಹಾಗೂ ನಿರೂಪಕರಾಗಿ ರಮೇಶ್ ಕೊಳೂರ್ ಗುರು ಹಿರಿಯರು ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಎಲ್ಲಾ ಗಣ್ಯರಿಗೂ ಹಾಗೂ ಮಾಧ್ಯಮ ಮಿತ್ರರಿಗೂ ಸನ್ಮಾನಿಸಿ ಗೌರವಿಸಲಾಯಿತು .
ವರದಿ. ಶಿವು ರಾಠೋಡ