
ಸ್ವೀಮ್ಮಿಂಗ ಪೂಲ್ ನಂತಾದ ರಸ್ತೆ – ಅಧಿಕಾರಿಗಳ ವಿರುದ್ಧ ಜನಾಕ್ರೋಶ.
ಗಜೇಂದ್ರಗಡ : ಸತ್ಯಮಿಥ್ಯ( ಜುಲೈ -26).
ಇಂದು ನಗರದಲ್ಲಿ ಸುರಿದ ಮಳೆಯಿಂದ ಗ್ರಾಮದೇವತೆ ಹಿರೇ ದುರ್ಗಾದೇವಿ ದೇವಸ್ಥಾನದ ಬಯಲುಜಾಗೆಗೆ ಹೊಂದಿಕೊಂಡಂತೆ ಕುಷ್ಟಗಿ ರಸ್ತೆಯಿಂದ ಪುರಸಭೆಗೆ ಹೋಗುವ ಮಾರ್ಗ ಅಕ್ಷರಸಹ ಸ್ವೀಮಿಂಗಪೂಲ್ ನಂತಾಗಿದೆ .
ಕಳೆದ ಕೆಲವು ತಿಂಗಳುಗಳ ಹಿಂದೆ ಜಿಲ್ಲಾಧಿಕಾರಿ ವೈಶಾಲಿ ಎಂ. ಎಲ್. ಜನಸ್ಪಂದನ ಕಾರ್ಯಕ್ರಮಕ್ಕೆ ನಗರದ ಪುರಸಭೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ದುರಸ್ಥಿಗೆ ಸಾರ್ವಜನಿಕರು ಮನವಿ ಸಲ್ಲಿಸಿದ್ದರು ಈ ವರೆಗೂ ಸರಿಪಡಿಸುವ ಗೋಜಿಗೆ ಪುರಸಭೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ.
ವಾಸ್ತವದಲ್ಲಿ ಪ್ರತಿದಿನ ಪುರಸಭೆಯ ಮುಖ್ಯಾಧಿಕಾರಿ ಸೇರಿದಂತೆ ಬಹುತೇಕ ಸಿಬ್ಬಂದಿಗಳು ಈ ರಸ್ತೆ ಮೂಲಕವೇ ತಮ್ಮ ಕಚೇರಿಗಳಿಗೆ ತೆರಳುತ್ತಾರೆ. ಅಲ್ಲದೇ ಊರಿನ ಗ್ರಾಮ ದೇವತೆ ದುರ್ಗಾದೇವಿ ದೇವಸ್ಥಾನಕ್ಕೆ ಈ ರಸ್ತೆ ಮೂಲಕವೇ ತೆರಳಬೇಕು. ಅಲ್ಲದೇ ಉಪನೊಂದಣಿ ಕಚೇರಿಗೆ ತೆರಳುವ ಮಾರ್ಗವು ಇದೆ ಆಗಿರುವುದರಿಂದ ಸುತ್ತಮುತ್ತಲಿನ ಬಹುತೇಕ ಗ್ರಾಮೀಣ ಪ್ರದೇಶದ ಜನ ಈ ಮಾರ್ಗದಲ್ಲಿ ಸಂಚಾರಿಸುತ್ತಾರೆ.
ಇಷ್ಟೆಲ್ಲ ವಹಿವಾಟು ಹೊಂದಿರುವ ಈ ರಸ್ತೆಗೆ ಜಿಲ್ಲಾಧಿಕಾರಿ ವೈಶಾಲಿ. ಎಂ. ಎಲ್ ರವರು ಬಂದಾಗ ಒಂದಿಷ್ಟು ಮಣ್ಣು ಹಾಕಿದ್ದು ಬಿಟ್ಟರೆ ಈ ರಸ್ತೆ ದುರಸ್ಥಿ ಮಾಡುವ ಗೋಜಿಗೆ ಹೋಗದೆ ಇರುವ ಪುರಸಭೆ ಅಧಿಕಾರಿಗಳಿಗೆ, ತಾಲೂಕಿನ ಜನಪ್ರತಿನಿದಿನಗಳಿಗೆ ಹಾಗೂ ದಿನ ಬೆಳಗಾದ್ರೆ ಸಾಕು ಬಿಳಿಬಟ್ಟೆ ಹಾಕಿಕೊಂಡು ರಾಜಕೀಯ ಮಾಡುವ 50 ಮಂದಿ ಲೀಡರ್ ಸಿಗುತ್ತಾರೆ ಇವರೆಲ್ಲರಿಗೂ ಸಾಮಾಜಿಕ ಪ್ರಜ್ಞೆ ಇಲ್ಲವೇ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಇದೊಂದೇ ರಸ್ತೆ ಅಲ್ಲ ಬಿ. ಎಸ್. ಎಸ್ ಪ್ರಥಮ ದರ್ಜೆ ಕಾಲೇಜಗೆ ತೆರಳುವ ಮಾರ್ಗವು ಹೀಗೆ ಆಗಿದೆ ಇನ್ನಾದರೂ ಅಧಿಕಾರಿಗಳು ರಸ್ತೆ ದುರಸ್ಥಿ ಮಾಡುತ್ತಾರೆಯೆ ಎಂದು ಕಾಯ್ದು ನೋಡೋಣ .
ಈ ಕುರಿತು ಕರ್ನಾಟಕ ಅಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷ ವಿನಾಯಕ ಜರತಾರಿ ಪತ್ರಿಕೆಯೊಂದಿಗೆ ಮಾತನಾಡುತ್ತ ಗಜೇಂದ್ರಗಡ ಹೃದಯ ಭಾಗದಲ್ಲಿ ಅದರಲ್ಲೂ ಸರ್ಕಾರಿ ಕಚೇರಿಗಳು ಶಾಲಾ ಕಾಲೇಜು, ನೋಂದಣಿ ಕಚೇರಿ, ಪುರಸಭೆ, ಗ್ರಂಥಾಲಯ, ದೇವಸ್ಥಾನಕ್ಕೆ ತೆರಳುವ ಮಾರ್ಗಮದ್ಯದಲ್ಲಿ ಸ್ವೀಮ್ಮಿಂಗ ಪೂಲ್ ಒದಗಿಸಿದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ವ್ಯಂಗ್ಯವಾಡಿದ್ದಾರೆ.
ವರದಿ : ಸುರೇಶ ಬಂಡಾರಿ.