ಸಾಯಿ ಮಂದಿರದ 6 ನೇ ವಾರ್ಷಿಕೋತ್ಸವ ಹಾಗೂ ಗುರು ಪೂರ್ಣಿಮಾ ಸಮಾರಂಭ ವೈಭವದಿಂದ ಜರುಗಿತು.
ಕೊಪ್ಪಳ: ಸತ್ಯಮಿಥ್ಯ ( ಜುಲೈ -22)
ಜಿಲ್ಲೆಯ ಕುಕನೂರು ಪಟ್ಟಣದ ಗವಿಶ್ರೀ ನಗರದಲ್ಲಿರುವ ಶಿರಡಿ ಸಾಯಿ ಬಾಬಾ ದೇವಸ್ಥಾನದ 6ನೇ ವಾರ್ಷಿಕೋತ್ಸವ ಕಾರ್ಯಕ್ರಮ ಜುಲೈ 21ರ ರವಿವಾರ ಗುರುಪೂರ್ಣಿಮಾದಂದು ಅತ್ಯಂತ ವಿಜ್ರಂಭಣೆಯಿಂದ ನೆರವೇರಿತು.
ಬೆಳಗ್ಗೆ 5.15 ಕ್ಕೆ ಸಾಯಿಬಾಬಾರಿಗೆ ಕಾಕಡಾರತಿ, 6 ಗಂಟೆಗೆ ಸುಪ್ರಭಾತ, 7ಗಂಟೆಗೆ ಸಾಯಿ ಬಾಬಾ ಮೂರ್ತಿಗೆ ಅಭೀಷೇಕ, 8ಗಂಟೆಗೆ ಸ್ತೋತ್ರ ಪಠಣ, 10ಗಂಟೆಗೆ ಸಾಯಿ ಬಾಬಾ ಭಕ್ತರಿಂದ ಗುರು ಪೂರ್ಣಿಮಾ ವಿಶಿಷ್ಟ, ಭಜನೆ, ಅಮ್ಮುಲ ಸಾಂಬಶಿವರಾವ್ ರಚಿಸಿದ ಅಮ್ಮುಲ ಶಿರಡಿ ಸಾಯಿ ತತ್ವಭೋಧಾಮೃತಂ ಪುಸ್ತಕಗಳಿಂದ ಸತ್ಸಂಗ ಪ್ರಸಂಗಗಳು ನೆರವೇರಿದವು.
ಮಧ್ಯಾಹ್ನ 12 ಗಂಟೆಗೆ ಕಾಕಡಾರತಿ, 1 ಗಂಟೆಯಿಂದ ಪ್ರಸಾದ ವಿತರಣೆ, ಸಂಜೆ 6.15ಕ್ಕೆ ಆರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡವು ಎಂದು ಶಿಕ್ಷಕರಾದ ಯಲ್ಲಪ್ಪ ಹಳ್ಳದ ತಿಳಿಸಿದರು.
ಇಲ್ಲಿ ವಿಶೇಷವಾಗಿ ಶ್ರೀ ಶಿರಡಿ ಸಾಯಿ ಮಂದಿರದ ಸಮಿತಿಯ ವತಿಯಿಂದ ವಿಶೇಷವಾದ ಉದ್ಯಾನವನ ನಿರ್ಮಾಣ ಮಾಡಿದ್ದು ವಿಶೇಷವಾಗಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಮತ್ತು ,ವೃದ್ಧರು ಕುಳಿತುಕೊಳ್ಳಲು ಅತ್ಯಂತ ಸುಸಜ್ಜಿತ ಆಸನದ ವ್ಯವಸ್ಥೆಯನ್ನು ಮಾಡಲಾಗಿದ್ದು ಸಸಿ ಗಿಡಗಳು ಮತ್ತು ಹುಲ್ಲು ಹಾಸಿಗೆಯ ನಿರ್ಮಾಣ ಮಾಡಲಾಗಿದೆ. ಚಿಕ್ಕ ಮಕ್ಕಳು ಆಟವಾಡಲು ಜಾರುವ ಬಂಡೆ ಮತ್ತು ಜೋಕಾಲಿ ಇನ್ನು ಅನೇಕ ರೀತಿಯ ಆಟಿಕೆಯ ಉಪಕರಣಗಳನ್ನು ವ್ಯವಸ್ಥೆಯನ್ನು ಮಾಡಲಾಗಿದ್ದು ಅತ್ಯಂತ ಸುಂದರವಾಗಿ ಉದ್ಯಾನವನವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ನಿನ್ನೆಯ ದಿನ ಬಿಟ್ಟು ಬಿಡದೆ ಜಿಟಿಜಿಟಿ ಮಳೆಯ ನಡುವೆಯೂ ಭಕ್ತಾದಿಗಳು ಬಂದು ದರ್ಶನವನ್ನು ಪಡೆದು ಪ್ರಸಾದ ಸೇವೆಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕರಾದ ಅಮೂಲ್ಯ ಸಾಂಬಶಿವರಾವ್,ದೇವಸ್ಥಾನದ ಸೇವಾ ಕಾರ್ಯಕರ್ತರಾದ ರವಿ ಜಕ್ಕಾ, ನೀಲಕಂಠಪ್ಪ ಬಣ್ಣದ ಬಾವಿ, ಪಕೀರಪ್ಪ ಭಜಂತ್ರಿ, ಬಸವರಾಜ ಬಡಿಗೇರ, ಮಲ್ಲಯ್ಯ ಮುಳುಗುಂದಮಠ, ನಾರಾಯಣಪ್ಪ ಮುಪ್ಪರಿ, ಶೇಖರಯ್ಯ ಅಂಗಡಿ, ನಾಗರಾಜ ಮ್ಯಾಳಿ, ಅಪ್ಪಣ್ಣ ಹಕಾರಿ, ಗಣೇಶ ರಣದೇ, ಶೇಖರ ಗೊರಲೆಕೊಪ್ಪ, ನಬಿ ಸಾಬ್ ಬಿನ್ನಾಳ, ರವಿ ವಕ್ಕಳದ, ಹಾಗೂ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳು ಮಹಿಳೆಯರು ಮಕ್ಕಳು ಇತರರು ಇದ್ದರು.
ವರದಿ:-ಚನ್ನಯ್ಯ ಹಿರೇಮಠ