ಸ್ಥಳೀಯ ಸುದ್ದಿಗಳು

ಸಂಗೊಳ್ಳಿರಾಯಣ್ಣನವರ ತತ್ವ ,ಆದರ್ಶ,ಶೌರ್ಯ, ಎಲ್ಲರೂ ಮೈಗೂಡಿಸಿಕೊಳ್ಳಬೇಕು:-ಶರಣಪ್ಪ ಕೊಪ್ಪದ

Share News

ಸಂಗೊಳ್ಳಿರಾಯಣ್ಣನವರ ತತ್ವ ,ಆದರ್ಶ,ಶೌರ್ಯ, ಎಲ್ಲರೂ ಮೈಗೂಡಿಸಿಕೊಳ್ಳಬೇಕು:-ಶರಣಪ್ಪ ಕೊಪ್ಪದ.

ಕುಕನೂರ : ಸತ್ಯಮಿಥ್ಯ (ಆಗಸ್ಟ್ -15).

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 225ನೇ ಜಯಂತೋತ್ಸವ ಆಚರಣೆ ಮತ್ತು ಸಂಗೊಳ್ಳಿ ರಾಯಣ್ಣ ವೃತ್ತ ಉದ್ಘಾಟನೆ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಹಾಲುಮತ ಸಮಾಜದ ಮತ್ತು ಎಲ್ಲಾ ಸರ್ವಧರ್ಮದ ಸಮಾಜದವರಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗದ ವತಿಯಿಂದ 225ನೇ ಜಯಂತೋತ್ಸವ ಕಾರ್ಯಕ್ರಮ ಆಚರಿಸಲಾಯಿತು .

ಕುಕನೂರು ಪಟ್ಟಣದ ರೈಲ್ವೆ ನಿಲ್ದಾಣದ ಸರ್ಕಲ್ ನಲ್ಲಿ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರ ಮೆರವಣಿಗೆಯನ್ನು ನೆರವೇರಿಸಲಾಯಿತು.

ಪೂಜೆಯನ್ನು ಸಮರ್ಪಿಸಿ ಸಮಾಜದ ಹಿರಿಯರಾದ ಶರಣಪ್ಪ ಕೊಪ್ಪದ ಶಿಕ್ಷಕರು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಯಲಬುರ್ಗಾ, ಶಿಕ್ಷಕರ ಸಂಘದ ಅಧ್ಯಕ್ಷರು ಮಾತನಾಡುತ್ತ.ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಮುಂಚೂಣಿಯ ನಾಯಕನೆಂದರೆ ಸಂಗೊಳ್ಳಿ ರಾಯಣ್ಣ 15 ಆಗಸ್ಟ್ 1798 ಜನಿಸಿದರು ಅವರನ್ನು 26 ಜನವರಿ 1831 ರಂದು ಗಲ್ಲಿಗೇರಿಸಲಾಯಿತು .ಒಬ್ಬ ಭಾರತೀಯ ಸೇನಾ ನಾಯಕ. ಬೆಳಗಾವಿಯ ಸಂಗೊಳ್ಳಿಯಲ್ಲಿ ಜನಿಸಿದ ಅವರು 19 ನೇ ಶತಮಾನದ ಆರಂಭದಲ್ಲಿ ಕಿತ್ತೂರು ಚೆನ್ನಮ್ಮ ರಾಜ್ಯವನ್ನು ಆಳುತ್ತಿದ್ದಾಗ ಕಿತ್ತೂರಿನ ರಾಜವಂಶದ ಮಿಲಿಟರಿಯಲ್ಲಿ ಹಿರಿಯ ಕಮಾಂಡರ್ ಆಗಿ ಸೇವೆ ಸಲ್ಲಿಸಿದರು.

ಏಪ್ರಿಲ್ 1830 ರಲ್ಲಿ, ರಾಯಣ್ಣನನ್ನು ಅಂತಿಮವಾಗಿ ಬ್ರಿಟಿಷರು ಶಿವಲಿಂಗಪ್ಪನೊಂದಿಗೆ ಸೆರೆಹಿಡಿದರು, ಅವರು ನ್ಯಾಯಾಲಯದಲ್ಲಿ ಆತನನ್ನು ವಿಚಾರಣೆಗೆ ಒಳಪಡಿಸಿದರು ಮತ್ತು ಮರಣದಂಡನೆ ವಿಧಿಸಿದರು. 26 ಜನವರಿ 1831 ರಂದು, 33 ವಯಸ್ಸಿನಲ್ಲಿ, ಅವರನ್ನು ಬ್ರಿಟಿಷ್ ಅಧಿಕಾರಿಗಳು ನಂದಗಡ ಗ್ರಾಮದ ಬಳಿಯ ಆಲದ ಮರಕ್ಕೆ ನೇಣು ಹಾಕುವ ಮೂಲಕ ಗಲ್ಲಿಗೇರಿಸಿದರು . ಅವರ ಮರಣದ ನಂತರ, ಅವರನ್ನು ನಂದಗಡಾ ಬಳಿ ಸಮಾಧಿ ಮಾಡಲಾಯಿತು. ರಾಯಣ್ಣನ ನಿಕಟವರ್ತಿ ಸಂಗೊಳ್ಳಿ ಬಿಚ್ಚುಗತ್ತಿ ಚನ್ನಬಸಪ್ಪ ಅವರ ಸಮಾಧಿಯ ಮೇಲೆ ಆಲದ ಸಸಿ ನೆಟ್ಟಿದ್ದು ಇಂದಿಗೂ ಉಳಿದುಕೊಂಡಿದೆ; ಅವರ ಸಮಾಧಿಯ ಬಳಿ ಸ್ತಂಭವನ್ನು ಸಹ ಸ್ಥಾಪಿಸಲಾಯಿತು . ಕರ್ನಾಟಕ ಸರ್ಕಾರವು 21 ನೇ ಶತಮಾನದಲ್ಲಿ ರಾಯಣ್ಣನ ಹೆಸರನ್ನು ಶಾಲೆ, ರಾಕ್ ಗಾರ್ಡನ್ ಮತ್ತು ಮ್ಯೂಸಿಯಂ ಎಂದು ಹೆಸರಿಸಿತು. ಸಂಗೊಳ್ಳಿರಾಯಣ್ಣ ನವರ ತತ್ವ ,ಆದರ್ಶ,ಶೌರ್ಯ, ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಮಾತನಾಡಿದರು.

ಸಮಾಜದ ಮುಖಂಡರಾದ ಮಲ್ಲಪ್ಪ ಚಳ್ಳಮರದ ಮಾತನಾಡುತ್ತಾ ಸ್ವತಂತ್ರ ಹೋರಾಟಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಸ್ವತಂತ್ರವನ್ನು ತಂದು ಕೊಟ್ಟಂತಹ ಸಂಗೋಳ್ಳಿ ರಾಯಣ್ಣ ವೃತ್ತವನ್ನು ನಿರ್ಮಿಸಬೇಕಾದರೆ ಪಟ್ಟಣದ ಎಲ್ಲಾ ಸರ್ವಧರ್ಮದ ಸಹಕಾರ ಸೇವೆ ಇಂದ ಸಾಧ್ಯವಾಗಿದೆ ಆದ್ದರಿಂದ ಎಲ್ಲ ಸಮಾಜದ ಬಂದು ಬಾಂಧವರಿಗೂ ಧನ್ಯವಾದಗಳ ತಿಳಿಸಿದರು.

ಈ ಸಂದರ್ಭದಲ್ಲಿಉಮೇಶ ಬೆದವಟ್ಟಿ, ಮಂಜುನಾಥ ಕಡೆಮನಿ, ಕಳಕಪ್ಪ ಕಂಬಳಿ, ಮಹೇಶ ಗೌವರಾಳ, ಗಗನ ನೋಟಗಾರ, ಶೇಖಪ್ಪ ಕಂಬಳಿ, ಕಳಕಪ್ಪ ಕಂಬಳಿ, ಮುತ್ತು ಕವಲೂರ, ಭೀಮಣ್ಣ ಗುಡದಳ್ಳಿ, ಶೇಖಪ್ಪ ಶಿರೂರ, ಬಸಣ್ಣ ಜಂಗಲಿ, ಶಶಿ ಭಜಂತ್ರಿ, ಮಲ್ಲಪ್ಪ ಬಂಗಿ, ಶಿವಪ್ಪ ಕುರಿ, ಅಶೋಕ ಮಂಡಲಗೇರಿ, ಚಂದ್ರು ಬಂಗಿ, ಶೇಖಪ್ಪ ಶಿರೋರ, ರಾಮಣ್ಣ ಕಂಬಳಿ ಇತರರು ಇದ್ದರು.

ವರದಿ :ಚೆನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!