
ಬುಧವಾರ ನೀರಿಗಾಗಿ ಸಾವಳಗಿ ಬಂದ
ಸಾವಳಗಿ:ಸತ್ಯಮಿಥ್ಯ ( ಜೂಲೈ -09)
ಜಮಖಂಡಿ ತಾಲ್ಲೂಕಿನ ಸಾವಳಗಿ ಪಟ್ಟಣದ ಸಾರ್ವಜನಿಕರು ಹಾಗೂ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಪಕ್ಷಾತೀತವಾಗಿ ಬಂದ ಮಾಡಲು ನಿರ್ಧರಿಸಿದ್ದು, ಸಾವಳಗಿ ತುಂಗಳ ಏತ ನೀರಾವರಿ ಕಾಲುವೆಗಳಿಗೆ ಸರ್ಕಾರದ ಆದೇಶದಂತೆ ಈ ಭಾಗಕ್ಕೆ ಅಂದರೆ ಸಾವಳಗಿ ಕನ್ನೋಳ್ಳಿ ಗದ್ಯಾಳ ಕುರಗೋಡ ಮತ್ತು ತುಂಗಳ ರೈತಾಪಿ ಜನರು ಏತ ನೀರಾವರಿ ಯೋಜನೆಯಿಂದ ವಂಚಿತರಾಗಿದ್ದು ಈ ಅನ್ಯಾಯವನ್ನು ಪ್ರತಿಭಟಿಸಿ ಬುಧವಾರ ಜುಲೈ 10 ರಂದು ಬೆಳಗ್ಗೆ 9:30ಕ್ಕೆ ಸಾವಳಗಿ ಪಟ್ಟಣವನ್ನು ಬಂದ ಮಾಡುವ ಮೂಲಕ ಬೃಹತ್ತ ಪ್ರತಿಭಟನೆ ಹಮ್ಮಿಕೂಳ್ಳಲಾಗಿದೆ ಎಂದು ದಸಂಸ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಶಾಲಾ-ಕಾಲೇಜು ಬಂದ ಮಾಡಿ ರಸ್ತಾ ರೋಕೋ ಮಾಡುವ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೂಳ್ಳಲಾಗಿದೆ. ಇದಕ್ಕೆ ಎಲ್ಲಾ ಅಂಗಡಿ ಮಾಲಿಕರು ಸಹಕರಿಸಿಬೇಕು, ಸಾವಳಗಿಯ ಪಟ್ಟಣದ ಮತ್ತು ಸುತ್ತ ಮುತ್ತಲಿನ ಹಳ್ಳಿಗಳ ರೈತಾಪಿ ಜನರು ವಿವಿಧ ಸಂಘಟನೆಗಳು ಬಂದಗೆ ತಿರ್ಮಾಣ ಮಾಡಿದ್ದು ಈ ಪ್ರತಿಭಟನೆಯಲ್ಲಿ ಸಾವಳಗಿ ಹೋಬಳಿಯ ಎಲ್ಲಾ ಸುತ್ತಮುತ್ತಲಿನ ರೈತರು, ಪ್ರಗತಿಪರ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೇಂದು ವಿನಂತಿ ನೀರಿಗಾಗಿ ಇದೂಂದು ಬೃಹತ್ತ ಪ್ರತಿಭಟನೆ ಎಂದು ಬಿಜೆಪಿ ನಾಯಕ ಸುಜೀತಗೌಡ ಪಾಟೀಲ ಹೇಳಿದರು.
ಈ ಸಂಧರ್ಭದಲ್ಲಿ ಹಿರಿಯರಾದ ಕಲ್ಲಪ್ಪ ಗಿರಡ್ಡಿ ಸುಭಾಷ ಪಾಟೋಳಿ ಸತಗೌಡ ನ್ಯಾಮಗೌಡ ಅಭಯಕುಮಾರ ನಾಂದ್ರೇಕರ ಅರ್ಜುನ ದಳವಾಯಿ ಶಿವಾನಂದ ಪಾಟೀಲ ಬಸವರಾಜ್ ಮಾಳೀ ಬಸವರಾಜ ಪರಮಗೂಂಡ ತುಕಾರಾಮ ಬಾಪಕರ ನಿಂಗಪ್ಪ ಬಂಕೆನ್ನವರ ರಾಜು ಜಾಧವ ಬೀಮನಗೌಡ ಜನಗೌಡ ಶಂಕರಗೌಡ ಬಿರಾದಾರ ಚಿದಾನಂದ ಬಿರಾದಾರ್ ಜಗದೀಶ ವಜ್ರವಾಡ ಸೇರಿದಂತೆ ಪಕ್ಷಾತೀತವಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿಸಲಾಗಿದೆ.
ವರದಿ : ಸಚಿನ್ ಜಾದವ್.