ಶ್ರೀ ಅನ್ನದಾನ ಶಿವಯೋಗಿಗಳು ಸ್ವಾತಂತ್ರ ಪೂರ್ವದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದವರು: ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು

ಶ್ರೀ ಅನ್ನದಾನ ಶಿವಯೋಗಿಗಳು ಸ್ವಾತಂತ್ರ ಪೂರ್ವದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದವರು: ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು
ಗಜೇಂದ್ರಗಡ:ಸತ್ಯಮಿಥ್ಯ ( ಸೆ -05)
ಶ್ರೀ ಅನ್ನದಾನ ಶಿವಯೋಗಿಗಳು ಸ್ವಾತಂತ್ರ ಪೂರ್ವದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದವರು ಈ ಭಾಗದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಉಚಿತ ಪ್ರಸಾದ ಹಾಗೂ ಶಿಕ್ಷಣವನ್ನು ಕೊಟ್ಟಂತಹ ಮಹಾನ್ ಚೇತನ ಎಂದು ಪಟ್ಟಣದಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಅನ್ನದಾನ ಶಿವಯೋಗಿ ಮಾಹಾ ಸ್ವಾಮೀಜಿಗಳ 47ನೇ ವರ್ಷದ ಪುಣ್ಯ ಸ್ಮರಣೆ ಮೆರವಣಿಗೆಯಲ್ಲಿ ಶ್ರೀ ಮುಪ್ಪಿನ ಬಸವ ಲಿಂಗ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದಲ್ಲಿ ವೀರಶೈವ ಲಿಂಗಾಯಿತ ಸಮಾಜದಿಂದ ನಡೆದ ಅದ್ದೂರಿ ಮೆರಣಿಯಲ್ಲಿ ಪಾಲ್ಗೊಂಡ ಶ್ರೀಗಳು ನಂತರ ಮಾತನಾಡಿದ ಅವರು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಇಲ್ಲಿನ ಸುತ್ತಮುತ್ತಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೊಟ್ಟಂತಹ ಇತಿಹಾಸವಿದೆ ಉತ್ತರ ಕರ್ನಾಟಕದಲ್ಲಿ ಧಾರ್ಮಿಕ ಚಿಂತನೆ ನೀಡಿದ ಮಹಾನ್ ಚೇತನ ಶ್ರೀಗಳು ಸಂಚಾರದ ಮೂಲಕ ಏಳೆಂಟು ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಹಾಗೂ ಧಾರ್ಮಿಕ ಚಿಂತನೆಯನ್ನು ನೀಡಿದ ಮಹಾನ್ ಸ್ವಾಮೀಜಿಗಳು ಆದ್ದರಿಂದ ವೀರಶೈವ ಲಿಂಗಾಯತ ಸಮಾಜದಿಂದ ಹಮ್ಮಿಕೊಂಡಿರುವ ಈ ಮೆರವಣಿಗೆಯಿಂದ ನಾಡಿನಾದ್ಯಂತ ಶ್ರೀಗಳ ಪುಣ್ಯ ಸ್ಮರಣೆ ಆಗಬೇಕು ಎಂದು ಹೇಳಿದರು.
ನಗರದ ಕುಂಬಾರ ಓಣಿಯಿಂದ ಪ್ರಾರಂಭವಾದ ಮೆರವಣಿಗೆ ಬಸವೇಶ್ವರ ಸರ್ಕಲ್ ಭಜರಂಗದಳ ಸರ್ಕಲ್, ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯನ್ನು ಮಾಡಲಾಯಿತು.
ಅದ್ದೂರಿ ಮೆರವಣಿಗೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಸಿದ್ದಪ್ಪ ಬಂಡಿ, ಬಸವರಾಜ ಕೊಠಗಿ, ಪ್ರಬಣ್ಣ ಚವಡಿ, ಅಪ್ಪು ಮತ್ತಿಕಟ್ಟಿ, ಅಮರೇಶ ಗಾಣಿಗೇರ, ಶಿವಯ್ಯ ಚಕ್ಕಡಿಮಠ ಹಾಗೂ ಯುವಕರು, ಶ್ರೀ ಅನ್ನದಾನ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಎಲ್ಲ ಉಪನ್ಯಾಸಕರು ಸಿಬ್ಬಂದಿಗಳು ವಿದ್ಯಾರ್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು
ವರದಿ : ಸುರೇಶ ಬಂಡಾರಿ.