ಭಾರತೀಯ ಮೌಲ್ಯ,ಕಲೆ,ಸಂಸ್ಕೃತಿ ಮತ್ತು ಪರಂಪರೆಯನ್ನು ಯುವ ಪೀಳಿಗೆಗಳಲ್ಲಿ ಗಟ್ಟಿಗೊಳಿಸಿ :ಜಸ್ವಂತ್ ಜೈನ್
ಭಾರತೀಯ ಮೌಲ್ಯ,ಕಲೆ,ಸಂಸ್ಕೃತಿ ಮತ್ತು ಪರಂಪರೆಯನ್ನು ಯುವ ಪೀಳಿಗೆಗಳಲ್ಲಿ ಗಟ್ಟಿಗೊಳಿಸಿ :ಜಸ್ವಂತ್ ಜೈನ್
ಕುಕನೂರ: ಸತ್ಯಮಿಥ್ಯ (ಸ -01)
ಭಾರತೀಯ ಮೌಲ್ಯ ,ಸಂಸ್ಕೃತಿ ಹಾಗೂ ಪರಂಪರೆಯನ್ನು ಯುವ ಪೀಳಿಗೆಯಲ್ಲಿ ಗಟ್ಟಿಗೊಳಿಸಲು ಮತ್ತು ದೇಶದ ವಿವಿಧ ಕ್ಷೇತ್ರಗಳಲ್ಲಿ ನೇತೃತ್ವ ವಹಿಸಲು ಬೇಕಾಗಿರುವ ಆತ್ಮವಿಶ್ವಾಸವನ್ನು ರೂಪಿಸಿಕೊಳ್ಳಲು ಆಯೋಜಿಸುತ್ತಿರುವ ಅತಿ ದೊಡ್ಡ ಭಾರತ ವಿಕಾಸ ಸಂಗಮದ ಏಳನೇ ಭಾರತಿ ಸಂಸ್ಕೃತಿ ಉತ್ಸವದಲ್ಲಿ ಭಾರತದ ಸಂಸ್ಕೃತಿಯ ಪರಂಪರೆಯನ್ನು ಯುವ ಪೀಳಿಗೆಗಳಲ್ಲಿ ಗಟ್ಟಿಗೊಳಿಸಿ ಉಳಿಸಿ ಬೆಳೆಸಬೇಕಾಗಿದೆ ಎಂದು ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಸ್ವಂತ್ ಜೈನ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಶ್ರೀ ಕೊತ್ತಲ ಬಸವೇಶ್ವರ ಭಾರತಿ ಶಿಕ್ಷಣ ಸಮಿತಿ ಸೇಡಂ ವಿಕಾಸ ಅಕಾಡೆಮಿ ಕಲಬುರಗಿ ಕೊಪ್ಪಳ ಜಿಲ್ಲೆ ಭಾರತೀಯ ಸಂಸ್ಕೃತಿ ಉತ್ಸವ-07 ಕೊತ್ತಲ ಸ್ವರ್ಣ 2025 ಇವರುಗಳ ಸಂಯುಕ್ತ ಆಶ್ರಯದಲ್ಲಿ ಕುಕುನೂರು ತಾಲೂಕ ಮಟ್ಟದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಆಯೋಜನೆ ಮಾಡಲಾಗಿತ್ತು.
ಭಾರತದ ವಿಕಾಸ ಸಂಗಮ ಮೂಲಕ ಇಡೀ ದೇಶದಲ್ಲಿ ಸಂಚೋಲನ ಮೂಡಿಸಿರುವ ಭಾರತೀಯ ಸಂಸ್ಕೃತಿ ಉತ್ಸವ- 7 ಈ ಸಲ ಬರುವ 2025ರ ಜನವರಿ 29 ರಿಂದ ಫೆಬ್ರವರಿ 6 ರವರೆಗೆ 9 ದಿನಗಳ ಕಾಲ ಜಿಲ್ಲೆಯ ಸೇಡಂ ಪಟ್ಟಣದ ಹತ್ತಿರದ ಬೀರನಳ್ಳಿ ಸೀಮಾಂತರ ಪ್ರದೇಶದ ವಿಶಾಲವಾದ 240 ಎಕರೆ ಭೂಮಿಯಲ್ಲಿ ಐತಿಹಾಸಿಕವಾಗಿ ಕಾರ್ಯಕ್ರಮಗಳು ನಡೆಯಲಿದ್ದು ಸಿದ್ಧತೆಗಳು ಬರದಿಂದ ಸಾಗಿವೆ ಎಂದು ಭೂಸನೂರಮಠ ವಕೀಲರು ಮತ್ತು ಜಿಲ್ಲಾ ಸಂಚಾಲಕರು ವಿಕಾಸ ಅಕಾಡೆಮಿ, ಕೊಪ್ಪಳ ರವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರಭುರಾಜ ಕಲಬುರ್ಗಿ ವಕೀಲರು, ಜಿಲ್ಲಾ ಸಹ ಸಂಚಾಲಕರು ವಿಕಾಸ್ ಅಕಾಡೆಮಿ, ಕೊಪ್ಪಳ ರವರು ಪ್ರಾಸ್ತಾವಿಕ ನುಡಿಗಳನ್ನು ಆಡುತ್ತಾ ಏಳನೇ ಭಾರತೀಯ ಸಂಸ್ಕೃತಿ ಉತ್ಸವದ ನಿರ್ವಹಣಾ ಸಮಿತಿಯ ಮುಖ್ಯಸ್ಥರು ಹಾಗೂ ವಿಕಾಸ ಅಕಾಡೆಮಿ ಮುಖ್ಯಸ್ಥರಾಗಿರುವ ಮಾಜಿ ಸಂಸದ ಡಾ. ಬಸವರಾಜ ಪಾಟೀಲ್ ಕೊಂಡು ಅನುಪಸ್ಥಿತಿಯಲ್ಲಿ, ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಆಶ್ರಯದಲ್ಲಿ ನಡೆಯುವ ಏಳನೇ ಭಾರತೀಯ ಸಂಸ್ಕೃತಿ ಉತ್ಸವ ಸೇಡಂನಲ್ಲಿ ನಡೆಸುವ ಕುರಿತಾಗಿ ಹತ್ತು ವರ್ಷಗಳ ಹಿಂದೆ ನಿರ್ಧರಿಸಲಾಗಿದೆ. 15 ವರ್ಷಗಳ ಹಿಂದೆ ಯಾರೂ ನಿರೀಕ್ಷಿಸದ ಮಟ್ಟಿಗೆ ಯಶಸ್ವಿಯಾಗಿ ನಡೆದ ಕಲಬುರ್ಗಿ ಕಂಪುಗಿಂತ ಈ ಉತ್ಸವ ಮತ್ತಷ್ಟು ಪರಿಣಾಮಕಾರಿಯಾಗಿ ಹಾಗೂ ಬಹುಪಯೋಗವಾಗಲಿದೆ. ಪ್ರಕೃತಿಯಿಂದ ಸಂಸ್ಕೃತಿಯೆಡೆಗೆ ಪೋಷವಾಕ್ಯದಡಿ ನಡೆಯಲಿದೆ. ಒಟ್ಟಾರೆ ಇಡೀ ಭಾರತ ದೇಶದಲ್ಲಿ ಈ ಉತ್ಸವ ಸಂಚಲನ ಹಾಗೂ ಹೊಸ ಪರಿವರ್ತನೆಗೆ ನಾಂದಿ ಹಾಡಲಿದೆ . ಸಂಪೂರ್ಣವಾಗಿ ಪ್ರಕೃತಿ ಆರಾಧಕರಾಗಿದ್ದ ಪರಮಪೂಜ್ಯ ಸಿದ್ದೇಶ್ವರ ಶ್ರೀಗಳಿಗೆ ಸಮರ್ಪಣೆ ಯಾಗಲಿದೆ. ಸಾವಯವ ಕೃಷಿಯ ಕನ್ನಡ ನಾಡಿನ ಹರಿಕಾರ ಸ್ವರ್ಗಿಯ ಎಲ್ ನಾರಾಯಣ, ಡಾ .ಎಸ್.ಎ. ಪಾಟೀಲ್ ಹಾಗೂ ಸ್ವದೇಶಿ ಚಳುವಳಿಯ ಮೇರು ವ್ಯಕ್ತಿತ್ವ ಹೊಂದಿದ ರಾಜು ದೀಕ್ಷಿತ್ ಮುಂತಾದ ಶ್ರೇಷ್ಠರಿಗೆ ಕಾರ್ಯಕ್ರಮ ಸಮರ್ಪಣೆಯಾಗಲಿದೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ವೆಂಕಣ್ಣ ಯರಾಸಿ ಪ್ರಗತಿಪರ ರೈತರು ಮತ್ತು ಸಂಗಮೇಶ್ ಗುತ್ತಿ ಯುವ ಮುಖಂಡರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಮಧುಸೂಧನ್, ಸಮಾಜ ಸೇವಕರಾದ ಅಂದಪ್ಪ ಜವಳಿ, ಬಸವರಾಜ್ ಮೇಟಿ ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಸುಭಾಸ ಮಾದನೂರು, ಮಂಜುನಾಥ ನಾಡಗೌಡ್ರು, ಮಯೂರ ತಳವಾರ, ಮಹೇಶ್ವರಿ ಸಾವಳಗಿಮಠ, ರಾಘವೇಂದ್ರ ಕೆರೂರು, ಬಸವರಾಜ್ ಗೊಂದಿ, ಪರಮೇಶ್ವರ್ ಪತ್ತಾರ್, ಬಸವರಾಜ್ ಅಡಿವೆಪ್ಪನವರ್ ಇತರರು ಇದ್ದರು.
ವರದಿ : ಚನ್ನಯ್ಯ ಹಿರೇಮಠ.