
ಸೈಬರ್ ಅಪರಾಧಗಳ ತಡೆಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ “ಸೈಬರ್ ರಕ್ಷಕ್’ ಎಂಬ ಉಪಕ್ರಮ ಪ್ರಾರಂಭ: ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ.
ಗದಗ: ಸತ್ಯಮಿಥ್ಯ (ಜೂ-30)
ಭಾರತದಾದ್ಯಂತ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು “ಸೈಬರ್ ರಕ್ಷಕ್’ ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಮಾಹಿತಿ ನೀಡಿದರು.
ಮುಂದುವರೆದು ಮಾತನಾಡಿ ಈ ಉಪಕ್ರಮವು ಸೈಬರ್ ಅಪರಾಧಗಳ ಕುರಿತು ಸುಲಭವಾಗಿ ಅರ್ಥವಾಗುವ ಮಾಹಿತಿಯುಕ್ತ ವಿಷಯಗಳು. ನೈಜ ಜೀವನದ ಪ್ರಕರಣ ಅಧ್ಯಯನಗಳು ಹಾಗೂ ತಡೆಗಟ್ಟುವಿಕೆಗೆ ಅಗತ್ಯವಾದ ಪ್ರಾಯೋಗಿಕ ಕ್ರಮಗಳನ್ನು ಒಳಗೊಂಡಿದೆ. ಫಿಶಿಂಗ್ನಿಂದ ಆರಂಭಿಸಿ, ಆನ್ಲೈನ್ ವಂಚನೆ, ಎಐ ಆಧಾರಿತ ಡೀಪ್ಫೇಕ್ಗಳು ಮತ್ತು ಆರ್ಥಿಕ ವಂಚನೆಗಳಂತಹ ವಿವಿಧ ಸೈಬರ್ ಅಪಾಯಗಳನ್ನು ಪರಿಚಯಿಸುವ ಮೂಲಕ ಪ್ರತಿಯೊಬ್ಬರೂ ಆನ್ಲೈನ್ನಲ್ಲಿ ಸುರಕ್ಷಿತವಾಗಿರಲು ಅಗತ್ಯವಾದ ಜ್ಞಾನವನ್ನು ಪಡೆಯುವುದು ಈ ಉಪಕ್ರಮದ ಉದ್ದೇಶವಾಗಿರುತ್ತದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸೈಬರ್ ಭದ್ರತಾ ತಜ್ಞರ ಅಮೂಲ್ಯವಾದ ಮಾಹಿತಿಯನ್ನು ಒಳಗೊಂಡಿರುವ ಈ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ “ಸೈಬರ್ ರಕ್ಷಕ್” ಅಧಿಕೃತ ಚಾನಲ್ಗಳನ್ನು ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಾಪ್, ಯೂಟ್ಯೂಬ್ ಮತ್ತು ಎಕ್ಸ್ ನಂತಹ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಾರಂಭಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಅಂತ ಹೇಳಿದ್ದಾರೆ.
ವರದಿ:ಮುತ್ತು ಗೋಸಲ.