ಮೌಲ್ಯಯುತ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿ : 2007-08ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನ ಸಮಾರಂಭ.

ಮೌಲ್ಯಯುತ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿ : 2007-08ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನ ಸಮಾರಂಭ.
ನರೇಗಲ್ಲ :ಸತ್ಯಮಿಥ್ಯ (ಆ-18)
ಶೈಕ್ಷಣಿಕ ಹಂತದಲ್ಲಿ ಮಕ್ಕಳಿಗೆ ನೈತಿಕತೆ, ಮೌಲ್ಯಯುತ ಶಿಕ್ಷಣ ನೀಡಿ ಮಕ್ಕಳನ್ನು ಸಂಸ್ಕಾರಯುತ ಜೀವನದತದ್ತ ಕರೆತರುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ವ್ಹಿ. ವ್ಹಿ. ಅಣ್ಣಿಗೇರಿ ಹೇಳಿದರು.
ನರೇಗಲ್ಲ ಮಜರೆ ಕೋಡಿಕೊಪ್ಪದ ಸರಕಾರಿ ಹಿರಿಯ ಪ್ರಾತಮಿಕ ಶಾಲೆಯ 2007-08ನೇ ಸಾಲಿನ ವಿದ್ಯಾರ್ಥಿಗಳ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಅಕ್ಷರಬ್ಯಾಸದ ಗುರು ಪರಂಪರೆಯಲ್ಲಿ ಶ್ರದ್ದೆಯಿಂದ ಕಲಿತು ಇಂದಿಗೂ ಕಲಿಸಿದ ಗುರುಗಳು, ಗುರುಮಾತೆಯರನ್ನು ಸ್ಮರಿಸುವ ಕಾರ್ಯ ಶ್ಲಾಘನೀಯವಾಗಿದೆ. ಇಲ್ಲಿನ ಹಳೆಯ ವಿದ್ಯಾರ್ಥಿಗಳು ಸಂಸ್ಕಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂಬುದಕ್ಕೆ ಇಂದಿನ ಸಮಾರಂಭವೇ ಸಾಕ್ಷಿಯಾಗಿದೆ. ಈ ನೆಪದಲ್ಲಿ ಹಿಂದಿನ ಎಲ್ಲ ಗುರುಗಳನ್ನು ಒಂದೇ ವೇದಿಕೆಯ ಮೇಲೆ ಕಾಣುವ ಸೌಭಾಗ್ಯ ಎಲ್ಲರಿಗೂ ದೊರಕಿತು. ನಮಗೆ ಅತ್ಯಂತ ಸಂತೋಷ ನೀಡಿದ ಸಮಾರಂಭವಿದು. ಶಿಕ್ಷಕರ ಕೈಯಲ್ಲಿ ಅಕ್ಷರ ಕಲಿತು ಬದುಕು ರೂಪಿಸಿಕೊಂಡವರೆಲ್ಲರೂ ಇಂತಹ ಸಮಾರಂಭಗಳನ್ನು ಏರ್ಪಡಿಸಿ ಗುರುವಿನ ಋಣ ತೀರಿಸುವ ತಮ್ಮ ಈ ಕಾರ್ಯ ಶಿಕ್ಷಕರಿಗೆ ಸಂತೋಷವನ್ನುಂಟು ಮಾಡಿದೆ ಎಂದರು.
ಸನ್ಮಾನ ಸ್ವಿಕರಿಸಿ ಮಾತನಾಡಿದ ಇನ್ನೊರ್ವ ಶಿಕ್ಷಕ ಎಮ್. ಎಸ್. ಪಾಟೀಲ ಮಾತನಾಡಿ ಈ ವಿದ್ಯಾರ್ಥಿಗಳು ನೆರವೇರಿಸುತ್ತಿರುವ ಗುರುವಂದನಾ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ. ಕಲಿತ ವಿದ್ಯಾ ಮಂದಿರ, ಕಲಿಸಿದ ಗುರುಗಳನ್ನು ಮರೆಯದೆ ಅವರು ಇಂತಹ ಅಭೂತಪೂರ್ವ ಕಾರ್ಯ ನೆರವೇರಿಸಿದ್ದಕ್ಕಾಗಿ ನಾನು ಅವರೆಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಪಾಟೀಲ ಹೇಳಿದರು.
ಹಳೆಯ ವಿದ್ಯಾರ್ಥಿ ನಾಗನಗೌಡ ನಾಡಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮನ್ನು ಹೆತ್ತ ತಂದೆ-ತಾಯಿಗಳು ನಮ್ಮ ಮೊದಲನೆ ತಂದೆ-ತಾಯಿಗಳು. ಆದರೆ ನಮಗೆ ಶಿಕ್ಷಣವನ್ನು ನೀಡಿ, ತಮ್ಮ ಮಕ್ಕಳಂತೆ ನಮ್ಮನ್ನು ಕಂಡು ನಮಗೆ ಬದುಕಿನ ಪಾಠ ಹೇಳಿಕೊಡುವ ಪ್ರತಿ ಗುರುವೂ ನಮಗೆ ಎರಡನೆ ತಂದೆ-ತಾಯಿ ಇದ್ದಂತೆ. ಅವರ ಪೂಜೆಯನ್ನು ಗುರುವಂದನೆಯ ಮೂಲಕ ಮಾಡುತ್ತಿರುವ ನಾವುಗಳೇ ನಿಜಕ್ಕೂ ಧನ್ಯರು ಎಂದು ತಿಳಿಸಿದರು.
ಅತಿಥಿಗಳಾಗಿ ನಿವೃತ್ತ ಶಿಕ್ಷಕಿ ಎ. ಐ ರಾಂಪೂರ, ಎಸ್. ಬಿ. ಕೊಟ್ರಶೆಟ್ಟಿ, ಎ. ಜಿ. ಕಂದಾರಿ ಮಾತನಾಡಿದರು. ಮುಖ್ಯೋಪಾದ್ಯಾಯ ಎಸ್. ಎ. ಪ್ರಭುಸ್ವಾಮಿಮಠ ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿ ಭೀಮಸಿ ಕುರಿ, ಮಂಜುನಾಥ ಚಿಕ್ಕೊಪ್ಪದ, ಹುಚ್ಚಿರೇಶ ಕುಂಬಾರ, ಅಶ್ವಿನಿ ಹೆಗಡೆ, ರಾಜೇಶ್ವರಿ ಜೂಚನಿ, ಅನಿತಾ ಅರಹುಣಸಿ ಲಕ್ಷ್ಮಿ ರಾಠೋಡ, ಹುಸೇನಬಿ ನಿಶಾನದಾರ, ವಿಜಯಲಕ್ಷ್ಮಿ ಅಣ್ಣಿಗೇರಿಮಠ, ಉಮೇಶ ಕುಂಬಾರ, ಸಂಗೀತಾ ಹಿರೇಂಠ, ಹನಮಂತ ನವಲಗುಂದ, ಕಲ್ಲಯ್ಯ ಗುರುವಡೆಯರ ಹಾಗೂ ಜೀವನಸಾಬ ಅಮರಗೋಳ ಉಪಸ್ತಿತರಿದ್ದರು. ಸಂತೋಷ್ ಉದ್ದಣ್ಣವರ ಸ್ವಾಗತಿಸಿದರು. ಕಳಕಪ್ಪ ಹಳ್ಳಿಕೇರಿ ನಿರೂಪಿಸಿದರು. ದೇವರಾಜ ಗಡಗಿ ವಂದಿಸಿದರು.
ವರದಿ: ಚನ್ನು. ಎಸ್.