ಸರ್ಕಾರಿ ಶಾಲೆಗಳ ಮೇಲೆ ಗ್ರಾಮಸ್ಥರ ಪ್ರೀತಿ ಇಂತಹ ಕಾರ್ಯಕ್ರಮ ಯಶಸ್ವಿಗೆ ಕಾರಣ :ಗೊಣ್ಣೆಪ್ಪ ಹಿರೇಮನಿ.
ಸರ್ಕಾರಿ ಶಾಲೆಗಳ ಮೇಲೆ ಗ್ರಾಮಸ್ಥರ ಪ್ರೀತಿ ಇಂತಹ ಕಾರ್ಯಕ್ರಮ ಯಶಸ್ವಿಗೆ ಕಾರಣ :ಗೊಣ್ಣೆಪ್ಪ ಹಿರೇಮನಿ.
ಮನ್ನಾಪೂರ : ಸತ್ಯಮಿಥ್ಯ ( ಸ -04 ).
ಗ್ರಾಮದಲ್ಲಿ ಹಬ್ಬದ ವಾತಾವರಣ. ಜಾತ್ರೆ ನಡೆಯುತ್ತಿದೆ ಎಂಬ ರೀತಿಯಲ್ಲಿ ಗ್ರಾಮದ ತುಂಬೆಲ್ಲ ಸಡಗರ ಸಂಭ್ರಮ ಕೂಡಿದೆ. ಮಕ್ಕಳ ಕಲಿಕೆಯ ಜೊತೆಗೆ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ . ಮನ್ನಾಪುರ ಗ್ರಾಮಸ್ಥರಿಗೆ ಸರಕಾರಿ ಶಾಲೆಯ ಮೇಲಿರುವ ಸಹಕಾರ ಮತ್ತು ಸಹಬಾಳ್ವೆಯಿಂದ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯವಾಗಿದೆ ಎಂದು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮನ್ನಾಪೂರ ದಲ್ಲಿ ಇಟಗಿ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ 2024- 25 ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮುಖ್ಯ ಅತಿಥಿಗಳಾಗಿ ಗೊಣ್ಣೆಪ್ಪ ಹಿರೇಮನಿ ಮುಖ್ಯೋಪಾಧ್ಯಾಯರು ಮಾತನಾಡಿದರು.
ಮಕ್ಕಳ ಪ್ರತಿಭಾ ಕಾರಂಜಿಗೆ ಚಾಲನೆಯನ್ನು ನೀಡಿ ಮಾತನಾಡಿದ ಸರಕಾರಿ ಶಿಕ್ಷಕರ ನೌಕರರ ಸಂಘದ ಅಧ್ಯಕ್ಷರಾದ ಮಹೇಶ ಸಬರದ ಇಂದಿನ ತಂತ್ರಜ್ಞಾನ ಯುಗದಲ್ಲಿ ಐತಿಹಾಸಿಕ ಗತ ವೈಭವಗಳನ್ನು ಸಾರುವ ಲಾಲಿ ಪದಗಳು, ಹಂತಿ ಪದಗಳು, ಬೀಸುವ ಪದಗಳು, ಭಜನೆ ಪದಗಳು, ಗೀಗಿ ಪದಗಳು, ಸೋಬಾನೆ ಪದಗಳು ಮರೀಚಿಕೆಯಾಗುತ್ತಿದ್ದು. ಈಗಿನ ಹಳ್ಳಿಗಳಲ್ಲಿ ಹಿರಿಯರು ತಮ್ಮಲ್ಲಿರುವ ಪ್ರತಿಭೆಗಳನ್ನು ಮಕ್ಕಳಿಗೆ ಉಳಿಸಿ ಬೆಳೆಸಲು ಪ್ರಯತ್ನಿಸಬೇಕು ನಾಡಿನ ಕೀರ್ತಿ ಉತ್ತರ ಉತ್ತರೇ ಬೆಳೆಯಬೇಕಿದೆ ಎಂದು ಮನ್ನಾಪುರ ಗ್ರಾಮಸ್ಥರಿಗೆ ಕಿವಿ ಮಾತನ್ನ ಹೇಳಿದರು .
ಸ್ಥಳೀಯ ಜನಪದ ನೃತ್ಯ ಮತ್ತು ಗಾಯನ, ಚಿತ್ರಕಲೆ, ಪ್ರಬಂಧ, ಚರ್ಚಾಸ್ಪರ್ಧೆ, ಏಕಾಪಾತ್ರಾಭಿನಯ, ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಅನೇಕ ಕಲಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಭಾ ಕಾರಂಜಿ ವ್ಯಾಪ್ತಿಯಲ್ಲಿ ಬರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಕಲಾಭಿರುಚಿಯ ಸಾಮರ್ಥ್ಯವನ್ನು ಸಾಬೀತು ಮಾಡಲು ಇದೊಂದು ಉತ್ತಮ ವೇದಿಕೆ’ ಆದ್ದರಿಂದ ನಿರ್ಣಾಯಕರು ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಪಕ್ಷಪಾತ ಮಾಡದೆ ನಿಷ್ಪಕ್ಷಪಾತವಾಗಿ ನಿರ್ಣಯ ಮಾಡಬೇಕು ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶರಣಪ್ಪ ಕೆಳಗಿನಮನಿ ಜ್ಯೋತಿಯನ್ನ ಉದ್ಘಾಟಿಸಿ ಮಾತನಾಡಿದರು.
ಪ್ರಾಸ್ತಾವಿಕ ನುಡಿಗಳನ್ನು ಸಿಆರ್‌ಪಿ ಖಾದರ್ ಭಾಷಾ ನೆರವೇರಿಸಿದರು.ನಿರೂಪಣೆ ರವಿಕುಮಾರ್ ಶಿಕ್ಷಕರು ನೆರವೇರಿಸಿದರು.
ವಂದನಾರ್ಪಣೆ ಅರುಣ್ ಕುಮಾರ್ ಶಿಕ್ಷಕರು ನೆರವೇರಿಸಿದರು.ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭಗೊಂಡವು.
ಈ ಸಂದರ್ಭದಲ್ಲಿಮನ್ನಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಮುಖ್ಯೋಪಾಧ್ಯಾಯರಾದ ವೀರಪ್ಪ ಚ್ಯಾಗರಿ,ಗ್ರಾ. ಪಂ. ಅಧ್ಯಕ್ಷರಾದ ನಿರ್ಮಲ ಮಹೇಶ್ ಹಿರೇಮನಿ, ಗ್ರಾ. ಪಂ. ಉಪಾಧ್ಯಕ್ಷರಾದ ಸುವರ್ಣ ಹೊನ್ನಪ್ಪ ಕುರಿ, ಸ್ಥಾಯಿ ಸಮಿತಿ ಅಧ್ಯಕ್ಷರು ಗ್ರಾ. ಪಂ. ದೇವಪ್ಪ ಗೂಳಪ್ಪ ಹರಿಜನ,ಗ್ರಾ.ಪಂ. ಸದಸ್ಯರಾದ ಲಲಿತಾದೇವಿ ವೀರಪ್ಪ ದಿಂಡೂರ, ಕಲಾವತಿ ಅಂದಪ್ಪ ಕಳ್ಳಿ, ಎಸ್. ಡಿ .ಎಂ. ಸಿ. ಅಧ್ಯಕ್ಷರಾದ ಚಾಂದಬಿ ಖಾತರಿಕಿ, ಉಪಾಧ್ಯಕ್ಷರಾದ ಕರಿಯಪ್ಪ ಗುಡಿಗೇರಿ, ಮಹೇಶ್ ಸಬರದ, ಮಾರುತೇಶ್ ಹಂಚಾಳಪ್ಪ ತಳವಾರ, ಬಸವರಾಜ ಮೇಟಿ, ಪೀರ್ ಸಾಬ್ ದಪೇದಾರ, ಪ್ರಭು ಶಿವನಗೌಡರ್, ಮಂಜುನಾಥ ತೆಗ್ಗಿನಮನಿ, ಮಹಾಂತೇಶ್ ಅಂಗಡಿ, ಮಹಾವೀರ್ ಕಲಬಾವಿ, ಶಿವಕುಮಾರ್ ಹುಚನೂರು, ಶಿವಕುಮಾರ್ ಹೊಂಬಾಳ, ಶರಣಪ್ಪ ರಾವಣಕಿ, ಅಶೋಕ ಮಾದನೂರು, ಹಾಗೂ ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರು ಶಿಕ್ಷಕಿಯರು, ಶಾಲಾ ಮಕ್ಕಳು ಗ್ರಾಮದ ಗುರುಹಿರಿಯರು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.