
ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಉಮೇಶ್
ಸಾವಳಗಿ:ಸತ್ಯಮಿಥ್ಯ ( ಜೂಲೈ -09)
ನಗರದ ಶ್ರೀ ಭವಾನಿ ಕೋ ಆಪ್ ಕ್ರೇಡಿಟ್ ಸೊಸಾಯಿಟಿ ನಿ ಇದರ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಉಮೇಶ್ ರಾಮಣ್ಣ ಜಾಧವ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ಉಮೇಶ್ ಜಾಧವ್ ಮಾತನಾಡಿ, ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಬ್ಯಾಂಕಿನ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತೇನೆ. ಗ್ರಾಹಕರಿಗೆ ಹಾಗೂ ಬ್ಯಾಂಕಿನ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಮರಾಠಾ ಸಮಾಜದ ಮುಖಂಡ ಸಂಜೀವ ಮೋಹಿತೆ ಮಾತನಾಡಿ, ಸದಸ್ಯರು ಮತ್ತು ಅಧ್ಯಕ್ಷರು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಿದರೆ ಸಾಕಷ್ಟು ಅಭಿವೃದ್ಧಿ ಸಾಧಿಸಿ ಮಾದರಿ ಸಹಕಾರಿ ಸಂಘ ರೂಪಿಸಬಹುದು. ಅಭಿವೃದ್ಧಿ ವಿಚಾರಗಳಿಗೆ ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಭವಾನಿ ಕೋ ಆಪ್ ಕ್ರೇಡಿಟ್ ಸೊಸಾಯಿಟಿ ನಿ, ಮುಖ್ಯ ಕಾರ್ಯನಿರ್ವಾಹಕ ಎಸ್. ಎಸ್. ಕೇಸ್ಕರ, ಹಿರಿಯರಾದ ಅರ್ಜುನ್ ಬಾಪಕರ, ಜೋತಿ ಜಾಧವ, ಧರ್ಮಜಿ ಆಲಗೂರ, ಸುಭಾಷ್ ಪಾಟೋಳ್ಳಿ, ಕಲ್ಲಪ್ಪ ಹುನ್ನೂರ, ರಾಜು ಮೋಹಿತೆ, ಸದಾಶಿವ .ಮಾ. ಜಾಧವ, ಮಾಯಪ್ಪ ಬಾಪಕರ, ಶಿವಾಜಿ ಹರಪಾಳೆ, ನಂದಕುಮಾರ್ ಕನೇರಿ, ಸೇರಿದಂತೆ ಅನೇಕ ಉಪಸ್ಥಿತರಿದ್ದರು.
ವರದಿ : ಸಚಿನ್ ಜಾದವ್.