
ಶಿಕ್ಷಣ ಕ್ಷೇತ್ರದ ಸಾಧನೆಗಾಗಿ “ಉತ್ತಮ ಶಿಕ್ಷಕ ರತ್ನ” ಪ್ರಶಸ್ತಿ ಪ್ರಧಾನ.
ಮಸ್ಕಿ : ಸತ್ಯಮಿಥ್ಯ (ಸೆ -15)
ಸಮಾಜವನ್ನು ತಿದ್ದುವಂತಹ ಕೆಲಸದಲ್ಲಿ ಪದವಿ ಪೂರ್ವ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಸಮಾಜದ ಕುರಿತಂತೆ ಸಮಗ್ರವಾದ ಬೋಧನೆಯ ಮೂಲಕ ಸಮಾಜಕ್ಕೆ ಮಾರಕವಾಗಿರುವ ಯಾವುದೇ ಕೃತ್ಯಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳೋದಂತೆ ಗಮನಹರಿಸಿ ಯುವ ಸಮುದಾಯವನ್ನು ದೇಶದ ಶಕ್ತಿಯನ್ನಾಗಿ ಮಾಡುವ ಮಹತ್ತರವಾದ ಕೆಲಸವು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ಕರ್ತವ್ಯವಾಗಿದೆ ಅಂತಹ ಕರ್ತವ್ಯವನ್ನು ನಿರ್ವಹಿಸಿದಾಗ ಮಾತ್ರವೇ ಅಂತಹ ಉಪನ್ಯಾಸಕರಿಗೆ ಪ್ರಶಸ್ತಿ ಹಾಗೂ ಗೌರವಗಳು ಅರಸಿ ಬರುತ್ತವೆ ಅಂತಹ ಉಪನ್ಯಾಸಕರಲ್ಲಿ ಪ್ರೆಸಿಡೆನ್ಸಿ ಪದವಿ ಕಾಲೇಜು ಮಸ್ಕಿ ಉಪನ್ಯಾಸಕರಾದ “ಮಹೇಶ್ ಮಸ್ಕಿ “ಅವರಿಗೆ “ಉತ್ತಮ ಶಿಕ್ಷಕ ರತ್ನ” ಪ್ರಶಸ್ತಿಯ ಗರಿ ಅರಸಿ ಬಂದಿದೆ.
ಜಿಲ್ಲಾ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ರಿ) ರಾಯಚೂರು ಇವರ ಸಹಯೋಗದೊಂದಿಗೆ.ಮಸ್ಕಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರ ಸಂಘದ 4ನೇ ವರ್ಷದ ಶಿಕ್ಷಕರ ದಿನಾಚರಣೆ ಮತ್ತು ತಾಲೂಕ ಮಟ್ಟದ ಉತ್ತಮ ಶಿಕ್ಷಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಿಕ್ಷಕ ವೃತ್ತಯಲ್ಲಿ ಉತ್ತಮ ಸೇವೆಯನ್ನು ಗುರುತಿಸಿ ಮಹೇಶ್ ಮಸ್ಕಿ “ಅವರಿಗೆ “ಶಿಕ್ಷಕ ರತ್ನ ಪ್ರಶಸ್ತಿ” ಪತ್ರವನ್ನು ಸ -17 ರಂದು ನೀಡಿ ಸನ್ಮಾನಿಸುತಿದ್ದಾರೆ.
ವರದಿ : ಮುತ್ತು ಗೋಸಲ