ಸ್ಥಳೀಯ ಸುದ್ದಿಗಳು

ವಿಕಾಸ್ ಸೌಹಾರ್ದ ಬ್ಯಾಂಕ್ 365 ದಿನ ಗ್ರಾಹಕರ ಸೇವೆಗಾಗಿ ಇರುವಂತಹ ಬ್ಯಾಂಕ್:ಡಾ.ಮಹಾದೇವಯ್ಯ ಮಹಾಸ್ವಾಮಿಗಳು.

Share News

ವಿಕಾಸ್ ಸೌಹಾರ್ದ ಬ್ಯಾಂಕ್ 365 ದಿನ ಗ್ರಾಹಕರ ಸೇವೆಗಾಗಿ ಇರುವಂತಹ ಬ್ಯಾಂಕ್:ಡಾ.ಮಹಾದೇವಯ್ಯ ಮಹಾಸ್ವಾಮಿಗಳು.

ಕೊಪ್ಪಳ:ಸತ್ಯಮಿಥ್ಯ (ಸ-16).

ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಹೊಸಪೇಟೆಯ ವಿಕಾಸ ಕೋ ಆಪರೇಟಿವ್ ನೂತನ ಬ್ಯಾಂಕ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಾ. ಮಹದೇವಯ್ಯ ಮಹಾಸ್ವಾಮಿಗಳು ವರ್ಷದ 365 ದಿನಗಳಲ್ಲಿ ಸತತವಾಗಿ ಕಾರ್ಯವನ್ನು ನಿರ್ವಹಿಸುವುದರೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುವ ಏಕೈಕ ಉನ್ನತವಾದ ವಿಕಾಸ್ ಸೌಹಾರ್ದ ಬ್ಯಾಂಕ್ ಇನ್ನೂ ಮುಂದಿನ ದಿನಮಾನಗಳಲ್ಲಿ ಎತ್ತರ ಮಟ್ಟಕ್ಕೆ ಬೆಳೆಯಲಿ ಎಂದು ಹೇಳಿದರು.

ಮಾಜಿ ಸಚಿವರಾದ ಹಾಲಪ್ಪ ಆಚಾರ್ ಮಾತನಾಡಿ ಹಣಕಾಸಿನ ವ್ಯವಸ್ಥೆಯಲ್ಲಿ ಅತ್ಯಂತ ಹಿರಿತನವನ್ನು ಸಾಧಿಸಿದಂತಹ ವಿಶ್ವನಾಥ್ ಹಿರೇಮಠ ಅವರ ನೇತ್ರತ್ವದಲ್ಲಿ ವಿಕಾಸ್ ಕೋ ಆಪರೇಟಿವ್ 18 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು. ನಮ್ಮ ಕುಕುನೂರು ಪಟ್ಟಣದ ಎಲ್ಲಾ ಗ್ರಾಮಗಳಿಗೂ ಹಣಕಾಸಿನ ಸಹಾಯ ,ಉತ್ತಮ ಸೇವೆಯನ್ನು ನೀಡುವುದರೊಂದಿಗೆ ವಿಕಾಸ ಕೋ ಆಪರೇಟಿವ್ ಬ್ಯಾಂಕು ಉತ್ತಮ ಠೇವಣಿ ಸಿಗುವದರೊಂದಿಗೆ ಕಾರ್ಯವನ್ನು ನಿರ್ವಹಿಸಿ ಯಶಸ್ವಿಯಾಗಲಿ ಎಂದು ಹೇಳಿದರು.

ನವೀನ ಗುಳುಗಣ್ಣನವರ ಬಿಜೆಪಿ ಜಿಲ್ಲಾ ಅಧ್ಯಕ್ಷರು ಮಾತನಾಡುತ್ತ ಕೃಷಿ ಚಟುವಟಿಕೆಗಾಗಿ ನಮ್ಮ ಬಿಜೆಪಿ ಕಾರ್ಯಕರ್ತನೊಬ್ಬನಿಗೆ 5 ಲಕ್ಷ ವರೆಗೂ ಸಾಲ ಸೌಲಭ್ಯವನ್ನು ಈಗಾಗಲೇ ನೀಡಿದ್ದು ಸಾವಲಂಬನೆಯ ಬದುಕು ಕಟ್ಟಿಕೊಳ್ಳಲು ವಿಕಾಸ ಕೋ-ಆಪರೇಟಿವ್ ಬ್ಯಾಂಕ್ ಸಹಕಾರಿಯಾಗಿದ್ದು. ಮಹಿಳೆಯರಿಗೆ ಮತ್ತು ರೈತರ ಕೃಷಿ ಚಟುವಟಿಕೆಗಳಿಗೆ ಉದ್ಯೋಗಕ್ಕಾಗಿ ಅತ್ಯಂತ ಬಹುಪಯೋಗಿಯಾದ ವಿಕಾಸ್ ಕೋ ಆಪರೇಟಿವ್ ಬ್ಯಾಂಕ್ ಕಾರ್ಯ ಅತ್ಯಂತ ಶ್ಲಾಘನೀಯ ನಮ್ಮ ಎಲ್ಲಾ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ವಿಶ್ವನಾಥ ಹಿರೇಮಠ ವಿಕಾಸ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಮಾತನಾಡುತ್ತ 1979ರಲ್ಲಿ ವಿಕಾಸ್ ಯುವಕ ಮಂಡಲ ಎಂಬ ಸಮಾಜಮುಖಿ ಸಂಘಟನೆಯ ಮೂಲಕ ನಮ್ಮ ಶಾಖೆ ಪ್ರಾರಂಭವಾಗಿದ್ದು ತದನಂತರ ಸಮಾಜಮುಖಿಯ ಕಾರ್ಯಗಳನ್ನು ನೆರವೇರಿಸುತ್ತ 1997ರಲ್ಲಿ ವಿಕಾಸ್ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆಗೆ ಕಾರಣವಾಗಿತ್ತು. ನಮ್ಮ ವಿಕಾಸ್ ಸೌಹಾರ್ದ ಬ್ಯಾಂಕ್ ವರ್ಷದ 365 ದಿನಗಳು ಗ್ರಾಹಕರಿಗೆ ಸೇವೆಯನ್ನು ಸಲ್ಲಿಸುತ್ತಿದ್ದು. ನಮ್ಮ ವಿಕಾಸ್ ಪ್ರತ್ಯೇಕವಾದ ಯುಪಿಸಿ ಕೋಡ್ ಹೊಂದಿರುವ ಕೋಆಪರೇಟಿವ್ ಬ್ಯಾಂಕುಗಳಲ್ಲಿ ನಮ್ಮದು ಕೂಡ ಒಂದಾಗಿದೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಮೊಬೈಲ್ ಬ್ಯಾಂಕಿಂಗ್, ಡಿಜಿಟಲ್ ಬ್ಯಾಂಕಿಂಗ್, ಎಟಿಎಂ ಕಾರ್ಡುಗಳ ಸೇವೆಗಳ ಮುಖಾಂತರ ಕಾರ್ಯ ನಿರ್ವಹಿಸುತ್ತದೆ. ಸಾರ್ವಜನಿಕರು ಸಹಕರಿಸುವುದರೊಂದಿಗೆ ಬ್ಯಾಂಕಿನ ಸೌಲಭ್ಯಗಳನ್ನು ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಕಾಸ ಕೋ ಆಪರೇಟಿವ್ ಬ್ಯಾಂಕಿನ ಪ್ರಚಾರವನ್ನು ಸಿಬ್ಬಂದಿ ವರ್ಗದವರಿಂದ ಮೆರವಣಿಗೆಗಳೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಮಣ್ಣ ಬಜಂತ್ರಿ, ಭೀಮಸೇನ್ ತಾಸಿನ್, ರಮೇಶ್ ಪುರೋಹಿತ್ ನಿರ್ದೇಶಕರು, ದಿವಾಕರ್, ಅಕ್ಕಿ ಮಲ್ಲಿಕಾರ್ಜುನ್ ನಿರ್ದೇಶಕರು, ಪ್ರಸನ್ ಹಿರೇಮಠ ವ್ಯವಸ್ಥಾಪಕ ನಿರ್ದೇಶಕರು, ವಿಕಾಸ್ ಕಾರ್ಯನುಗುಣ ನಿರ್ದೇಶಕರು, ಬಸವರಾಜ್ ವ್ಯವಸ್ಥಾಪಕರು, ಗಂಗಾಧರ ಪತ್ತಾರ್ ನಿರ್ದೇಶಕರು, ಸಿಬ್ಬಂದಿ ವರ್ಗದವರು ಇತರರು ಇದ್ದರು.

ವರದಿ:ಚೆನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!