ರಸ್ತೆ ಅಪಘಾತ, ಯರೇಹಂಚಿನಾಳ ಪಿಡಿಒ ಅಡಿವೆಪ್ಪ ಸಾವು.!
ಕೊಪ್ಪಳದ/ಕುಕನೂರು:ಸತ್ಯಮಿಥ್ಯ (ಸ-17)
ಕುಕನೂರ ಬಳಿ ಇಂದು ಬೆಳ್ಳಂ ಬೆಳಿಗ್ಗೆ ರಸ್ತೆ ಅಪಘಾತದಲ್ಲಿ ಯರೇಹಂಚಿನಾಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅಡಿವೆಪ್ಪ ಯಡಿಯಾಪುರ ಇವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಮಂಗಳವಾರ ಬೆಳಿಗ್ಗೆ 8.30 ರ ಸುಮಾರಿಗೆ ಯೆರೇಹಂಚಿನಾಳ ಪಿ ಡಿ ಓ ಅಡಿವೆಪ್ಪ ಯಡಿಯಾಪುರ ಎಂಬುವವರು ಇಟಗಿಯಿಂದ ಕುಕನೂರು ಕಡೆ ಬೈಕ್ ನಲ್ಲಿ ಬರುತ್ತಿರುವಾಗ ಮಾರ್ಗಮದ್ಯದಲ್ಲಿ ಅಶೋಕ ಲೇಲ್ಯಾಂಡ್ ಮತ್ತು ಬೈಕ ನಡುವೆ ಅಪಘಾತ ಸಂಭವಿಸಿದ್ದರಿಂದ ಪಿಡಿಓ ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಹತ್ತಿರದ ಕುಕನೂರುಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆ ಗೆ ಕರೆದೋಯ್ಯಲಾಗಿತ್ತು, ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಯರೇಹಂಚಿನಾಳ ಗ್ರಾಮ ಪಂಚಾಯಿತಿ ಪಿಡಿಒ ಅಡಿವೆಪ್ಪ ಯಡಿಯಾಪುರ ಇವರು ಕೊನೆಗೆ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ವರದಿ : ಚನ್ನಯ್ಯ ಹಿರೇಮಠ.