
ಅಚ್ಚ ಕನ್ನಡದ ನಿರೂಪಕಿ ಅಪರ್ಣಾ ಇನ್ನಿಲ್ಲ.
ಅಪರ್ಣಾ ಅನಾರೋಗ್ಯದಿಂದ ಬಳಲುತ್ತಿದ್ದರು.
ಬೆಂಗಳೂರು – ಸತ್ಯಮಿಥ್ಯ ( ಜುಲೈ -12).
ನಿರರ್ಗಳ, ಸ್ಪಷ್ಟ ಕನ್ನಡದ ನಿರೂಪಣೆ ಮಾಡಿ ಕನ್ನಡಿಗರ ಮನ ಗೆದ್ದ, ಖ್ಯಾತ ನಿರೂಪಕಿ, ನಟಿ ಶ್ರೀಮತಿ ಅಪರ್ಣ ವಸ್ತಾರೆ ಅವರ ನಿಧನವು ಕಲಾ ಲೋಕಕ್ಕೆ ತುಂಬಲಾರದ ನಷ್ಟ.
ಅನಾರೋಗ್ಯದಿಂದ ಬಳಲುತ್ತಿದ್ದ ಅಪರ್ಣಾ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ನಿನ್ನೆ ಬನಶಂಕರಿಯಲ್ಲಿರುವ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಅಪರ್ಣಾ ಅವರು ಅಂಬರೀಶ್ ಅವರ ‘ಮಸಣದ ಹೂವು’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಇನ್ಸ್ಪೆಕ್ಟರ್ ವಿಕ್ರಂ ಚಿತ್ರ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಸೃಜನ್ ಲೋಕೇಶ್ ಜೊತೆ ಮಜಾ ಟಾಕೀಸ್ ನಲ್ಲಿ ಭಾಗವಹಿಸುವ ಮೂಲಕ ಕರ್ನಾಟಕ ಮನೆ ಮನೆಗಳಲ್ಲಿ ಮನ ಮನಗಳಲ್ಲಿ ಚಿರಸ್ತಾಯಿಯಾಗಿದ್ದಾರೆ.
ಟಿ. ಎನ್. ಸೀತಾರಾಮರವರ ಮೂಡಲಮನೆ, ಮುಕ್ತ ಧಾರಾವಾಹಿಗಳು ಇವರನ್ನು ಜನಪ್ರಿಯಗೊಳಿಸಿದ್ದವು.
ಅನೇಕ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಅಪರ್ಣಾ ಕನ್ನಡದಲ್ಲಿ ಮಾತನಾಡಿದ ಪರಿ ಅದ್ಭುತ. ಕನ್ನಡದಲ್ಲಿ ಸ್ವಚ್ಛ – ಅಚ್ಚುಕಟ್ಟಾಗಿ ಮಾತನಾಡುವಲ್ಲಿ ಅಪರ್ಣಾ ಜನಪ್ರಿಯರಾಗಿದ್ದರು.
ನಿರೂಪಕಿಯಾಗಿ, ನಟಿಯಾಗಿ ದಶಕಗಳಿಂದ ದುಡಿದ ಕನ್ನಡ ಬೆಳೆಸಿ ಉಳಿಸುವಲ್ಲಿ ಅಪರ್ಣಾ ಪಾತ್ರ ಬವುಮುಖ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಹಾಗೂ ಹಿತೈಷಿ ವರ್ಗಕ್ಕೆ ನನ್ನ ಸಾಂತ್ವನಗಳು. ಭಗವಂತ ಅವರ ಅಪಾರ ಅಭಿಮಾನಿ ಬಳಗಕ್ಕೆ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ.
ಇವರ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ಸಾಹಿತಿಗಳು, ಕನ್ನಡ ಪರ ಹೋರಾಟಗಾರರು ಸಂತಾಪ ಸೂಚಿಸಿದ್ದಾರೆ.