ಸಮಪಾಲು ಸಮಬಾಳು ಎನ್ನುವ ಬಿಜೆಪಿ ಕೇಂದ್ರದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ನರಿಗೆ ಮಂತ್ರಿಸ್ಥಾನ ನೀಡಲಿ – ಡಿಕೆಶಿ.
ವಿಜಯೇಂದ್ರ ಸಮಪಾಲು ಸಮಬಾಳು ಹೇಳಿಕೆಗೆ ತಿರುಗೇಟು ನೀಡಿದ - ಡಿಸಿಎಂ ಡಿಕೆ ಶಿವಕುಮಾರ್.

ಸಮಪಾಲು ಸಮಬಾಳು ಎನ್ನುವ ಬಿಜೆಪಿ ಕೇಂದ್ರದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ನರಿಗೆ ಮಂತ್ರಿಸ್ಥಾನ ನೀಡಲಿ – ಡಿಕೆಶಿ.
ವಿಜಯೇಂದ್ರ ಸಮಪಾಲು ಸಮಬಾಳು ಹೇಳಿಕೆಗೆ ತಿರುಗೇಟು ನೀಡಿದ – ಡಿಸಿಎಂ ಡಿಕೆ ಶಿವಕುಮಾರ್.
ಗದಗ:ಸತ್ಯಮಿಥ್ಯ (ಮಾ-16).
ನಮ್ಮ ದೇಶದಲ್ಲಿ ಹಿಂದೂ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ ಹೀಗೆ ಹಲವು ಜಾತಿಯ ಜನರಿದ್ದಾರೆ. ನಾವು ಅಲ್ಪ ಸಂಖ್ಯಾತರಿಗೆ ಹಿಂದುಳಿದವರ ಜೀವನ ಮಟ್ಟ ಏರಿಸುವ ಚಿಂತೆ ಮಾಡುತ್ತೇವೆ. ಸಮಬಾಳು ಸಮಪಾಲು ಎನ್ನುವ ಬಿಜೆಪಿಗರು ಇಬ್ಬರು ಕ್ರಿಶ್ಚಿಯನ್, ಮೂರು ಜನ ಮುಸ್ಲಿಂರನ್ನು ಕೇಂದ್ರದಲ್ಲಿ ಮಂತ್ರಿ ಮಾಡಲಿ ನೋಡೋಣ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನುಡಿದರು.
ಇಂದು ಗದಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆ.ಎಚ್. ಪಾಟೀಲ್ ಶತಮಾನೋತ್ಸವ ಕಾರ್ಯಕ್ರಮವನ್ನುಉದ್ದೇಶಿಸಿ ಮಾತನಾಡುತ್ತ. ವಿಜಯೇಂದ್ರಗೆ ಸಮ ಬಾಳು, ಸಮ ಪಾಲು ಎಂದು ಮಾತನಾಡುವುದು ಯೋಗ್ಯತೆ ಇಲ್ಲ ಎಂದರು.
ಸರ್ವರಿಗೆ ಸಮ ಬಾಳು, ಸರ್ವರಿಗೂ ಸಮಪಾಲು ಎಂಬ ತತ್ವಕ್ಕೆ ಬಿಜೆಪಿ ಬದ್ಧ ಇದೆ. ಆದರೆ ಕಾಂಗ್ರೆಸ್ ಮುಸ್ಲಿಂ ಬಹುಪಾಲು, ಇತರರಿಗೆ ಅಲ್ಪ ಪಾಲು ಎಂಬ ನೀತಿ ಬಗ್ಗೆ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ ನೀಡಿದರು.
ವಿಜಯೇಂದ್ರ ಮೊದಲು ಕುವೆಂಪು ಬರೆದ ನಾಡಗೀತೆ ಸರಿಯಾಗಿ ಓದಲಿ. ಯಾರು ಸೇರಿದ್ರೆ ಶಾಂತಿ ತೋಟ ಆಗುತ್ತದೆ ಎಂಬುದನ್ನು ಸರಿಯಾಗಿ ಓದಲಿ. ಈಗ ಅಧ್ಯಕ್ಷರಾಗಿದ್ದಾರೆ, ಅವರ ಲೇವಲ್ ನಲ್ಲಿ ಇರಲಿ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಇಳಿಯುವ ಮೊದಲು ಶಕ್ತಿ ಪ್ರದರ್ಶನ ಕುರಿತು ಮಾತನಾಡಿದ ಅವರು, ಚರ್ಚೆ, ವಿವಿಧ ಅಭಿಪ್ರಾಯಗಳನ್ನು ಕೊಡುತ್ತಿದ್ದಾರೆ. ಎಲ್ಲಾ ಮಂತ್ರಿಗಳು ಎಲ್ಲಾ ವಿಧಾನಸಭೆ ಕ್ಷೇತ್ರಕ್ಕೆ ಹೋಗಿ ಕಾರ್ಯಕರ್ತರ ಸಭೆ ಮಾಡಿ ಎಂದು ಸೂಚನೆ ನೀಡಿದ್ದೇವೆ. ಆ ಕೆಲಸ ಮುಗಿಯಲಿ ಆ ಮೇಲೆ ಮಿಕ್ಕಿದ ಎಲ್ಲಾ ಯೋಚನೆ ಮಾಡುತ್ತೇವೆ. ನಮ್ಮ ಸರ್ಕಾರ ಅಧಿಕಾರವಹಿಸಿಕೊಂಡು ಎರಡು ವರ್ಷವಾಗಿದೆ ಆದ್ದರಿಂದ ಸಂಭ್ರಮಾಚರಣೆ ಮಾಡಲೇಬೇಕಾಗಿದೆ, ಮಾಡುತ್ತೇವೆ ಎಂದರು.
ವರದಿ : ಮುತ್ತು ಗೋಸಲ್.