ಅಂಧ ಪ್ರತಿಭೆಗೆ ಬೇಕಿದೆ ಸಾರ್ವಜನಿಕರ ಸಹಕಾರ : ಗುರುಮೂರ್ತಿ ಹಿರೇಮಠ ಅಭಿಪ್ರಾಯ.
ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮದ ಬಡ ದಲಿತ ಕುಟುಂಬದ ಅಂಧ ಯುವಕ ಗುಡುದಪ್ಪನ ಕತೆ.
ಕೊಪ್ಪಳ:ಸತ್ಯಮಿಥ್ಯ (ಸೆ -27).
ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಯುವಕ ಗುಡದಪ್ಪ ಅಂಧರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಪ್ಪಳ ಜಿಲ್ಲೆಯ ಕೀರ್ತಿಯನ್ನು ನಾಡಿನ ತುಂಬಾ ಪಸರಿಸುವಂತೆ ಮಾಡಿದ್ದಾನೆ.
ಬಡ ದಲಿತ ಕುಟುಂಬದ ಸಣ್ಣ ನಿಂಗಪ್ಪ,ಅಂಜನವ್ವ ದಂಪತಿಗೆ ನಾಲ್ಕು ಜನ ಮಕ್ಕಳಲ್ಲಿ ಕೊನೆಯ ಮಗನೇ ಗುಡದಪ್ಪ. ಅತ್ಯಂತ ಬಡತನದಲ್ಲಿ ಹುಟ್ಟಿದ ಗುಡದಪ್ಪ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಳಗೇರಿಯಲ್ಲಿಯೇ ಮುಗಿಸಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಮುಂಡಗೋಡದಲ್ಲಿ ಮುಗಿಸಿದನು.ನಂತರ ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷವನ್ನು ಯಲಬುರ್ಗಾ ಜೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾನೆ.
ಗುಡದಪ್ಪ ಅವರು ಜ್ಞಾನಪ್ರಜ್ಞ ಅಂಧರ ಸಂಸ್ಥೆಯ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ನೆರವೇರಿಸುತ್ತ ಈ ಸಂಸ್ಥೆಯ ಸಹಾಯದೊಂದಿಗೆ ಬೆಂಗಳೂರಿನ ಸಮರ್ಥನಂ ಕ್ಯಾಬಿ ಚೇರ್ಮನ್ ಮಹಾಂತೇಶ್ ಜೆ .ಕೆ ಇವರ ಸಹಾಯದೊಂದಿಗೆ ಮೊದಲು ಐಡಿಯಲ್ ಬೆಂಗಳೂರು, ಸೀಮಂತನಂ ಬೆಂಗಳೂರು, ಹೊಸಪೇಟೆ ಅಂದರ ಕ್ರಿಕೆಟ್ ಪಂದ್ಯಾವಳಿಯ ಮೂಲಕ ಪ್ರಥಮ ಬಹುಮಾನ ಗಿಟ್ಟಿಸಿಕೊಂಡಿದ್ದನು.
ಒಂದು ತಿಂಗಳು ಬೆಂಗಳೂರನಲ್ಲಿ ತರಬೇತಿ ಪಡೆದು ಕ್ರಿಕೆಟ್ ಆಡುವ ಪರಿಪೂರ್ಣ ಅನುಭವವನ್ನು ಪಡೆದುಕೊಂಡನು.ನಂತರದ ದಿನಗಳಲ್ಲಿ ಡಿಲ್ಲಿ ಸೀರೀಸ್ ಪಂದ್ಯಾವಳಿಯಲ್ಲಿ ರಾಜ್ಯ ತಂಡಗಳೊಂದಿಗೆ ಪಂದ್ಯಾವಳಿಯಲ್ಲಿ ಭಾಗವಹಿಸಿ ನಮ್ಮ ಭಾರತ ತಂಡದೊಂದಿಗೆ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಯಶಸ್ವಿಯಾಗಿದ್ದಾನೆ.
ನಂತರ ದುಬೈ ಸೀರೀಸ್ ನಲ್ಲಿ ಏರ್ಪಡಿಸಿದ ಶ್ರೀಲಂಕಾ ಪಾಕಿಸ್ತಾನ ಮತ್ತು ಇನ್ನೂ ಅನೇಕ ರಾಜ್ಯಗಳ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾರತ ತಂಡದೊಂದಿಗೆ ಇತನು ಭಾಗವಹಿಸುವ ಮೂಲಕ ಮೊದಲ ಸ್ಥಾನ ಗಿಟ್ಟಿಸಿಕೊಂಡಿತು.
ನಂತರ ಜುಲೈ 25, 07.24ರಂದು ಅಮೆರಿಕದಲ್ಲಿ ಏರ್ಪಡಿಸಿದ ಸಿರಿಜ್ 20-20 ಪಂದ್ಯಾವಳಿಗಳಲ್ಲಿ 10 ರಾಜ್ಯಗಳ ತಂಡಗಳು ಭಾಗವಹಿಸಿದ್ದು.
ಈ ಪಂದ್ಯಾವಳಿಯಲ್ಲಿಯು ಭಾರತ ತಂಡ ಮೊದಲ ಸ್ಥಾನಗಳಿಸಿತು. ಒಟ್ಟಾರೇ ನಾನು ನಾನು ಭಾಗವಹಿಸಿದ ಪಂದ್ಯಾವಳಿಗಳಲ್ಲಿ ನಮ್ಮ ತಂಡವೇ ಜಯಗಳಿಸಬೇಕು ಎನ್ನುವ ಛಲದಿಂದ ಮುನ್ನುಗ್ಗುತ್ತಿದ್ದೇವು ಎಂದು ಹೆಮ್ಮೆಯಿಂದ ಹೇಳಿಕೊಂಡನು.
ನನಗೆ ಇಷ್ಟೆಲ್ಲ ಪಂದ್ಯಾವಳಿಗಳಲ್ಲಿ ಜಯ ಸಿಗಬೇಕಾದರೇ ಸಮರ್ಥನ ಕ್ಯಾಬಿ ಚೇರ್ಮನ್ ಮಾಂತೇಶ್ ಜೆ.ಕೆ. ಬೆಂಗಳೂರು ಇವರ ಮಾರ್ಗದರ್ಶನ, ಸಹಾಯ ಸಹಕಾರದಿಂದ ಸಾಧ್ಯವಾಗಿದೆ ಎಂದು ಹೇಳಿಕೊಂಡನು.
ನಮ್ಮಂತಹ ಅಂಧ ಪ್ರತಿಭೆಗಳನ್ನು ಗುರುತಿಸುವಲ್ಲಿ ನಮ್ಮ ತಾಲೂಕಿನ ಎಸ್.ಎಂ.ಎಸ್. ಇಂಟರ್ಪ್ರೈಸಸ್ ಮಾಲಕರಾದ ಗುರುಮೂರ್ತಿ ಹಿರೇಮಠ ಗುರುತಿಸಿ ಸನ್ಮಾನವನ್ನ ನೆರವೇರಿಸುತ್ತಿರುವುದು ತುಂಬಾ ಸಂತೋಷವೆನಿಸುತ್ತದೆ ಹಾಗೂ ಇದೇ ನಮ್ಮಂಥ ಬಡಪ್ರತಿಭೆಗಳಿಗೆ ಸಾರ್ವಜನಿಕರ ಪ್ರೋತ್ಸಾಹ ಅತ್ಯಗತ್ಯ ಎಂದು ಹೇಳಿದರು.
ಈ ವೇಳೆ ಎಸ್ಎಮ್ಎಸ್ ಎಂಟರ್ ರ್ಪ್ರೈಸಸ್ ಮಾಲಕ ಗುರುಮೂರ್ತಿ ಹಿರೇಮಠ ಮಾತನಾಡಿ ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಒಂದು ಗುರಿ ಇರುತ್ತದೆ . ಮನುಷ್ಯನ ಅಂಧತ್ವ ಮುಖ್ಯವಲ್ಲ ಆಡುವ ಛಲ ಆತ್ಮವಿಶ್ವಾಸವಿರಬೇಕು,,,,
ಪ್ರತಿಯೊಬ್ಬ ಮನುಷ್ಯನು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯವಾಗಿರುತ್ತದೆ ಅಂತಹುದರಲ್ಲಿ ಅನೇಕ ರಾಜ್ಯಗಳ ತಂಡಗಳೊಂದಿಗೆ ವಿಜಯಶಾಲಿಯಾಗಿ ಪ್ರಥಮ ಬಹುಮಾನವನ್ನು ಗಿಟ್ಟಿಸಿದಂತಹ ಸಾಧಕರನ್ನು ಕರೆದು ಸನ್ಮಾನಿಸಿ ಸಹಕರಿಸಿದಾಗ ನಮ್ಮ ಕೊಪ್ಪಳ ಜಿಲ್ಲೆಯ ಕ್ರೀಡಾಪಟುಗಳಿಗೆ ಉತ್ತೇಜನ ಸಿಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಂತರ ಸಮಾಜಿಕ ಕಾರ್ಯಕರ್ತ ಲಕ್ಷ್ಮಣ್ ಕಾಳಿ ಮಾತನಾಡಿ ದಲಿತ ಬಡ ಕುಟುಂಬದಲ್ಲಿ ಜನಿಸಿದ ಯುವಕ ಗುಡದಪ್ಪ ಅಂಗವಿಕಲರಾದರು ಅನೇಕ ರಾಜ್ಯಗಳ ತಂಡಗಳೊಂದಿಗೆ ಆಡಿ ಸಾಧನೆ ಮಾಡಿರುವುದು ಮೆಚ್ಚಲೇ ಬೇಕಾದ ಸಂಗತಿ.
ಪಂದ್ಯಾವಳಿಗಳಲ್ಲಿ ಭಾಗವಹಿಸುವುದರೊಂದಿಗೆ ನಮ್ಮ ಕೊಪ್ಪಳ ಜಿಲ್ಲೆಯ ಕಿರ್ತಿಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದು ಶ್ಲಾಘನೀಯ ಇಂತಹ ಅತ್ಯುತ್ತಮ ಕ್ರೀಡಾಪಟುವಿಗೆ ನಮ್ಮೆಲ್ಲರ ಸಹಾಯ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಪ್ಪ ನೀಲಪ್ಪ ಅರಿಕೇರಿ, ಬಾಲಚಂದ್ರ ವೈ ಟೆಂಗುಂಟಿ, ರಾಜು ರಿಲಯನ್ಸ್, ಶಿವು ಅರಕೇರಿ, ಮೈಲಾರಿ, ಮಹಮ್ಮದ್ ಪೊಲೀಸ್ ಪಾಟೀಲ್, ಇತರರು ಇದ್ದರು.
ವಿಶೇಷ ವರದಿ:- ಚೆನ್ನಯ್ಯ ಹಿರೇಮಠ