ಉಪಚುನಾವಣೆ – ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಡಿಕೆಶಿ ಗೆಲುವು ಸುಲಭವಲ್ಲ!
ಕುಮಾರಸ್ವಾಮಿ ಫ್ಯಾಮಿಲಿ ಲೋಕಸಮರದ ನಂತರ ಮತ್ತಷ್ಟು ಪ್ರಭಲವಾಗಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಡಿಕೆಶಿ ಗೆಲುವು ಸುಲಭವಲ್ಲ!
ಕುಮಾರಸ್ವಾಮಿ ಫ್ಯಾಮಿಲಿ ಲೋಕಸಮರದ ನಂತರ ಮತ್ತಷ್ಟು ಪ್ರಭಲವಾಗಿದೆ.
ಚನ್ನಪಟ್ಟಣ : ಸತ್ಯ ಮಿಥ್ಯ ( ಜೂ -27)
ಬಹಳಷ್ಟು ಚರ್ಚೆಗೆ ಕಾರಣವಾಗುತ್ತಿರುವ ಚನ್ನಪಟ್ಟಣ ಉಪಚುನಾವಣೆ ಕಾವು. ಡಿಕೆಶಿ ಪದೇಪದೇ ಕ್ಷೇತ್ರಕ್ಕೆ ಭೇಟಿ. ಡಿಕೆಶಿ ಪುತ್ರಿಗೆ ಐಶ್ವರ್ಯ ಟಿಕೆಟ್, ಕ್ಷೇತದಲ್ಲಿ ದೇವೇಗೌಡರ ಫ್ಯಾಮಿಲಿ ಪ್ರಬಲ ಹೀಗೆ ಹತ್ತು ಹಲವು ವಿಚಾರಗಳ ವಿಶ್ಲೇಷಣೆ ನಡುವೆ ಡಿಕೆಶಿಗೆ ಗೆಲುವು ಸುಲಭವಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಮನಗರ ಜಿಲ್ಲೆ, ಚನ್ನಪಟ್ಟಣದ ಶಾಸಕ ಎಚ್. ಡಿ.ಕುಮಾರಸ್ವಾಮಿ, ಬಳ್ಳಾರಿ ಜಿಲ್ಲೆಯ ಸಂಡೂರಿನ ಶಾಸಕ ತುಕಾರಾಂ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾವಿಯ ಶಾಸಕ ಬಸವರಾಜ ಬೊಮ್ಮಾಯಿ ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ರಾಜೀನಾಮೆಯಿಂದ ತೆರವಾದ ಶಾಸಕ ಸ್ಥಾನಗಳಿಗೆ ಇನ್ನೇನು ಕೆಲವೇ ದಿನಗಳಲ್ಲಿ ಉಪಚುನಾವಣೆ ನಡೆಯಲಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಸೇರಿದಂತೆ ಉಪಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಕುರಿತು ಬಿರುಸಿನ ಚರ್ಚೆಯ ನಡುವೆ ಉಪಚುನಾವಣೆಯ ಕಾವು ರಂಗೇರುತಿದೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ vs ಹಾಲಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಪ್ರತಿಷ್ಠೆಯ ಕಣವಾಗಿ ಚನ್ನಪಟ್ಟಣ ವಿಧಾನಸಭಾ ಮತಕ್ಷೇತ್ರ ಮಾರ್ಪಾಡಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಲೋಕಸಮರದಲ್ಲಿ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಸೋಲಿನ ನಂತರ ಕೆರಳಿ ಕೆಂಡವಾಗಿರುವ ಕನಕಪುರದ ಬಂಡೆ ಸೋಲಿನ ಸೇಡಿಗೆ ಚನ್ನಪಟ್ಟಣದ ಗೆಲುವಿನ ಮಾಲೆ ಧರಿಸಲು ಭರ್ಜರಿ ತಯಾರಿ ನಡೆಸಿದಂತಿದೆ.
ಚನ್ನಪಟ್ಟಣ ಉಪಾಚುನಾವಣೆಯನ್ನು ಸ್ವ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಡಿ.ಕೆ. ಶಿವಕುಮಾರ್. ಕನಕಪುರ ಕ್ಷೇತ್ರಕ್ಕೆ ರಾಜೀನಾಮೆ ನೀಡಿಯಾದರೂ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.ಆದರೆ ಕನಕಪುರಕ್ಕೆ ರಾಜೀನಾಮೆ ನೀಡಿ ಚನ್ನಪಟ್ಟಣದಲ್ಲಿ ಗೆಲುವು ಸಾಧಿಸಿದರೆ ಮತ್ತೆ ಕನಕಪುರ ಕ್ಷೇತ್ರದ ಜನತೆಗೆ ಮತ್ತು ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಅವರ ಆಪ್ತ ಬಳಗದಲ್ಲಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಸಹೋದರ ಡಿ. ಕೆ. ಸುರೇಶ ” ಜನತೆ ನನಗೆ ವಿಶ್ರಾಂತಿ ನೀಡಿದ್ದಾರೆ ಆದ್ದರಿಂದ ನಾನು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿರುವ ಹಿನ್ನೆಲೆಯಲ್ಲಿ. ಪುತ್ರಿ ಐಶ್ವರ್ಯ ಅವರನ್ನು ಸ್ಪರ್ಧೆಗೆ ಇಳಿಸುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಡಾ. ಮಂಜುನಾಥರನ್ನು ಸ್ಪರ್ಧೆಗೆ ಇಳಿಸಿ ಡಿಕೆಶಿ ಕ್ಷೇತ್ರ ಬಿಟ್ಟು ಹೋಗದ ಹಾಗೆ ಮಾಡಿದ್ದಲ್ಲದೆ ಸಭ್ಯತೆಯ ಮೂರ್ತಿ ಡಾ. ಮಂಜುನಾಥರನ್ನು ಕಣಕ್ಕಿಳಿಸುವ ಮೂಲಕ ಕನಕಪುರ ಬಂಡೆಗೆ ಟಕ್ಕರ ನೀಡಲಾಗಿತ್ತು. ನಂತರ ಸಭ್ಯ ಮತ್ತು ಆಕ್ರಮಣಕಾರಿ ಎಂಬ ವಿಚಾರಗಳನ್ನು ಕ್ಷೇತ್ರಾಧ್ಯಂತ ಚರ್ಚೆಯನ್ನು ಹಸಿಯಾಗಿರಿಸಿ ಕನಕಪುರ ಬಂಡೆ ಸೋಲಿಸಲಾಯಿತು. ಡಾ.ಮಂಜುನಾಥ್ ಗೆಲುವಿನ ಹಿಂದೆ ಕುಮಾರಸ್ವಾಮಿ ರಣತಂತ್ರ, ಅನಿತಾ ಕುಮಾರಸ್ವಾಮಿ ಮತ್ತು ನಿಖಿಲ್ ಶ್ರಮ ಕಾರಣ.
ಅದಕ್ಕೆ ಸೇಡು ತೀರಿಸಿಕೊಳ್ಳುವ ತವಕದಲ್ಲಿರುವ ಡಿ.ಕೆ.ಶಿವಕುಮಾರಗೆ ಚನ್ನಪಟ್ಟಣ ಅಷ್ಟು ಸುಲಭದ ಕ್ಷೇತ್ರವಲ್ಲ. ಈ ಕ್ಷೇತ್ರವನ್ನು 2013 ರ ವಿಧಾನಸಭಾ ಚುನಾವಣೆಯಿಂದ ನೋಡಲಾಗಿ ಅಂದು ಸಿ. ಪಿ. ಯೋಗಿಶ್ವರ ಮತ್ತು ಅನಿತಾ ಕುಮಾರಸ್ವಾಮಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಅದರಲ್ಲಿ ಸಿಪಿವೈ – 79794 ಪ್ರಬಲ ಟಕ್ಕರ ನೀಡಿದ್ದ ಅನಿತಾ ಕುಮಾರಸ್ವಾಮಿ – 73407 ಮತಗಳನ್ನು ಪಡೆಯುವ ಮೂಲಕ ಗೆಲುವಿನ ಅಂತರ 6387 ಮಾತ್ರವಾಗಿದ್ದು ಚುನಾವಣೆ ಬಹಳಷ್ಟು ಜಿದ್ದಾಜಿದ್ದಿನಿಂದ ಕುಡಿತ್ತು ಅಂತಿಮವಾಗಿ ಸಮಾಜವಾದಿ ಪಕ್ಷದಿಂದ ಸಿಪಿವೈ ಗೆದ್ದು ಬಿಗಿದ್ದರು.
ನಂತರ ನಡೆದ 2018 ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಕುಮಾರಸ್ವಾಮಿ vs ಬಿಜೆಪಿಯಿಂದ ಸಿ. ಪಿ. ಯೋಗಿಶ್ವರ ಸ್ಪರ್ಧೆ. ಕುಮಾರಸ್ವಾಮಿ -87995.ಸಿಪಿವೈ – 66465.ಮತಗಳನ್ನು ಮತದಾರ ನೀಡುವ ಮೂಲಕ ಅನಿತಾ ಕುಮಾರಸ್ವಾಮಿ ಸೋಲಿಗೆ ಸೇಡುತೀರಿಸಿಕೊಂಡಂತಾಯಿತು.
ನಂತರ 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಮತ್ತು ಯೋಗಿಶ್ವರ ನಡುವೆ ನಡೆದ ಸ್ಪರ್ಧೆಯಲ್ಲಿಯೂ ಕೂಡಾ ಕುಮಾರಸ್ವಾಮಿ – 96592.ಸಿಪಿವೈ – 80677.ಮತಗಳನ್ನು ಪಡೆದರೆ 2018 ರಲ್ಲಿ ಕಾಂಗ್ರೇಸ್ ಅಭ್ಯರ್ಥಿ ಎಚ್. ಎಂ. ರೇವಣ್ಣ 30208ಮತಗಳನ್ನು 2023 ರಲ್ಲಿ ಗಂಗಾಧರ್. ಎಸ್. 15374 ಮತಗಳನ್ನಷ್ಟೇ ಪಡೆಯಲು ಶಕ್ತರಾದರು.ಅಲ್ಲದೇ ಕಳೆದ ಲೋಕಸಭಾ ಚುನಾವಣೆಯಲ್ಲಿಯೂ 30 ಸಾವಿರ ಲೀಡ್ ಮೂಲಕ ಮೈತ್ರಿ ಪಕ್ಷಗಳಿಗೆ ಮತದಾರ ಜೈ ಎಂದಿದ್ದಾನೆ.
ಒಟ್ಟಾರೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ 2023 ರ ವಿಧಾನಸಭಾ ಚುನಾವಣೆ ವರೆಗೂ ಜೆಡಿಎಸ್ vs ಸಿಪಿವೈ ಎಂಬಂತಾಗಿತ್ತು ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಬದ್ದ ಎದುರಾಳಿಗಳಿಬ್ಬರು ಜಿಗರಿ ದೋಸ್ತಿಗಳಾಗಿ ಮಾರ್ಪಟ್ಟಿರುವುದರಿಂದ. ಎನ್ ಡಿ ಎ ಅಭ್ಯರ್ಥಿಯಾಗಿ ಸಿ. ಪಿ. ಯೋಗಿಶ್ವರಗೆ ಟಿಕೆಟ್ ಸಿಕ್ಕರೆ ಕಾಂಗ್ರೇಸ್ ಪಕ್ಷಕ್ಕೆ ಗೆಲುವು ಕಬ್ಬಿಣದ ಕಡಲೆಯಾಗುವುದರಲ್ಲಿ ಸಂಶಯವಿಲ್ಲ.
ಈ ನಡುವೆ ಡಿ.ಕೆ.ಶಿವಕುಮಾರ ಗೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಹಿರಂಗ ಹೇಳಿಕೆಗಳು ಕೇಳಿಬರುತ್ತಿದ್ದೂ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಿಕೆಶಿ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಒಕ್ಕಲಿಗರ ಮತ ಪಡೆದದ್ದು ಬಹಳಷ್ಟು ಪರಿಣಾಮ ಬಿರಲಿದೆ ಅಲ್ಲದೇ ಕುಮಾರಸ್ವಾಮಿ ಕುಟುಂಬ ಡಾ. ಮಂಜುನಾಥ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಡಿಕೆಶಿಗೆ ಟಕ್ಕರ ನೀಡದ್ದರಲ್ಲದೆ. ಕೆಂಪೇಗೌಡರ ಕಾರ್ಯಕ್ರಮದ ಗಣ್ಯರ ಪಟ್ಟಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅಥವಾ ಮಾಜಿ ಪ್ರಧಾನಿ ದೇವೇಗೌಡರ ಹೆಸರು ಹಾಕದಿರುವ ಹಿನ್ನೆಲೆಯಲ್ಲಿ ಡಿಕೆಶಿ ವಿರುದ್ಧ ತೊಡೆತಟ್ಟಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.
ಉಪಚುನಾವಣೆ ಘೋಷಣೆಯೊಂದೆ ಬಾಕಿ ಇದ್ದು ಚನ್ನಪಟ್ಟಣದಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೇದರಿವೆ ಮತದಾರ ಯಾರ ಪರ ಒಲವು ತೋರಲಿದ್ದಾನೆ ಎಂಬುದನ್ನು ಕಾದು ನೋಡೋಣ.
ಲೇಖನ : ಚನ್ನು. ಎಸ್.