ಖಾಸಗಿ ಕೈಗಾರಿಕೆ ಉದ್ಯೋಗ ಮೀಸಲಾತಿ ಮಸೂದೆಗೆ ತಾತ್ಕಾಲಿಕ ತಡೆ – ಖಾಸಗಿ ಕೈಗಾರಿಕಾ ಕಂಪನಿಗಳ ಹೊಡೆತಕ್ಕೆ ಹೆದರಿದ ಸಿದ್ದರಾಮಯ್ಯ?

ಖಾಸಗಿ ಕೈಗಾರಿಕೆ ಉದ್ಯೋಗ ಮೀಸಲಾತಿ ಮಸೂದೆಗೆ ತಾತ್ಕಾಲಿಕ ತಡೆ – ಖಾಸಗಿ ಕೈಗಾರಿಕಾ ಕಂಪನಿಗಳ ಹೊಡೆತಕ್ಕೆ ಹೆದರಿದ ಸಿದ್ದರಾಮಯ್ಯ?
ಬೆಂಗಳೂರು : ಸತ್ಯಮಿಥ್ಯ (ಜುಲೈ -17).
ಕನ್ನಡಿಗರಿಗೆ ಖಾಸಗಿ ವಲಯದ ಕೈಗಾರಿಕೆಗಳು, ಉದ್ದಿಮೆಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಗರಿಷ್ಠ ಪ್ರಮಾಣದ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ನೂತನ ವಿದೇಯಕವನ್ನು ಜಾರಿಗೆ ತರಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿರ್ಧರಿಸಿತ್ತು. ಈಗ ಏಕಾಏಕಿ ಸಿದ್ದರಾಮಯ್ಯ ತಮ್ಮ ಎಕ್ಷ ಖಾತೆ ಮೂಲಕ ಕರ್ನಾಟಕ ಖಾಸಗಿ ಕೈಗಾರಿಕೆಗಳ ಹುದ್ದೆಗಳ ಮೀಸಲಾತಿ ವಿದೇಯಕಕ್ಕೆ ತಾತ್ಕಾಲಿಕ ತಡೆ ನೀಡಿ ಮುಂದಿನ ದಿನಗಳಲ್ಲಿ ಪರಾಮರ್ಶಿಸಿ ನಿರ್ಧಾರ ಕೈಗೊಳ್ಳಲಾಗುವದು ಎಂದಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಖಾಸಗಿ ಕೈಗಾರಿಕಾ ಕಂಪನಿಗಳ ಹೊಡೆತಕ್ಕೆ ಹೆದರಿದರಾ? ಎಂಬ ಪ್ರಶ್ನೆ ಸಾಮಾನ್ಯ ಜನರಲ್ಲಿ ಮೂಡುತ್ತಿದೆ.
ಇದಕ್ಕೂ ಮುಂಚೆ ರಾಜ್ಯ ಸರ್ಕಾರದ ಖಾಸಗಿ ಕೈಗಾರಿಕೆಗೆ ಸಂಬಂದಿಸಿದ ವಿದೇಯಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದು ತಾರತಮ್ಯ ನಿರ್ಧಾರವಾಗಿದ್ದು, ಸಂವಿಧಾನ ವಿರೋಧಿಯಾಗಿದೆ ಇದರಿಂದ ಕೈಗಾರಿಕೆಗಳಿಗೆ ಬಹಳಷ್ಟು ತೊಂದರೆಯಾಗುತ್ತದೆ ಎಂದು ಮೋಹನ್ ದಾಸ್ ಪೈ ಕಿಡಿಕಾರಿದ್ದರು. ಉದ್ಯಮಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂದರ ಷಾ, ಟೆಕ್ ಹಬ್ ಆಗಿರೋ ನಮಗೆ ನುರಿತ ಪ್ರತಿಭೆಗಳನ್ನು ಆಯ್ಕೆ ಮಾಡುತ್ತೇವೆ. ಇದರಲ್ಲಿ ಸ್ಥಳೀಯ ಪ್ರಶ್ನೆ ಬರುವುದಿಲ್ಲ ಎಂದಿದ್ದಾರೆ. ಅಲ್ಲದೇ ಅನೇಕ ಖಾಸಗಿ ಕೈಗಾರಿಕೆ ಮುಖ್ಯಸ್ಥರು ಇದೊಂದು ರಾಜಕೀಯ ನಿರ್ಧಾರವಾಗಿದೆ, ಸರಿಯಾದ ನಿರ್ಧಾರವಲ್ಲ, ಇದನ್ನು ಜಾರಿಗೆ ತಂದರೆ ಕೈಗಾರಿಕೆಗಳು ಕರ್ನಾಟಕದ ಕಡೆ ಮುಖ ಮಾಡುವದಿಲ್ಲ ಎಂದಿದ್ದರು.
ವಿರೋಧ ಪಕ್ಷ ಬಿಜೆಪಿ ಪ್ರತಿಕ್ರಿಯೆ ನೀಡಿ. ಈಗಾಗಲೇ ವಿಧಾನಸಭಾ ಅಧಿವೇಶನ ಪ್ರಾರಂಭವಾಗಿದ್ದು ಆಡಳಿತ ಪಕ್ಷವನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಸಾವು, ಭ್ರಷ್ಟಾಚಾರ, ಬೇನಾಮಿ ಖಾತೆಗಳಿಗೆ ಹಣ ವರ್ಗಾವಣೆ, ಸಿದ್ದರಾಮಯ್ಯ ಕುಟುಂಬದ ಕೇಂದ್ರವಾಗಿಸಿಕೊಂಡು ಮುಡಾ ನಿವೇಶನ ಹಂಚಿಕೆ ಅಲ್ಲದೇ ಬೇರೆ ಬೇರೆ ಇಲಾಖೆಯಲ್ಲಿ ನಡೆದಿದೆ ಎನ್ನಲಾಗಿರುವ ಪ್ರಕರಣ ಕುರಿತು ವಿಸ್ತಾರವಾಗಿ ತರಾಟೆ ತೆಗೆದುಕೊಂಡಿದ್ದೇವೆ. ಇದರಿಂದ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಮುಜುಗುರ ಉಂಟಾಗಿದೆ. ಬೃಹತ್ ಪ್ರಮಾಣದಲ್ಲಿ ದಲಿತರು ರಾಜಧಾನಿಗೆ ಆಗಮಿಸಲಿದ್ದಾರೆ ಆ ಹೋರಾಟ ದಾರಿ ತಪ್ಪಿಸಲು ಈ ಖಾಸಗಿ ಕೈಗಾರಿಕಾ ಉದ್ಯೋಗ ಮೀಸಲಾತಿ ಎಂಬ ನಾಟಕವನ್ನು ಸಿದ್ದರಾಮಯ್ಯ ಹುಡಿದ್ದಾರೆ ಎನ್ನುತ್ತಿದ್ದಾರೆ.
ಈ ನಡುವೆ ರಾಜ್ಯದಲ್ಲಿ ಖಾಸಗಿ ಉದ್ಯೋಗದಲ್ಲಿ ಮೀಸಲಾತಿ ಕುರಿತು ವಿದೇಯಕ ಮಂಡಿಸಲು ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ.ಇನ್ನೇನು ನಾಳೆ ಅಥವಾ ನಾಡಿದ್ದು ಐಟಿ ಬಿಟಿ ಕಂಪನಿಗಳು ಸರ್ಕಾರದ ಈ ನಿರ್ಧಾರದ ವಿರುದ್ಧ ಕಾನೂನು ಹೋರಾಟ ಪ್ರಾರಂಬಿಸುವ ತಯಾರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಸೂದೆ ಮಂಡನೆಯ ನಿರ್ಧಾರದಿಂದ ಹಿಂದೆ ಸರಿದದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ವರದಿ : ಚನ್ನು. ಎಸ್.