
ವಿದ್ಯಾರ್ಥಿಗಳು ಕ್ರೀಡೆಯನ್ನು ಸವಾಲಾಗಿ ಸ್ವೀಕರಿಸಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ:-ಜಗದೀಶ ತೊಂಡಿಹಾಳ.
ಕುಕನೂರ :ಸತ್ಯಮಿಥ್ಯ (ಅಗಸ್ಟ್ -28)
ವಿದ್ಯಾರ್ಥಿಗಳು ಕ್ರೀಡೆಗಳನ್ನು ಸವಾಲಗಿ ಸ್ವೀಕರಿಸುವ ಮೂಲಕ ಭರ್ಜರಿಯಾಗಿ ತಯಾರಾಗಬೇಕು.ಅಂದಾಗ ಯಶಸ್ಸು ಸುಲಭವಾಗುತ್ತದೆ. ಕ್ರೀಡಾಮನೋಭಾವದಿಂದ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ವಕೀಲರಾದ ಜಗದೀಶ್ ತೊಂಡಿಹಾಳ ನುಡಿದರು.
ಅವರು ಕೊಪ್ಪಳ ಜಿಲ್ಲೆಯ ಕುಕುನೂರು ತಾಲೂಕಿನ ರಾಜೂರು, ಆಡೂರು ಗ್ರಾಮದ ಸರಕಾರಿ ಹಿರಿಯ ಪ್ರೌಢಶಾಲಾ ವಿಭಾಗದ 2024 -25 ನೇ ಸಾಲಿನ ಕುಕನೂರು ಪೂರ್ವ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಗಳದ ಮುಖ್ಯ ಅತಿಥಿಗಳಾಗಿ ಮಾತನಾಡಿದರು .
ನಂತರ ಪಕೀರ ಸಾಬ್ ನದಾಫ್, ಶರಣಪ್ಪ ಸೋಂಪುರ್ , ಎಸ್ ಡಿ ಎಂ ಸಿ ಸದಸ್ಯರಾದ ಅಕ್ಕಮಹಾದೇವಿ ಅಂಗಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು,
ಜ್ಯೋತಿಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಹುಲಿಗಮ್ಮ ಹಿರೇಮನೆಯವರು ನೆರವೇರಿಸಿದರು. ಧ್ವಜಾರೋಹಣವನ್ನು ತಾಲೂಕ ಶಿಕ್ಷಣ ಅಧಿಕಾರಿಗಳಾದ ವೀರಭದ್ರಪ್ಪ ಅಂಗಡಿ ನೆರವೇರಿಸಿದರು. ಪತಸಂಚಲನವನ್ನು ದೈಹಿಕ ಶಿಕ್ಷಕರಾದ ಚಂದ್ರಶೇಖರ್ ದೊಡ್ಮನಿ ನೆರವೇರಿಸಿದರು. ಅಧ್ಯಕ್ಷೀಯ ಭಾಷಣ ಕಾಳಿಂಗಪ್ಪ ಕೊತ್ಲನ್ನವರ್ ಎಸ್ ಡಿ ಎಂ ಸಿ ಅಧ್ಯಕ್ಷರು ನೆರವೇರಿಸಿದರು. ವಂದನಾರ್ಪಣೆ ಶಿವಪ್ಪ ದಳವಾಯಿ ಶಿಕ್ಷಕರು ನೆರವೇರಿಸಿದರು.
ಈ ಸಂದರ್ಭದಲ್ಲಿ ಬಸವರಾಜ್ ಬಿಡನಾಳ ಗ್ರಾಮ ಪಂಚಾಯತ್ ಸದಸ್ಯರು, ಹಿರಿಯ ದೈಹಿಕ ಶಿಕ್ಷಕ ಶರಣಪ್ಪ ವೀರಾಪೂರ, ಉಮೇಶ್ ಕಂಬಳಿ, ಗ್ರಾಮದ ಗಣ್ಯರಾದ ಚಾಂದ್ ಹುಸೇನ್ ಮುಕ್ಕಣ್ಣನವರ್, ಈರಪ್ಪ ಕರೆಕೊರಿ, ವಿರುಪಾಕ್ಷಪ್ಪ ದೊಡ್ಡಮನಿ, ಮಲ್ಲಪ್ಪ ನಾಗೋಜಿ, ಕೋಟೆಪ್ಪ ಗೊಂದಿ, ಹಾಗೂ ಎಸ್ಡಿಎಂಸಿ ಸದಸ್ಯರು ಮತ್ತು ಗ್ರಾಮ ಪಂಚಾಯತ್ ಸದಸ್ಯರುಗಳು ಗ್ರಾಮದ ಗುರುಹಿರಿಯರು ಇತರರು ಇದ್ದರು,
ವರದಿ : ಚೆನ್ನಯ್ಯ ಹಿರೇಮಠ.