
ಬೆಟಗೇರಿ ಪೊಲೀಸರ ಕಾರ್ಯಾಚರಣೆ ಗಾಂಜಾ ಮಾರಾಟ ಮಾಡುತ್ತಿದ್ದೆ ಇಬ್ಬರ ಬಂಧನ.
ಗದಗ:ಸತ್ಯಮಿಥ್ಯ (ಅಗಸ್ಟ್ -30).
ಮನೆಯ ಮುಂದೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬೆಟಗೇರಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು 10 ಸಾವಿರ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ
ಬೆಟಗೇರಿಯ ಸೆಟ್ಲಮೆಂಟ ಏರಿಯಾದಲ್ಲಿ ಗಾಂಜಾ ಮಾರಾಟದ ಖಚಿತ ಮಾಹಿತಿ ಪಡೆದ ಬೆಟಗೇರಿ ಪಿಎಸ್ಐ ಲಕ್ಷ್ಮಣ ಅರಿ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಗಳಾದ ರಮೇಶ್ ರತ್ನಪ್ಪ ಕಾಳೆ ಹಾಗೂ ರನ್ನಪ್ಪ ಮೊನಪ್ಪ ಕಾಳೆ ಇವರ ಮನೆಯ ಮುಂದೆ ಗಾಂಜಾ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಆರೋಪಿಗಳಿಂದ 10 ಸಾವಿರ ರೂ.ಮೌಲ್ಯದ ಗಾಂಜಾ ನಗದು ಹಾಗೂ 600 ರೂಪಾಯಿಗಳನ್ನು ಜಪ್ತಿ ಮಾಡಿದ್ದಾರೆ.
ವರದಿ : ಮುತ್ತು.