ಗಜೇಂದ್ರಗಡ : ಕಾಂಗ್ರೇಸ್ ಮುಖಂಡ ಐವನ್ ಡಿಸೋಜ ವಿರುದ್ದ ಕೇಸ್ ದಾಖಲಿಸಲು ಮನವಿ.
ಗಜೇಂದ್ರಗಡ : ಸತ್ಯಮಿಥ್ಯ (ಆಗಸ್ಟ್ -20).
ಕರ್ನಾಟಕ ವಿಧಾನ ಪರಿಷತ್ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡರಾದ ಐವಾನ್ ಡಿಸೋಜರವರು ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಗಜೇಂದ್ರಗಡ ಆರಕ್ಷಕ ಠಾಣೆಯಲ್ಲಿ ಬಿಜೆಪಿ ರೋಣ ಮಂಡಲದ ಯುವ ಮೋರ್ಚಾದಿಂದ ದೂರು ದಾಖಲಿಸಿ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಲಾಗಿದೆ.
ಕಳೆದ ಆಗಸ್ಟ್ 19 ರ ಸೋಮವಾರ ಕಾಂಗ್ರೇಸ್ ಪಕ್ಷದ ವತಿಯಿಂದ. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಮಂಗಳೂರಿನ ಕಾರ್ಯಕ್ರಮದಲ್ಲಿ. ಕಾಂಗ್ರೇಸ್ ಮುಖಂಡ ಐವನ್ ಡಿಸೋಜ ಮಾತನಾಡುತ್ತ. ಕೂಡಲೇ ಗೌರ್ನರ್ ಹಿಂದಕ್ಕೆ ಹೋಗಬೇಕು ಮತ್ತು ಹೋಗದೆ ಇದ್ದರೆ ಯಾವ ರೀತಿ ಬಾಂಗ್ಲಾದೇಶದಲ್ಲಿ ಆಯಿತೋ ಅದೇ ರೀತಿ ಗೌರ್ನರ್ ಆಫೀಸ್ಗೆ, ಗೌರ್ನರ್ ಮನೆಗೆ ನುಗ್ಗುವಂತ ಕೆಲಸ ನಾವು ಕಾಂಗ್ರೆಸ್ನ ಕಾರ್ಯಕರ್ತರು ಮಾಡಬೇಕಾಗುತ್ತದೆ. ಅದು ಮಾಡಿಯೇ ಮಾಡುತ್ತೇವೆ, ಹಾಗಾಗಿ ಮಾನ ಮರ್ಯಾದೆ ಇದ್ದರೆ ಗೌರ್ನರ್ ಅವರನ್ನು ಹಿಂದಕ್ಕೆ ಕರೆಸಬೇಕು, ಮತ್ತು ಅವರು ರಾಜ್ಯ ಬಿಟ್ಟು ತೊಲಗಬೇಕು ಇಲ್ಲದಿದ್ದರೆ ರಾಜಭವನಕ್ಕೆ ನುಗ್ಗುವುದು ಖಂಡಿತ, ರಾಜ ಭವನದಲ್ಲಿ ಏನಾದರೂ ಆದರೆ ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರ ನಿರ್ವಹಣೆ ಎಂದು ರಾಷ್ಟ್ರ ವಿರೋಧಿ ಹೇಳಿಕೆಯನ್ನು ನೀಡುವ ಮೂಲಕ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಡಿಸುವ ದುರುದ್ದೇಶದಿಂದ ತಮ್ಮ ಕಾರ್ಯಕರ್ತರಿಗೆ ದೇಶವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕುಮ್ಮಕ್ಕು ನೀಡುವ ರೀತಿಯಲ್ಲಿ ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾರೆ. ಎಂದು ಆರೋಪಿಸಿ ಬಿಜೆಪಿ ರೋಣ ಮಂಡಲದ ಯುವ ಮೋರ್ಚಾ ಮುಖಂಡರು ಗಜೇಂದ್ರಗಡ ಆರಕ್ಷಕ ಠಾಣೆಯಲ್ಲಿ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ರಾಜೇಂದ್ರ ಘೋರ್ಪಡೆ, ರೋಣ ಮಂಡಲ ಭಾಜಪ ಯುವ ಮೋರ್ಚಾ ಅಧ್ಯಕ್ಷ ಉಮೇಶ್ ಚನ್ನು ಪಾಟೀಲ್,ಅಂದಪ್ಪ ಅಂಗಡಿ, ಕುಮಾರ ರಾಠೋಡ, ಸುಗಿರೇಶ ಕಾಜಗಾರ, ಶಿವಾನಂದ ಕಟಿಗಾಲ, ರಾಘು ಕಾರಡಗಿಮಠ್,ದೇವರಾಜ್ ವಗ್ಗರ ಮುಂತಾದವರ ಉಪಸ್ಥಿರಿದ್ದರು.
ವರದಿ : ಸುರೇಶ ಬಂಡಾರಿ.