ಗ್ರಹಲಕ್ಷ್ಮಿ ಯೋಜನೆ – ವಾರದಲ್ಲಿ ಎರಡು ತಿಂಗಳ ಹಣ ಜಮಾಕ್ಕೆ ಕ್ರಮ – ಲಕ್ಷ್ಮಿ ಹೆಬ್ಬಾಳ್ಕರ್.
ಬೆಂಗಳೂರು : ಸತ್ಯಮಿಥ್ಯ ( ಜುಲೈ-25)
ಪಂಚ ಗ್ಯಾರಂಟಿಯಲ್ಲೋಂದಾದ ಗೃಹ ಲಕ್ಷ್ಮಿ ಯೋಜನೆ ಕಳೆದ 2-3 ತಿಂಗಳಿಂದ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷ ಕಾಂಗ್ರೇಸ್ ಗೆ ಹಿನ್ನಡೆಯಾಗಿದ್ದರಿಂದ ಪಂಚ ಗ್ಯಾರಂಟಿಗಳು ನಿಲ್ಲುತ್ತವೆ ಅಥವಾ ಯಾವುದಾದರೊಂದು ನೆಪಹೇಳಿ ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡುತ್ತಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದವು.
ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದು. ಮೇ ತಿಂಗಳವರೆಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಹಂಚಿಕೆ ಮಾಡಲಾಗಿದೆ. ಜೂನ್ ಮತ್ತು ಜುಲೈ ತಿಂಗಳದ ಹಣವನ್ನು ಇನ್ನು 8-10 ದಿನಗಳಲ್ಲಿ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಯೋಜನೆಯನ್ನು ಮಹಿಳೆಯ ಆರ್ಥಿಕ ಸಬಲೀಕರಣಕ್ಕಾಗಿ ಕೊಡಲಾಗುತ್ತಿದೆ. ಚುನಾವಣೆ ಪೂರ್ಣದಲ್ಲೇ ರಾಜ್ಯದ ಮಹಿಳೆಯರಿಗೆ ಈ ಭರವಸೆ ನೀಡಲಾಗಿತ್ತು. ಹಾಗಾಗಿ ಯಾವುದೇ ಕಾರಣಕ್ಕೂ ಗೃಹ ಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದರು.
ವರದಿ – ಸಂ.