
ಚಿತ್ರದುರ್ಗದ ಘಟನೆಯ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ – ಎಸ್ ಎಫ್ ಐ
ಗಜೇಂದ್ರಗಡ : ಸತ್ಯಮಿಥ್ಯ (ಆ-21).
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯು (ಎಸ್ಸಿ ಎಸ್ಟಿ) ವಸತಿ ನಿಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕಳೆದ ಎರಡು ದಿನಗಳಿಂದ ವಿದ್ಯಾರ್ಥಿನಿಯು ಕಾಣೆಯಾಗಿದ್ದು ಇಂದು ಅರೆಬೇರೆ ಸುಟ್ಟ ಸ್ಥಿತಿಯಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು ಕೂಡಲೇ ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಮತ್ತು ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ಸಂಘಟನೆ ಒತ್ತಾಯಿಸುತ್ತದೆ.
ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾ ಅಧ್ಯಕ್ಷರಾದ ಚಂದ್ರು ರಾಠೋಡ ಮಾತನಾಡಿ ರಾಜ್ಯದ ಶಾಲಾ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳ ಬಗ್ಗೆ ಮುಖ್ಯವಾಗಿ ವಿದ್ಯಾರ್ಥಿನಿಯರು ಬಗ್ಗೆ ಕಾಳಜಿ ವಹಿಸುವಂತಹ ವ್ಯವಸ್ಥೆ ಇಲ್ಲಾ ಲೈಂಗಿಕ ಕಿರುಕುಳ ಆಗುತ್ತಿದ್ದರೆ ಅದನ್ನು ತಡೆಗಟ್ಟುವ ಒಂದು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಇಂತಹ ಘಟನೆಗಳು ದಿನನಿತ್ಯ ನಡೆಯುತ್ತಿದ್ದು ಅವುಗಳನ್ನು ತಡೆಯಲು ಸರ್ಕಾರಗಳು ಮತ್ತು ಇಲಾಖೆಗಳು ವಿಫಲವಾಗಿದೆ. ಜಾಗತಿಕವಾಗಿ ಆವರಿಸಿದ ಕರೋನ ನಂತರ ಶೈಕ್ಷಣಿಕ ವಲಯದಲ್ಲಿ ಹಲವಾರು ಬದಲಾವಣೆ ಆಗಿದ್ದು ಇಂದು ಪೋನ್ ಇಲ್ಲದೇ ಬದುಕುವುದು ಕಷ್ಟ ಆಗಿದೆ ಹಾಗಾಗಿ ಅದರ ಬಳಕೆಯ ಮೂಲಕ ಸಾಮಾಜಿಕ ಜಾಲತಾಣಗಳ ಬಳಸಿ ಇಂದು ಇಂತಹ ಘಟನೆಗಳಿಗೆ ಕೆಲವು ಪ್ರೇರಣೆ ನೀಡುವ ಸ್ಥಿತಿಗೆ ತಲುಪಿವೆ ಅವುಗಳನ್ನು ನಿಯಂತ್ರಣ ಮಾಡಲು ನಮ್ಮಲ್ಲಿ ಸರಿಯಾದ ಕಾನೂನು ಇಲ್ಲ, ಸರ್ಕಾರ ಈ ಕುರಿತು ಗಂಭೀರವಾಗಿ ಕಾನೂನು ಜಾರಿ ಮಾಡಬೇಕು ಮತ್ತು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಜಾರಿ ಮಾಡಬೇಕು.
ಚಿತ್ರದುರ್ಗದ ಘಟನೆಯ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಗಜೇಂದ್ರಗಡ ತಾಲೂಕು ಸಮಿತಿ ಮೂಲಕ ಆಗ್ರಹಿಸುತ್ತಿದೆ.
ಈ ಸಂದರ್ಭದಲ್ಲಿ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ತಾಲೂಕ ತಹಶೀಲ್ದಾರಾದ ಶ್ರೀ ಕೀರಣಕುಮಾರ ಕುಲಕರ್ಣಿ ಮನವಿ ಸ್ವೀಕರಿಸಿದರು. ಎಸ್ ಎಫ್ ಐ ಜಿಲ್ಲಾ ಅಧ್ಯಕ್ಷರಾದ ಚಂದ್ರು ರಾಠೋಡ, ತಾಲೂಕ ಅಧ್ಯಕ್ಷರಾದ ಅನಿಲ್ ಆರ್, ಅಭಿಲಾಷ್ ರಾಠೋಡ ಶರಣು ಎಮ್, ಮಹಾಂತೇಶ ಪೂಜಾರ, ಸಾಗರ ಎಚ್, ತನುಜಾ ರಾಯಬಾಗಿ,ವೀಣಾ ಗಾರ್ಗಿ, ಐಶ್ವರ್ಯ ಎಸ್, ಸೋಮು ವಡ್ಡರ, ಮಂಜುಳಾ ಬೆಳವಣಕಿ,ಕೇಶವ ಲಮಾಣಿ, ಅನಿಲ್ ರಾಠೋಡ, ಅನುಷಾ ತಳವಾರ, ಗಣೇಶ ವಡ್ಡರ, ಆಕಾಶ, ಮಹೇಶ್ ಎಮ್ ಎಚ್, ಇದ್ದರು.
ವರದಿ : ಚನ್ನು. ಎಸ್.