ರಾಜ್ಯ ಸುದ್ದಿ

ರಕ್ಷಣೆ ಹಾಗೂ ದೌರ್ಜನ್ಯ ತಡೆಗೆ – ಕುರಿಗಾಹಿಗಳ ಪ್ರತಿಭಟನೆ 

Share News

ರಕ್ಷಣೆ ಹಾಗೂ ದೌರ್ಜನ್ಯ ತಡೆಗೆ – ಕುರಿಗಾಹಿಗಳ ಪ್ರತಿಭಟನೆ 

ಸಾವಳಗಿ:ಸತ್ಯಮಿಥ್ಯ (ಜು-11)

ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣೆ ಕಾಯ್ದೆಯನ್ನು ರೂಪಿಸಿ(ರಕ್ಷಣೆ ಹಾಗೂ ದೌರ್ಜನ್ಯ ತಡೆ) ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಕುರಿಗಾಹಿಗಳು ಹಾಗೂ ಮುಖಂಡರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ದೇಸಾಯಿ ವೃತ್ತದಿಂದ ಕುರಿಗಳ ಜೊತೆಗೆ ತಾಲ್ಲೂಕು ಆಡಳಿತ ಸೌಧದವರೆಗೆ ಪ್ರತಿಭಟಣೆ ಮೂಲಕ ಹೋಗಿ ತಹಶೀಲ್ದಾರ ಸದಾಶಿವ ಮಕ್ಕೋಜಿ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.

ಮುಖಂಡ ಅರ್ಜುನ ದಳವಾಯಿ ಮಾತನಾಡಿ ಕುರಿಗಾರರ ಮೇಲೆ ನಿರಂತವಾಗಿ ನಡೆಯುತ್ತಿರುವ ದೌರ್ಜನ್ಯಗಳು, ಹಲ್ಲೆ, ಜೀವ ಬೇದರಿಕೆ, ಕೊಲೆ, ಅತ್ಯಾಚಾರ, ಕುರಿ ಕಳ್ಳತನ, ಅರಣ್ಯಾಧಿಕಾರಿಗಳ ಲಂಚದ ಬೇಡಿಕೆ ಅಧಿಕ ಪ್ರಮಾಣದಲ್ಲಿ ನಡೆಯುತ್ತಿವೆ. ಸರ್ಕಾರವು ಎಲ್ಲ ವರ್ಗದ ಮಹಿಳೆಯರ ಪರ, ಮಕ್ಕಳ ಪರ, ಶೋಷಿತ ಸಮುದಾಯಗಳ ಪರ ಹಾಗೂ ವಿವಿಧ ವೃತ್ತಿಪರರ ಹಿತರಕ್ಷಣೆಗೆ ವಿಶೇಷ ಕಾಯ್ದೆಗಳನ್ನು ಜಾರಿ ಮಾಡಿ ಅವರ ರಕ್ಷಣೆ ಮಾಡಬೇಕು ಎಂದರು.

ಹೂವಪ್ಪ ಉಷಾಕರ ಮಾತನಾಡಿ ಗುಡ್ಡುಗಾಡು ಪ್ರದೇಶಗಳಲ್ಲಿ ಕುರಿ ಮೇಸಲು ಹೋದಾಗ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಹಾಗೂ ಸಿಬ್ಬಂದಿಗಳಿಂದ ನಿರಂತರ ಕಿರುಕುಳ, ದೌರ್ಜನ್ಯಗಳು ನಡೆಯುತ್ತಿವೆ, ಕುರಿಗಾರಿಕೆ ಮೂಲಕ ಕುಟುಂಬದ ಆರ್ಥಿಕ ಪರಿಸ್ಥಿತಿ ನಿಭಾಯಿಸುವ ಸಾಂಪ್ರದಾಯಿಕ ಕುಲ ಕಸಬಾಗಿದೆ, ಬೆಟ್ಟ-ಗುಡ್ಡಗಳನ್ನು ಒಳಗೊಂಡಂತೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ಥಳೀಯವಾಗಿ ಹಾಗೂ ಸಂಚರಿಸುವ ಮೂಲಕ ಪಾಲನೆ ಮಾಡುತ್ತಿದ್ದು, ಬಡವರ ಪಾಲಿಗೆ ಕುರಿಗಾರಿಕೆ ವರದಾನವಾಗಿರುತ್ತದೆ ಎಂದರು.

ಮುಖಂಡ ಯಲ್ಲಪ್ಪ ಹೆಗಡೆ ಮಾತನಾಡಿ ಇತ್ತೀಚಿಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಉಗಲವಾಟ ಗ್ರಾಮದ ಕುರಿಗಾಯಿ ಶರಣಪ್ಪ ಚಿಮ್ಮನಕಟ್ಟಿ, ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲ್ಲೂಕಿನ ಕುರಿಗಾಯಿ ಪ್ರಭು ಮೇತ್ರಿ ಇವರನ್ನು ಕುರಿಗಳ್ಳರು ಕೊಲೆ ಮಾಡಿದ್ದು ಹಾಗೂ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನಲ್ಲಿ ಲಕ್ಷ್ಮೀ ಕಳ್ಳಮನಿ ಎಂಬ ಕುರಿಗಾಯಿ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ನಿದರ್ಶನಗಳು ನಮ್ಮ ಮುಂದಿವೆ ಎಂದರು.ಮಲ್ಲಿಕಾರ್ಜುನ್ ಬೆಕ್ಕೇರಿ,

ಹಣಮಂತ ಯಮಗಾರ, ನಾಗಪ್ಪ ಹೆಗಡೆ, ಸಂತೋಷ ಮಮದಾಪೂರ, ಹಣಮಂತ ಮಗದೂಮ್, ಪರಶು ಚಿಗರಿ, ಪ್ರಲ್ಹಾದ ಭಜಂತ್ರಿ, ರಾಜು ನದಾಪ್ ಸೇರಿದಂತೆ ಇತರರು ಇದ್ದರು.

ಕುರಿ ಕಾಯಲು ಕುರಿಗಾಹಿಗಳಿಗೆ ಸರ್ಕಾರ ಅನುಕೂಲ ಮಾಡಬೇಕು, ಅರಣ್ಯ ಪ್ರದೇಶದಲ್ಲಿ ಬಿಟ್ಟರೆ ಅರಣ್ಯ ಇಲಾಖೆಯವರು ತೊಂದರೆ ಮಾಡುತ್ತಿದ್ದಾರೆ, ಆದ್ದರಿಂದ ಸರ್ಕಾರ ಶಾಶ್ವತ ಪರಿಹಾರವನ್ನು ಮಾಡಬೇಕು, ಅರಣ್ಯ ಇಲಾಖೆ ಸಚಿವರಾದ ಈಶ್ವರ ಖಂಡ್ರೆಯವರ ಜೊತೆ ಮಾತನಾಡಿ ಶಾಶ್ವತ ಪರಿಹಾರಕ್ಕೆ ಮನವಿ ಮಾಡಲಾಗುವದು, ಸ್ಥಳಿಯ ಸಮಸ್ಯೆಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಲಾಗುವದು ಎಂದರು.

ಆನಂದ ಸಿದ್ದು ನ್ಯಾಮಗೌಡ.ಮಾಜಿ ಶಾಸಕ ಜಮಖಂಡಿ

ವರದಿ : ಸಚಿನ್ ಜಾದವ್ 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!