ಸಿದ್ದರಾಮಯ್ಯ – ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಮರ್ಥನೆ ಮೂಲಕ ಬಿಜೆಪಿಗೆ ಟಕ್ಕರ್.
ಕೇಂದ್ರದ ತೆರಿಗೆ ಮತ್ತು ಇನ್ನುಳಿದ ರಾಜ್ಯಗಳಲ್ಲಿನ ಇಂಧನ ದರಗಳ ಬಗ್ಗೆ ಬೆಳಕು ಚಲ್ಲುವ ಮೂಲಕ ಬಿಜೆಪಿಗೆ ಟಕ್ಕರ್.
ಬೆಂಗಳೂರು – (ಜು -16.)
ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ದ ಸಮರ ಸಾರಲು ತಯಾರಾಗಿರುವ ವಿರೋಧ ಪಕ್ಷ ಬಿಜೆಪಿ ರಾಜ್ಯಾಧ್ಯಂತ ಪ್ರತಿಭಟನೆ ನಡೆಸಲು ತಯಾರಿ ನಡೆಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಷ ಖಾತೆಯಲ್ಲಿ ಸಂದೇಶ ಹಂಚಿಕೊಳ್ಳುವ ಮೂಲಕ ಟಕ್ಕರ್ ನೀಡಿದ್ದಾರೆ.
ಕರ್ನಾಟಕ ಸರ್ಕಾರವು ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು 29.84% ಮತ್ತು ಡೀಸೆಲ್ ಮೇಲೆ 18.44% ಕ್ಕೆ ಹೆಚ್ಚಿಸಿದೆ. ಈ ಹೆಚ್ಚಳದ ನಂತರವೂ, ಇಂಧನದ ಮೇಲಿನ ನಮ್ಮ ರಾಜ್ಯದ ತೆರಿಗೆಗಳು ದಕ್ಷಿಣ ಭಾರತದ ಹೆಚ್ಚಿನ ರಾಜ್ಯಗಳು ಮತ್ತು ಮಹಾರಾಷ್ಟ್ರದಂತಹ ಆರ್ಥಿಕ ಗಾತ್ರದ ರಾಜ್ಯಗಳಿಗಿಂತ ಕಡಿಮೆಯಾಗಿವೆ.
ಮಹಾರಾಷ್ಟ್ರದಲ್ಲಿ, ಪೆಟ್ರೋಲ್ ಮೇಲಿನ ವ್ಯಾಟ್ 25% ಮತ್ತು ರೂ 5.12 ಹೆಚ್ಚುವರಿ ತೆರಿಗೆ ಮತ್ತು ಡೀಸೆಲ್ ಮೇಲೆ 21% ಆಗಿದೆ. ಕರ್ನಾಟಕದ ಪರಿಷ್ಕೃತ ದರಗಳು ಇನ್ನೂ ಕೈಗೆಟುಕುವ ದರದಲ್ಲಿವೆ.
ವ್ಯಾಟ್ ಹೆಚ್ಚಳದ ಹೊರತಾಗಿಯೂ,ಕರ್ನಾಟಕದಲ್ಲಿ ಡೀಸೆಲ್ ಬೆಲೆ ಗುಜರಾತ್ ಮತ್ತು ಮಧ್ಯಪ್ರದೇಶಕ್ಕಿಂತ ಕಡಿಮೆಯಾಗಿದೆ.
ನಮ್ಮ ನಾಗರಿಕರಿಗೆ ಇಂಧನ ಬೆಲೆಗಳನ್ನು ಸಮಂಜಸವಾಗಿಡಲು ನಾವು ಬದ್ಧರಾಗಿದ್ದೇವೆ. ಎನ್ನುವ ಮೂಲಕ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಆಗಿನ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಕರ್ನಾಟಕದ ಸಂಪನ್ಮೂಲಗಳನ್ನು ಬೇರೆ ರಾಜ್ಯಗಳಿಗೆ ತಿರುಗಿಸಲು ಸಹಕರಿಸಿತು. ರಾಜ್ಯ ಬಿಜೆಪಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡುತ್ತಲೇ ಇತ್ತು ಆದರೆ ಕೇಂದ್ರ ಸರ್ಕಾರ ತನ್ನದೇ ಆದ ತೆರಿಗೆಯನ್ನು ಹೆಚ್ಚಿಸಿದೆ.
ಈ ಕುಶಲತೆಯು ಕರ್ನಾಟಕಕ್ಕೆ ಆದಾಯವನ್ನು ಕಡಿಮೆ ಮಾಡಲು ಕಾರಣವಾಯಿತು, ಆದರೆ ಕೇಂದ್ರ ಸರ್ಕಾರವು ತನ್ನ ಬೊಕ್ಕಸಕ್ಕೆ ಹೆಚ್ಚು ಸಂಗ್ರಹಿಸಿತು, ಕನ್ನಡಿಗರಿಗೆ ಮೋಸ ಮಾಡಿತು.
ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 9.21 ರಿಂದ 32.98 ಕ್ಕೆ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 3.45 ರಿಂದ 31.84 ಕ್ಕೆ ಹೆಚ್ಚಿಸಿದೆ. ಈ ಹೆಚ್ಚಿನ ತೆರಿಗೆಗಳು ನಮ್ಮ ನಾಗರಿಕರ ಮೇಲೆ ಹೊರೆಯಾಗಿದೆ.
ನಂತರದ ಕಡಿತಗಳ ಹೊರತಾಗಿಯೂ, ಪ್ರಸ್ತುತ ಕೇಂದ್ರೀಯ ಅಬಕಾರಿ ಸುಂಕವು ಪೆಟ್ರೋಲ್ ಮೇಲಿನ ರೂ 19.9 ಮತ್ತು ಡೀಸೆಲ್ ಮೇಲೆ ರೂ 15.8 ಆಗಿದೆ. ಜನರ ಅನುಕೂಲಕ್ಕಾಗಿ ಈ ತೆರಿಗೆಗಳನ್ನು ಕಡಿಮೆ ಮಾಡಲು ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಕೇಂದ್ರ ಸರ್ಕಾರದ ಮೇಲೆ ಕಿಡಿ ಕಾರಿದ್ದಾರೆ.
ಕರ್ನಾಟಕದ ವ್ಯಾಟ್ ಹೊಂದಾಣಿಕೆಯು ನಾವು ಅಗತ್ಯ ಸಾರ್ವಜನಿಕ ಸೇವೆಗಳು ಮತ್ತು ಅಭಿವೃದ್ಧಿ ಯೋಜನೆಗಳಿಗೆ ಹಣವನ್ನು ನೀಡಬಹುದೆಂದು ಖಚಿತಪಡಿಸುತ್ತದೆ. ರಾಜ್ಯವು ಸಮತೋಲಿತ ಮತ್ತು ಜವಾಬ್ದಾರಿಯುತ ಆಡಳಿತಕ್ಕೆ ಬದ್ಧವಾಗಿದೆ. ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.