ರಾಜ್ಯ ಸುದ್ದಿ

ಮುಗಳಖೋಡ: ಮೊಬೈಲ್ ಅಂಗಡಿ ಕಳ್ಳತನ ಆರೋಪಿಗಳ ಬಂಧನ

ಹಾರೂಗೇರಿ ಪಟ್ಟಣದ ಕೆನರಾ ಬ್ಯಾಂಕ್ ಸಹಕಳತನ ಮಾಡಲು ಯತ್ನಿಸಿದ್ದರು.

Share News

ಮುಗಳಖೋಡ: ಮೊಬೈಲ್ ಅಂಗಡಿ ಕಳ್ಳತನ ಆರೋಪಿಗಳ ಬಂಧನ

ಮುಗಳಖೋಡ ಪಟ್ಟಣದಲ್ಲಿ ಮೊಬೈಲ್ ಅಂಗಡಿ ಕಳ್ಳತನ ಮಾಡಿದ ಆರೋಪಿಗಳನ್ನು ಬಂದಿಸಿದ ಹಾರೂಗೇರಿ ಪೊಲೀಸರು, ವಶಪಡಿಸಿಕೊಂಡ ಮೊಬೈಲುಗಳೊಂದಿಗೆ ಪೋಲಿಸರು.

ಮುಗಳಖೋಡ:ಸತ್ಯ ಮಿಥ್ಯ ( ಜೂ -24).

ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮುಗಳಖೋಡ ಪಟ್ಟಣದಲ್ಲಿ ಗುರುವಾರ ಜೂ.20 ತಡರಾತ್ರಿ ಪಟ್ಟಣದ ಮಲ್ಲಿಕಾರ್ಜುನ ಕಮ್ಯುನಿಕೇಶನ್ ಅಂಗಡಿ ಒಡೆದು ಸ್ಯಾಮ್ಸಂಗ್ ಎಸ್ 24 ಅಲ್ಟ್ರಾ ಮೊಬೈಲ್ ಸೇರಿದಂತೆ ಒಟ್ಟು 07 ವಿವಿಧ ಕಂಪನಿಯ ಅಂದಾಜು 2.84 ಲಕ್ಷ ರೂಗಳ ಮೊಬೈಲಗಳನ್ನು ಕಳುವು ಮಾಡಿದ ಮೂರು ಜನ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಮೂಡಲಗಿ ಪಟ್ಟಣದ ಸುಭಾಷ ಅರ್ಜುನ ಹೊಸಕೋಟಿ, ಹಾರೂಗೇರಿ ಪಟ್ಟಣದ ಹನುಮಂತ ಲಕ್ಕಪ್ಪ ಕುರಣಿ ಹಾಗೂ ಶಾಂತಿ ಸಾಗರ್ ಅಲಿಯಾಸ್ ಶಾಂತು ಅಲ್ಲಪ್ಪ ಕುರಣಿ ಮೊಬೈಲುಗಳ ಕದ್ದ ಆರೋಪಿಗಳು.

ಆರೋಪಿತರು ಈ ಹಿಂದೆ ಹಾರೂಗೇರಿ ಪಟ್ಟಣದ ಕೆನರಾ ಬ್ಯಾಂಕ್ ಸಹಕಳತನ ಮಾಡಲು ಯತ್ನಿಸಿದ್ದು ಎಂದು ತನಿಖೆಗಳಿಂದ ತಿಳಿದು ಬಂದಿದೆ ಎಂದು ಸಿಪಿಐ ಡಿ ರವಿಚಂದ್ರನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಳಗಾವಿ ಎಸ್‌ಪಿ ಡಾ.ಭೀಮಾಶಂಕರ ಗುಳೇದ ಮಾರ್ಗದರ್ಶನದಲ್ಲಿ ಅಡಿಷನಲ್ ಎಸ್ಪಿ ಕು.ಶೃತಿ ಎನ್.ಎಸ್, ಅಡಿಷನಲ್ ಎಸ್‌ಪಿ ಆರ್.ಬಿ.ಬಸರಗಿ, ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ ಅವರುಗಳ ಮಾರ್ಗದರ್ಶನದಂತೆ ಸಿಪಿಐ ಡಿ.ಬಿ.ರವಿಚಂದ್ರನ್, ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಹಾಗೂ ಸಿಬ್ಬಂದಿಗಳು ತಂಡ ರಚನೆ ಮಾಡಿ ಪ್ರಕರಣವು ದಾಖಲಾದ ಎರಡೇ ದಿನದಲ್ಲಿ ಪ್ರಕರಣವನ್ನು ಭೇದಿಸಿ ಎರಡು ಜನ ಆರೋಪಿತರನ್ನು ಬಂಧಿಸಿ, ಬಂಧಿತ ಆರೋಪಿಗಳಿಂದ ಅಂದಾಜು 2.84 ಲಕ್ಷ ರೂಪಾಯಿಗಳ ಮೌಲ್ಯದ 07 ಆಂಡ್ರಾಯ್ಡ್ ಮೊಬೈಲ್ ಗಳನ್ನು ವಶಪಡಿಕೊಂಡಿರುತ್ತಾರೆ.

ತನಿಖಾ ತಂಡದ ನೇತೃತ್ವವನ್ನು ವೃತ್ತ ನಿರೀಕ್ಷಕ ಡಿ.ಬಿ.ರವಿಚಂದ್ರನ್, ಠಾಣಾ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ವಹಿಸಿದ್ದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಬಿ.ಎಲ್.ಹೊಸಟ್ಟಿ, ರಮೇಶ ಮುಂದಿನಮನಿ, ಎ.ಎಸ್.ಶ್ಯಾಂಡಗೆ, ಎಚ್.ಆರ್.ಅಂಬಿ, ಸುರೇಶ ಲೋಕುರೆ, ಪಿ.ಎಂ.ಸಪ್ತಸಾಗರ, ವಿನೋದ ತಕ್ಕಣ್ಣವರ, ವ್ಹಿ.ಪಿ.ದೊಡಮನಿ, ತಂಡದಲ್ಲಿ ಕಾರ್ಯನಿರ್ವಹಿಸಿದ ಎಲ್ಲರನ್ನು ಎಸ್ಪಿ ಡಾಕ್ಟರ್. ಭೀಮಾಶಂಕರ ಗುಳೇದ ಶ್ಲಾಘಿಸಿದ್ದಾರೆ.

ವರದಿ : ಸಂತೋಷ ಮುಗಳಿ.

 

 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!