ಕೊಟ್ಟಿದ್ದು ತನಗೆ , ಬಚ್ಚಿಟ್ಟಿದ್ದು ಪರರಿಗೆ.ಕೊಟ್ಟಿದ್ದು ಕೆಟ್ಟಿತೆನಬೇಡ. ಮುಂದೆಕಟ್ಟಿಹುದು ಬುತ್ತಿ ಸರ್ವಜ್ಞ. :-ಶಿವಶರಣ ಗದ್ದಿಗೆಪ್ಪಜ್ಜ.

ಕೊಟ್ಟಿದ್ದು ತನಗೆ , ಬಚ್ಚಿಟ್ಟಿದ್ದು ಪರರಿಗೆ.ಕೊಟ್ಟಿದ್ದು ಕೆಟ್ಟಿತೆನಬೇಡ. ಮುಂದೆಕಟ್ಟಿಹುದು ಬುತ್ತಿ ಸರ್ವಜ್ಞ. :-ಶಿವಶರಣ ಗದ್ದಿಗೆಪ್ಪಜ್ಜ.
ಕೊಪ್ಪಳ / ಇಟಗಿ : ಸತ್ಯಮಿಥ್ಯ (ಅ -09).
ಕೈ ಎತ್ತಿ ದಾನ ಕೊಟ್ಟಿದ್ದು ತನಗೆ ಬೇರೆ ಯಾವುದೋ ರೂಪದಲ್ಲಿ ಸಹಾಯಕ್ಕೆ ಬರುವುದು ಹಾಗೂ ಇರಲಿ ಎಂದು ಮುಚ್ಚಿಟ್ಟದ್ದು ಪರರಿಗೆ ಆಗುವುದು, ಅಂದರೆ ಯಾರೋ ಅದನ್ನು ದೋಚಿಕೊಳ್ಳುವರು. ದಾನಕೊಟ್ಟು ಕೆಟ್ಟೆ ಎಂದು ನುಡಿಯಬೇಡ. ಅದು ನಿನಗೆ ಮುಂದೆ ಕಟ್ಟಿಟ್ಟ ಬುತ್ತಿಯಂತೆ ಉಪಯೋಗಕ್ಕೆ ಬರುವುದು ಎಂದುಶಿವಶರಣ ಗದಿಗೆಪ್ಪಜ್ಜನವರು ಹೇಳಿದರು.
ಕೊಪ್ಪಳ ಜಿಲ್ಲೆ, ಕುಕನೂರು ತಾಲೂಕ ಇಟಗಿ ಗ್ರಾಮದ ಶ್ರೀ ಮರುಳಸಿದ್ದೇಶ್ವರ ಪುಣ್ಯಾಶ್ರಮ ದ ಶಿವಶರಣ ಗದಿಗೆಪ್ಪಜ್ಜನವರು ಕುಕನೂರು ಪಟ್ಟಣದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿ ಮಾತನಾಡಿ.
ಪಾಲನಹಳ್ಳಿ ಮಠಕ್ಕೆ ಉದ್ಯಮಿ ಪಿ.ಓ.ಓಸ್ವಲ್ ಜೈನ ಅವರು ಮಠಕ್ಕೆ ಮೂರು ಸಾವಿರ ಎಕರೆ ಭೂಮಿ ದಾನ ನೀಡಿರುವುದನ್ನು ಕೇಳಿ ತುಂಬಾ ಸಂತೋಷವೆನಿಸುತ್ತದೆ.
ಬೆಂಗಳೂರು ಮಾಗಡಿ ತಾಲೂಕಿನ ಪಾಲನಹಳ್ಳಿ ಮಠಾಧ್ಯಕ್ಷರಾದ ಡಾ. ಸಿದ್ದರಾಜು ಸ್ವಾಮೀಜಿ ಅವರ ಸಾಮಾಜಿಕ ಸೇವೆ. ಕಾರ್ಯಗಳನ್ನು ಮೆಚ್ಚಿ ಮಠಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಮೂರು ಸಾವಿರ ಎಕರೆ ಗಣಿಗಾರಿಕೆ ಜಾಗವನ್ನು ಓಸ್ವಲ್ ಗಣಿ ಉದ್ಯಮದ ದಾಖಲಾತಿಗಳನ್ನು ಮಠಕ್ಕೆ ಸಂಸ್ಥೆಯ ಮುಖ್ಯಸ್ಥರಾದ ಪಿ.ಬಿ.ಓಸ್ವಲ್ ದಾನವಾಗಿ ದಾಖಲಾತಿಗಳನ್ನು ಹಸ್ತಾಂತರ ಮಾಡಿದ್ದರು. ಸೋಲೂರು ಹೋಬಳಿಯ ಪಾಲನಹಳ್ಳಿ ಮಠದ ಸಾಮಾಜಿಕ ಕಾರ್ಯ ಭಾಗವಾದ ಆಯುರ್ವೇದ ಆಸ್ಪತ್ರೆ, ಶಿಕ್ಷಣ ಸಂಸ್ಥೆ ಸ್ಥಾಪಿಸಲು ಸಹಕಾರವಾಗಿದೆ.
ಈ ನಿಟ್ಟಿನಲ್ಲಿ ಪಾಲನಹಳ್ಳಿ ಮಠದ ಡಾ. ಸಿದ್ದರಾಜು ಸ್ವಾಮೀಜಿ ಅವರ ಕೃಪಾಕಟಾಕ್ಷ ನಮ್ಮ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದ ಶ್ರೀ ಮರಳು ಸಿದ್ದೇಶ್ವರ ಪುಣ್ಯಶ್ರಮ ವತಿಯಿಂದ 26.01.2023ರಲ್ಲಿ ಹಮ್ಮಿಕೊಂಡಿದ್ದ ಗುರು ವಂದನ ಕಾರ್ಯಕ್ರಮ ಹಾಗೂ ಐವತ್ತೊಂದು ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳಿಗೆ ಆಗಮಿಸಿ ನಮ್ಮ ಭೂಮಿಯನ್ನು ಪುನೀತಗೊಳಿಸಿದ ಸ್ವಾಮಿಗಳವರಿಗೆ 3000 ಎಕ್ಕರೆ ಮಠಕ್ಕೆ ಉದ್ಯಮಿ ಪಿ.ವಿ.ಓಸ್ವಲ್ ಜೈನ ಪಾಲನಹಳ್ಳಿ ಮಠಕ್ಕೆ ದಾನ ನೀಡಿದ್ದಕ್ಕಾಗಿ ತುಂಬಾ ಸಂತೋಷವೆನಿಸುತ್ತದೆ.
ಸೇವೆ ಮಾಡುವುದರಲ್ಲಿ ಸ್ವರ್ಗವಿದೆ. ಗುರುವಿನ ಸೇವೆಗಾಗಿ ತನು, ಮನ ಹಾಗೂ ಧನ ಸಹಾಯ ಮಾಡಬೇಕು. ಧರ್ಮ ಕಾರ‌್ಯಗಳು ಪವಿತ್ರ ಕಾರ‌್ಯಗಳು ಗಳಿಸಿದ ಸಂಪತ್ತು ಸತ್ಕಾರ್ಯ ಮತ್ತು ಧರ್ಮಕಾರ್ಯಗಳಿಗೆ ಸದ್ವಿನಿಯೋಗವಾಗಬೇಕು. ಹಂಚಿಕೊಂಡು ಬದುಕುವುದರಲ್ಲಿ ಸುಖ ಸಂತೋಷ ನೆಮ್ಮದಿಯಿದೆ. ಮನಸ್ಸು ಸಿರಿವಂತವಾದರೆ ಬದುಕು ಸಿರಿವಂತವಾಗುತ್ತದೆ.
ಮನುಷ್ಯನಿಗೆ ದಾನ ಮಾಡುವ ಒಳ್ಳೆಯ ಮನಸ್ಸಿರಬೇಕು. ಬೇಡುವುದಕ್ಕಿಂತ ಕೊಡುವ ಕೈ-ಮನಸ್ಸು ಶ್ರೇಷ್ಠವಾದುದು ಎಂದು ಶಿವಶರಣ ಗದಿಗೆಪ್ಪಜ್ಜನವರು ಹೇಳಿದರು.
ಈ ಸಂದರ್ಭದಲ್ಲಿ ಶಿವಶರಣ ಗದ್ದಿಗೆಪ್ಪಜ್ಜನವರು,ಯಲ್ಲಪ್ಪ ದೊಡ್ಮನಿ, ಈಶಪ್ಪ ಶಿರೂರು, ಶರಣಪ್ಪ ಹಲಗಿ, ಈರೇಶ್ ಮನ್ನಾಪುರ್ ಇದ್ದರು
ವರದಿ : ಚನ್ನಯ್ಯ ಹಿರೇಮಠ.