ಸಿಎಂ ಸಿದ್ದರಾಮಯ್ಯನವರಿಗೆ ಎರಡು ದಿನ ರಿಲೀಫ್.
ಬೆಂಗಳೂರು : ಸತ್ಯಮಿಥ್ಯ (ಅಗಸ್ಟ್ -29).
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಶೂಕ್ಯೂಷನ್ಗೆ ಅನುಮತಿಗೆ ಸಂಬಂಧಿಸಿದಂತೆ. ರಾಜ್ಯ ಉಚ್ಚ ನ್ಯಾಯಾಲಯ ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
ಇಂದು ನ್ಯಾಯಾಲಯದ ಮುಂದೆ ವಾದ ಮಂಡಿಸಿದ ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನು ಸಿಂಗ್ವಿ. ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯಪಾಲರು ನಮ್ಮ ವಿವೇಚನೆಯನ್ನು ಮರೆತಿದ್ದಾರೆ. ಈ ಮುಂಚೆ ಇರುವ ಶಶಿಕಲಾ ಜೊಲ್ಲೆ, ನಿರಾಣಿ, ಕುಮಾರಸ್ವಾಮಿ ವಿರುದ್ಧ ಪ್ರಕರಣಗಳಿಗೆ ಅನುಮತಿ ನೀಡದೆ ತುರಾತುರಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದಾರೆ. ಕ್ಯಾಬಿನೆಟ್ ನಿರ್ಧಾರವನ್ನು ಗಮನಿಸಿಲ್ಲ,ಸಿದ್ದರಾಮಯ್ಯ ವಿರುದ್ದ ಟಿ. ಜೆ. ಅಬ್ರಹಾಂ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯಪಾಲರ ಅನುಮತಿಯಲ್ಲಿ ಮೂವರು ದೂರು ದಾಖಲಿಸಲು ಅನುಮತಿ ನೀಡಿದ್ದಾರೆ. ದೂರುದಾರರು ಸಿದ್ದರಾಮಯ್ಯನವರನ್ನು ಸಿ ಎಂ ಸ್ಥಾನದಿಂದ ವಜಾಗೊಳಿಸಲು ಕೋರಿದ್ದಾರೆ ವಿನಹ ಪ್ರಾಶೂಕ್ಯೂಷನ್ಗೆ ಕೇಳಿದ ಅಂಶಗಳಿಲ್ಲ. ಯಾವುದೇ ಪೊಲೀಸರು ತನಿಖೆಗೆ ಅನುಮತಿ ಕೇಳಿಲ್ಲ. ಮನೇಕಾ ಗಾಂಧಿ ಕೇಸ್ ಉಲ್ಲೇಖ.ಕೋರ್ಟ್ ಮತ್ತು ರಾಜ್ಯಪಾಲರ ಮುಂದೆ ಅಬ್ರಹಾಂ ಒಂದೊಂದು ಹೇಳಿಕೆ ನೀಡಿದ್ದಾರೆ.ಕೋರ್ಟ್ನಲ್ಲಿ ಪಿಸಿಆರ್ ಹಾಕುವ ಮುನ್ನವೇ ಪೂರ್ವಾನುಮತಿ ಕೋರಿದ್ದಾರೆ.
ಪಿ.ಸಿ.ಕಾಯ್ದೆ 17 ಎ ಅಡಿ ಪೂರ್ವಾನುಮತಿ ಬೇಕು. 17 ಎ ಮಾನದಂಡ ಪಾಲನೆಯಾಗದಿದ್ದರೂ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿ ಅನುಮತಿ ಪಡೆಯದೇ ತನಿಖೆ ಮಾಡುವಂತಿಲ್ಲ. ಸಾರ್ವಜನಿಕ ಸೇವಕನ ಶಿಫಾರಸು, ನಿರ್ಧಾರಗಳ ಕುರಿತಾದ ತನಿಖೆ ಇರಬೇಕು. ಈ ಎರಡೂ ಅಂಶಗಳನ್ನು ರಾಜ್ಯಪಾಲರು ಪಾಲಿಸಿಲ್ಲ.ಹಲವು ವೈವಿಧ್ಯಮಯ ವಿಚಾರಗಳನ್ನು ಕ್ಯಾಬಿನೆಟ್ ಪ್ರಸ್ತಾಪಿಸಿತ್ತು. ಅವುಗಳಲ್ಲಿ ಒಂದಕ್ಕೂ ರಾಜ್ಯಪಾಲರು ಉತ್ತರಿಸಿಲ್ಲ.ಜನ ಆಯ್ಕೆ ಮಾಡಿದ ಸರ್ಕಾರವನ್ನು ರಾಜ್ಯಪಾಲರು ಇಂಥ ಕ್ರಮಗಳಿಂದ ಬದಲಿಸಲಾಗದು. ಹೀಗಾಗಿಯೇ ರಾಜ್ಯಪಾಲರ ಅಧಿಕಾರಗಳಿಗೆ ನಿರ್ಬಂಧಗಳಿವೆ. ಹೀಗಾಗಿ ರಾಜ್ಯಪಾಲರೂ ಸಹಜ ನ್ಯಾಯದ ಪ್ರಕ್ರಿಯೆ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದರು.
ಡಿನೋಟಿಫಿಕೇಷನ್ ಗಾಗಿ ಸಿದ್ದರಾಮಯ್ಯ ಯಾವುದೇ ಪ್ರತಿಫಲ ಪಡೆದಿಲ್ಲ. 2004 ರಲ್ಲಿ ಸಿಎಂ ಮೈದುನನಿಗೆ ಜಮೀನು ವರ್ಗಾವಣೆಯಾಯಿತು.. 2005 ರಲ್ಲಿ ಭೂಮಿಯನ್ನು ಕೃಷಿಯೇತರ ಪರಿವರ್ತನೆ ಮಾಡಲಾಯಿತು. 2010 ರಲ್ಲಿ ಸಿಎಂ ಪತ್ನಿ ಭೂಮಿಯನ್ನು ಖರೀದಿ ಮಾಡಿದರು. ಜಮೀನಿಗೆ ಬದಲಿಯಾಗಿ ನಿವೇಶನ ಪಡೆದಿದ್ದಾರೆ. ಇದನ್ನು ದೊಡ್ಡ ಹಗರಣದಂತೆ ಬಿಂಬಿಸಲಾಗುತ್ತಿದೆ.
ರಾಜ್ಯಪಾಲರು ತಮ್ಮ ನಿರ್ಧಾರಕ್ಕೆ ಕಾರಣಗಳನ್ನು ನೀಡಿಲ್ಲ. ಕೇವಲ 4 ಪುಟಗಳ ಅನುಮತಿಯನ್ನಷ್ಟೇ ನೀಡಿದ್ದಾರೆ. ಡಿನೋಟಿಫಿಕೇಷನ್ ಆದೇಶವನ್ನು ಈ ಹಿಂದೆಯೂ ಹಲವರು ಮಾಡಿದ್ದಾರೆ. ಯಾವ ಆಧಾರದ ಮೇಲೆ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ ತಿಳಿಯುತ್ತಿಲ್ಲ. ಹೀಗಾಗಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಅನುಮತಿ ರದ್ದುಪಡಿಸಬೇಕು ಎಂದು ನಬಮ್ ರೇಬಿಯಾ, ಎಂ.ಪಿ.ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಕೇಸ್ ಉಲ್ಲೇಖಿಸಿ ತಮ್ಮ ವಾದ ಅಂತ್ಯಗೊಳಿಸಿದರು.
ವಿಚಾರಣೆ ನಡುವೆ ರಾಜ್ಯಪಾಲರ ಪರ ವಕೀಲರು ಸ್ಪಷ್ಟನೆ ಮತ್ತು ನ್ಯಾಯಧೀಶ ಎಂ ನಾಗಪ್ರಸನ್ನ ಪ್ರಶ್ನೆಗಳು ಕೇಳಿಬಂದವು.
ಎಲ್ಲ ವಾದವನ್ನು ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಎರಡು ದಿನ ಮುಂದೂಡಿ ಶನಿವಾರ ರಾಜ್ಯಪಾಲರ ಪರ ಸಾಲಿಸಿಟರ್ ತುಷಾರ ಮೆಹತಾ ವಾದವನ್ನು ಆಲಿಸಲಿದ್ದಾರೆ.
ಇದರಿಂದ ಸಿಎಂ ಸಿದ್ದರಾಮಯ್ಯನವರಿಗೆ ಎರಡು ದಿನಗಳ ಕಾಲ ತಾತ್ಕಾಲಿಕ ರಿಲೀಫ್ ಸಿಕ್ಕ ಹಾಗೆ ಆಗಿದೆ.
ವರದಿ : ಚನ್ನು. ಎಸ್.