ಹಿರಿಯ ಪತ್ರಕರ್ತ ಶಶಿಧರ್ ಭಟ್ ಆರೋಗ್ಯದಲ್ಲಿ ಚೇತರಿಕೆ – ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವು ನೀಡಬೇಕು ಸಾರ್ವಜನಿಕರು ಆಗ್ರಹ
ಹಿರಿಯ ಪತ್ರಕರ್ತ ಶಶಿಧರ್ ಭಟ್ ಆರೋಗ್ಯದಲ್ಲಿ ಚೇತರಿಕೆ – ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವು ನೀಡಬೇಕು ಸಾರ್ವಜನಿಕರು ಆಗ್ರಹ.
ಬೆಂಗಳೂರು : ಸತ್ಯಮಿಥ್ಯ ( ಜುಲೈ -21)
ನಾನು ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿದ್ದೇನೆ.ಅನಾರೋಗ್ಯ ಸಮಸ್ಯೆ ಈಗ ನನ್ನ ಕಣ್ಣನ್ನು ತೆರೆಸುತ್ತಿದೆ.ಆಸ್ಪತ್ರೆ ಜಗತ್ತು ಎಷ್ಟು ಕ್ರೂರವಾದದ್ದು ಎನಿಸುತ್ತಿದೆ. ಹಾಗೇನೇ ನಮ್ಮ ಸುತ್ತಲಿರುವವರು ಯಾರು ನಮ್ಮವರು! ಯಾರು ನಮ್ಮವರಿಲ್ಲ ಎಂಬ ಜ್ಞಾನೋದಯವಾಯಿತು.ಪ್ರೀತಿ ನಂಬಿಕೆ ಸಂಬಂಧ ಸುಳ್ಳು ಎಂದು ಮಾತ್ರ ನಾನು ಹೇಳಬಲ್ಲೆ. ಎಂದು ಹಿರಿಯ ಪತ್ರಕರ್ತ ಶಶಿಧರ್ ಭಟ್ ತಮ್ಮ ಅಸಹಾಯಕತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಡುವ ಮೂಲಕ ತೋಡಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಅವರ ಆರೋಗ್ಯ ಪರಿಸ್ಥಿತಿಯಲ್ಲಿ ಏರುಪೇರಾಗಿತ್ತು. ಆದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು ಈಗ ಚಿಕಿತ್ಸೆ ಫಲಕರಿಯಾಗಿದೆ ಎಂದು ತಿಳಿದು ಬಂದಿದೆ.
ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು. ತಮ್ಮ ಪತ್ರಿಕಾ ವೃತ್ತಿಯ ಮೂಲಕ ನಾಡಿನ ಜನರ ಉದ್ದಾರಕ್ಕಾಗಿ ಸರ್ಕಾರದ ಕಣ್ಣು ತೆರೆಸುವ ಕಾರ್ಯ ಮಾಡಿದ್ದಾರೆ. ನೇರ ನಿಷ್ಟುರವಾಗಿ ವರದಿ ಮಾಡುತ್ತಾ ಸ್ವಂತಕ್ಕೆ ಏನನ್ನು ಮಾಡಿಕೊಳ್ಳದ. ಎಲ್ಲವು ಸಮಾಜಕ್ಕೆ ಮೀಸಲಿಟ್ಟಿದ್ದಾರೆ. ಇಂತಹ ನಿಸ್ವಾರ್ಥ ಪತ್ರಕರ್ತರಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವಿನ ಹಸ್ತ ಚಾಚಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ವರದಿ : ಚನ್ನು. ಎಸ್.