
ನೇಯ್ಗೆಯಲ್ಲಿ “ಆಪರೇಷನ್ ಸಿಂಧೂರ” ಕೌಶಲ್ಯ ತೋರಿಸಿದ ನೇಕಾರ ತೇಜಪ್ಪನವರಿಗೆ ಸನ್ಮಾನ.
ಗಜೇಂದ್ರಗಡ : ಸತ್ಯ ಮಿಥ್ಯ (ಆ-07).
ನೇಕಾರಿಕೆ ಉದ್ಯೋಗ ಅವಸಾನದ ಅಂಚಿನಲ್ಲಿದ್ದು. ನೇಕಾರಿಕೆಯನ್ನೆ ಕುಲಕಸಭಾಗಿಸಿಕೊಂಡ ಬಹುತೇಕ ಕುಟುಂಬಗಳು ಇಂದು ಬೇರೆ ಬೇರೆ ವೃತ್ತಿಯ ಕಡೆಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದರಿಂದ ನೇಕಾರಿಕೆ ನಶಿಸಿಹೋಗುತ್ತಿದೆ. ಇಂತಹ ಕಾಲ ಘಟ್ಟದಲ್ಲಿ ಗದಗ ಜಿಲ್ಲೆಯ ಗಜೇಂದ್ರಗಡದ ನೇಕಾರ ತೇಜಪ್ಪ ಚಿನ್ನೂರ ತನ್ನ ನೇಕಾರಿಕೆಯ ಮುಖಾಂತರ ತಾನು ನೇಯುವ ಕೈ ಮಗ್ಗದ ಪಟ್ಟೇದ ಅಂಚಿನ ಸೀರೆಯಲ್ಲಿ ಅದ್ಭುತವಾಗಿ ” ಆಪರೇಷನ್ ಸಿಂಧೂರ್” “ಕನ್ನಡ ಭಾವುಟ” ಮೂಡಿಸಿರುವದು ಹೆಮ್ಮೆಯ ವಿಷಯ.
ತೇಜಪ್ಪ ಚಿನ್ನೂರರವರ ಕೌಶಲ್ಯ ಮೆಚ್ಚಿ ಇಂದು ಬೆಂಗಳೂರಿನ ಕಬ್ಬನ ಪಾರ್ಕಿನಲ್ಲಿರುವ ನೌಕರರ ಭವನದಲ್ಲಿ ನಡೆದ 11 ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ 20 ಸಾವಿರ ಮೊತ್ತದ ಪ್ರಶಸ್ತಿ ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಅಲ್ಲದೇ ಈ ನೇಕಾರನಿಗೆ 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು 8 ಸಾವಿರ ರೂಪಾಯಿ ವೃದ್ಯಾಪ್ಯ ವೇತನ ನೀಡುವ ಭರವಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ತೇಜಪ್ಪ ಚಿನ್ನೂರ ನೇಯ್ದ ಈ ಸೀರೆ. ಸಿಂಧೂರ ಚೆಕ್ಸ್ ಸೀರೆ ಎಂದು ಪ್ರಸಿದ್ದಿ ಪಡೆಯುತ್ತಿದೆ. ಈ ಸೀರೆ ಬೆಲೆ 8-10 ಸಾವಿರವಾಗುತ್ತದೆ ಎಂದು ಗಜೇಂದ್ರಗಡ ನೇಕಾರ ಸೊಸೈಟಿ ಕಾರ್ಯದರ್ಶಿ ಮಾರುತಿ ಲಾಳಿ ತಿಳಿಸಿದ್ದಾರೆ.
ಸನ್ಮಾನ ಸ್ವೀಕರಿಸಿ ಮಾತನಾಡಿದ ತೇಜಪ್ಪ ಚಿನ್ನೂರ ಈ ಪ್ರಶಸ್ತಿ ಸಿಕ್ಕಿದ್ದು ಬಹಳಷ್ಟು ಖುಷಿ ತಂದಿದೆ.ನನ್ನ ಶ್ರಮದ ಹಿಂದೆ ಗಜೇಂದ್ರಗಡ ನೇಕಾರರ ಸೊಸೈಯಿಟಿಯ ಆಡಳಿತ ಮಂಡಳ ಮತ್ತು ಸಿಬ್ಬಂದಿ ಬಹಳಷ್ಟು ಸಹಕಾರ ನೀಡಿದ್ದಾರೆ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

” ನೇಕಾರಿಕೆ ಒಂದು ಕೌಶಲ್ಯ ಇದು ನಮ್ಮ ನೆಲದ ಬದುಕಿನ ಆಸರೆ ನಮ್ಮ ಸಂಸ್ಥೆಯ ನೇಕಾರ ತೇಜಪ್ಪನ ಕೌಶಲ್ಯ ಮೆಚ್ಚಿ ಪ್ರಶಸ್ತಿ ಬಂದಿರುವದು ನಮ್ಮ ಊರಿಗೆ ಹೆಮ್ಮೆಯ ವಿಷಯ “
– ಅಶೋಕ ವನ್ನಾಲ – ಅಧ್ಯಕ್ಷರು ಗಜೇಂದ್ರಗಡ ನೇಕಾರರ ಸೊಸಾಯಿಟಿ.
ವರದಿ : ಚನ್ನು. ಎಸ್.