ರಾಜ್ಯ ಸುದ್ದಿ
ಹೈಕೋರ್ಟ್ ಆದೇಶ ಮೀರಿ!ನಾಳೆ ಬಸ್ ಬಂದ್? ಸರ್ಕಾರದ ಬೆದರಿಕೆಗೆ ಹೆದರಬೇಡಿ ಶಾಂತವಾಗಿ ಪ್ರತಿಭಟಿಸಿ : ಸುಬ್ಬರಾವ್.

ಹೈಕೋರ್ಟ್ ಆದೇಶ ಮೀರಿ!ನಾಳೆ ಬಸ್ ಬಂದ್? ಸರ್ಕಾರದ ಬೆದರಿಕೆಗೆ ಹೆದರಬೇಡಿ ಶಾಂತವಾಗಿ ಪ್ರತಿಭಟಿಸಿ : ಸುಬ್ಬರಾವ್.
ಬೆಂಗಳೂರು – ಸತ್ಯಮಿಥ್ಯ (ಆ-04).
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಇಲಾಖೆ ಮುಖಂಡರ ನಡುವೆ ನಡೆದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ನಾಳೆಯಿಂದ ಬಸ್ ಸಂಚಾರ ಬಂದ್ ಮಾಡಲಾಗುವದು ಮತ್ತು ಸರ್ಕಾರದ ಬೆದರಿಕೆಗೆ ಹೆದರಬೇಡಿ ಅಲ್ಲದೇ ಶಾಂತಯುತವಾಗಿ ಪ್ರತಿಭಟಿಸಿ ಎಂದು ಸುದ್ದಿಗೋಷ್ಠಿಯಲ್ಲಿ ಜಂಟಿ ಸಮಿತಿ ಅಧ್ಯಕ್ಷ ಸುಬ್ಬರಾವ್ ಹೇಳಿದರು.
ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದೆ. ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ನಡೆಸಿತು. ಸಾರಿಗೆ ನೌಕರರ ಮುಷ್ಕರವನ್ನು ಒಂದು ದಿನ ಮುಂದೂಡುವಂತೆ ಹೈಕೋರ್ಟ್ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಸೂಚನೆ ನೀಡಿದೆ.
ವರದಿ: ಸುರೇಶ.