ಅಂತಾರಾಷ್ಟ್ರೀಯ

ರೋಗಗಳಿಗೆ ದಿವ್ಯ ಔಷಧಿ ಯೋಗ – ರವಿ ಹಲಗಿಯವರ ವಿಶೇಷ ಲೇಖನ.

ಯೋಗ ದಿನಾಚರಣೆಯ ಪ್ರಯುಕ್ತ ವಿಶೇಷ ಲೇಖನ

Share News

ರೋಗಗಳಿಗೆ ದಿವ್ಯ ಔಷಧಿ ಯೋಗ – ರವಿ ಹಲಗಿಯವರ ವಿಶೇಷ ಲೇಖನ.

“ಯೋಗ” ಜೀವನದ ಪರಿಪೂರ್ಣ ಅನುಭವವೇ ಹೊರೆತು ಮತ್ತೇನಲ್ಲ ಅದು ಪರಿಪೂರ್ಣ ಮಾನವ ವಿಜ್ಞಾನ. ಸ್ವಾಮಿ ವಿವೇಕಾನಂದರು ಯೋಗವು ಮಾನವನ ದಿವ್ಯ ಸಿದ್ಧಿ ಸಾಧನೆಯ ಪೂರ್ಣ ಅಂಗವಾಗಿದೆ ಯೋಗವು ಸರ್ವ ಅಂಗರೋಗಗಳಿಗೆ ದಿವ್ಯಾಔಷದವಾಗಿದೆ.ಯೋಗ ಪತಂಜಲಿ ಮಹರ್ಷಿಯವರ ಅಭಿಪ್ರಾಯದಂತೆ. ಯೋಗವೆಂದರೆ ಕೂಡಿಸುವದು ಸೇರಿಸುವದು,ಜೋಡಿಸುವದಾಗಿದೆ. ಯೋಗಃ ಚಿತ್ತವೃತ್ತಿ ನಿರೋದಃ ಎನ್ನುತ್ತಾರೆ.ಯೋಗ ಸಾಧನೆಯಿಂದ ಮನಸ್ಸು ಬುದ್ದಿ ಹಾಗು ಅಹಂಕಾರ ಇವುಗಳ ಸಂಯಮ ಹಾಗು ನಿಯಮಿತ ಗೊಳಿಸಲಾಗುತ್ತದೆ.ದೇಹ ಮತ್ತು ಮನಸ್ಸನ್ನ ಹತೊಟಿಯಲ್ಲಿಡುವ ವಿಧಾನವನ್ನ ಬೋಧಿಸುತ್ತದೆ. ಸಮಸ್ಯೆಗಳನ್ನ ದೂರವಿಡುತ್ತದೆ ಯೋಗಸೂತ್ರಧಾರಿ ಪತಂಜಲಿ ಮಹರ್ಷಿಯನ್ನ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ “ಮಲಂ ಶರೀರಸ್ಯ ಚ ವೈದ್ಯಕೇನ” ಎಂಬ ವಾಕ್ಯ ಚಿಕಿತ್ಸಾ ಶಾಸ್ತ್ರವು ಅಡಗಿದೆ.

ಆದಿಕಾಲದ ಜನರ ಜೀವನದಲ್ಲಿ ಯೋಗವು ಅವಿಬಾಜ್ಯ ಅಂಗವಾಗಿತ್ತೆಂದು ತಿಳಿದು ಅದರ ಜ್ಞಾನವನ್ನ ಅರಿಯಲು ಪತಂಜಲಿ ಮಹರ್ಷಿಯು ಸುಲಭ ಸೂತ್ರಗಳ ಮೂಲಕ ತಿಳಿಸಿಕೊಟ್ಟಿದ್ದಾರೆ.ಒಟ್ಟಾರೆಯಾಗಿ ಯೋಗದಲ್ಲಿ ಎಂಟು ಪಥಗಳನ್ನ ಗುರುತಿಸಬಹುದು ಕ್ರಮವಾಗಿ

ಜ್ಙಾನಯೋಗ,ಭಕ್ತಿಯೋಗ,ಕರ್ಮಯೋಗ,ರಾಜ್ಯಯೋಗ ಹಠಯೋಗ, ಧ್ಯಾನಯೋಗ, ಕುಂಡಲಿನಿಯೋಗ ,ಲಯಯೋಗ.

ಜ್ಞಾನಯೋಗ :ನಾನು ಯಾರು? ಕೋಹಂ ನನ್ನ ಕೈ ಕಾಲು ನನ್ನ ಕಣ್ಣುಗಳು ಎಂದಾದಲ್ಲಿ ಇವುಗಳ ಹಿಂದಿರುವ ʼನಾನುʼನನ್ನ ನಿಯಂತ್ರಸುವ ಶಕ್ತಿಯಾವುದು? ಜೀವಾತ್ಮನಿಗು ಶಕ್ತಿಗೂಇರುವ ಸಂಬಂಧವೆನು?ಎಂಬುದನ್ನು ಅದ್ಯಾಯ,ತರ್ಕ,ಜಿಜ್ಞಾಸೆಗಳ ಮಾರ್ಗದಲ್ಲಿ ಮುಂದುವರೆದು ಗುರಿತಲುಪುವುದೆ ಜ್ಞಾನಯೋಗ.

ಭಕ್ತಿಯೋಗ :ಮಾನವ ತನ್ನ ತರ್ಕ.ಜಿಜ್ಞಾಸೆ,ನಮ್ಮಿಂದ ಸಾದ್ಯವಿಲ್ಲ ಎಂದಾಗ ಮತ್ತೋಂದು ಮಾರ್ಗ ನಾವು ಆರಿಸಿಕೊಳ್ಳಬಹುದು ನಾವು ಸ್ವಭಾವತ ಭಾವುಕರಾಗಿದ್ದಲ್ಲಿ ದೇವರ,ಗುರು ಇತ್ಯಾದಿಗಳಲ್ಲಿ ಗಮನ ಹರಿಸಿ ಭಕ್ತಿಮಾರ್ಗದಲ್ಲಿ ಮುನ್ನೆಡೆದು ಗುರಿತಲುಪಬಹುದು.ಭಕ್ತಿ ಭಾವನೆಗಳ ಪ್ರಧಾನ,ಭಜನೆ,ಪ್ರಾರ್ಥನೆ,ಪೂಜೆ,ಜಪ,ಧ್ಯಾನ ಈ ಮಾರ್ಗಗಳ ಮೂಲಕ ಗುರಿ ತಲುಪುವುದೆ ಭಕ್ತಿಯೋಗ.

ಕರ್ಮಯೋಗ : ಮಾನವನು ಗುರಿ ತಲುಪಲು ಮಾಡುವ ಕೆಲಸದಲ್ಲಿ ಶ್ರಧ್ದಾ,ಭಕ್ತಿಯಂದ ಸಂಪೂರ್ಣ ಗಮನವಿಟ್ಟು ಪ್ರತಿ ಫಲಾಪೇಕ್ಷಯಿಲ್ಲದೆ ಮಾಡುತ್ತಾ ನಿಷ್ಕಾಮ ಕರ್ಮದ ಮಾರ್ಗ.ನೀವು ಯಾವುದೇ ಕೆಲಸ ಮಾಡಿ ಅದಕ್ಕೆ ಒಂದಿಲ್ಲೋಂದು ಪ್ರತಿಫಲ ಸಿಗುತ್ತದೆ.ಇಂಥದ್ದೆ ಪ್ರತಿಫಲ ಸಿಗಬೇಕು ಎಂಬುದನ್ನ ಅಪೇಕ್ಷಿಸಿದಾಗ ನಮಗೆ ಸಿಗುವ ಪ್ರತಿಫಲವೆ ಕರ್ಮಾದಾರಿತವಾಗಿರುತ್ತದೆ.

ರಾಜ್ಯಯೋಗ:(ಅಸ್ಟಾಂಗಯೋಗ) ಪತಂಜಲಿ ಯೋಗ ನಮ್ಮ ಸ್ವಭಾವ ನಡುವಳಿಗಳ ಮೂಲನಿಯಂತ್ರಣ ಉಸಿರಾಟ,ಮನಸ್ಸಿನ ನಿಯಂತ್ರಣ ಸಾದಿಸಲು ಯೋಗಪಿತಾಮಹ ಪತಂಜಲಿ ಪ್ರೆರಣೇವಾದ ರಾಜ್ಯಯೋಗ.ಇದರಲ್ಲಿ ಎಂಟು ಪ್ರಕಾರವಾಗಿ ತಿಳಿಸಿಕೂಟ್ಟಿದ್ದಾರೆ ಯಮ,ನಿಯಮ,ಆಸನ,ಪ್ರಾಣಾಯಾಮ,ಪ್ರತ್ಯಾಹಾರ,ಧಾರಣ,ಧ್ಯಾನ,ಸಮಾದಿ ಗಳೆಂಬುದನ್ನ ವಿವರಿಸಿದ್ದಾರೆ “ಯಮ ಮತ್ತು ನಿಯಮ” ಸಮಾಜದೋಡನೆ ನಮ್ಮ ವರ್ತನೆಗಳು ಹೇಗಿರಬೇಕೆಂದು ನೀತಿಗಳನ್ನ ಪಾಲಿಸಬೇಕು ಎಂದು ವಿವರಿಸುತ್ತವೆ. “ಆಸನ,ಪ್ರಾಣಯಾಮ ಮತ್ತು ಪ್ರತ್ಯಾಹಾರ” ಇವುಗಳು ದೇಹ ಮತ್ತು ಇಂದ್ರಿಯಗಳ ನಿಗ್ರಹ ದೈಹಿಕ ಚಟುವಟಿಕೆಗಳನ್ನ ಉತ್ತಮಗೊಳಿಸಲು ವಿವರಿಸುತ್ತವೆ. “ಧಾರಣ,ಧ್ಯಾನ ಮತ್ತು ಸಮಾದಿ” ಇವುಗಳು ಮನಸ್ಸು ಬುದ್ದಿ ಮತ್ತು ಆತ್ಮಗಳ ಬಗ್ಗೆ ತಿಳಿಸಿಕೊಡುತ್ತವೆ.

ಹಠಯೋಗ : ಹಠ ಎಂದರೆ ನಿಮ್ಮಲ್ಲಿರುವ ಸೂರ್ಯ ಮತ್ತು ಚಂದ್ರ ಶಕ್ತಿಯನ್ನು ಸಮತೊಲನಗೊಳಿಸುವದು ಇದು ಮೂರನೆ ಕೇಂದ್ರನಾಡಿಯನ್ನ ಸಕ್ರಿಯ ಗೊಳಿಸುವ ವಿಜ್ಞಾನವಾಗಿದೆ ಹಠ ಎಂದರೆ ಅಚಲ ಪ್ರೆಯತ್ನ ಮಾಡುವದು.ಗುರಿ ಸಾಧನೆಗಳನ್ನ ಬೆನ್ನಟ್ಟಿ ಗುರಿ ಸಾದಿಸುವುದು ಎಂದಾಗಿದೆ.

ಧ್ಯಾನಯೋಗ : ಧ್ಯಾನವು ಮನಸ್ಸಿನ ನಿರಂತರ ಚಟುವಟಿಕೆಗಳನ್ನು ಶಾಂತಗೊಳಿಸಲು ಅನುಬವಿಸಲು ಒಂದು ತಂತ್ರವಾಗಿದೆ ಮನಸ್ಸಿನಲ್ಲಿ ಒಂದು ನಿರ್ದಷ್ಟ ವಸ್ತು,ಆಲೋಚನೆ,ಮಂತ್ರದಮೇಲೆ ಪ್ರಯತ್ನದಿಂದ ಹಿಡಿದಿಟ್ಟುಕೊಳ್ಳುವ ಪ್ರಯತ್ನ.ಧ್ಯಾನವು ಆತ್ಮಕ್ಕೆ ಆಹಾರ ವಾಗಿದೆ.ಪರಮಾತ್ಮನೋಡನೆ ಸಾಮರಸ್ಯ ಸಾದಿಸಿದ ಸ್ಥಿತಿಯನ್ನ ಧ್ಯಾನಯೋಗವಾಗಿದೆ.

ಕುಂಡಲನಿಯೋಗ:ಪ್ರತಿಯೊಂದು ಕ್ರೀಯಯು ಒಂದು ನಿರ್ದಿಷ್ಟ ಚಕ್ರದೊಂದಿಗೆ ದೇಹದ ಏಳು ಚಕ್ರಗಳು ಅಥವಾ ಶಕ್ತಿಗಳು ಶಕ್ತಿಬಿಂದುಗಳು ಮನಸ್ಸು ಮತ್ತು ದೇಹವನ್ನ ಜೊಡಿಸಲು ಸಹಾಯ ಮಾಡಿ ಅತ್ಯುತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಮತ್ತು ಯೋಗ ಕ್ಷಮತೆಯನ್ನ ಸೃಷ್ಠಿಸುತ್ತದೆ.

ಲಯಯೋಗ :ಪರಮ ಪ್ರಜ್ಞೆಯೊಂದಿಗೆ ವಿಲೀನ ಸಾದಿಸಲು ಯೋಗ ಸಮಾದಿ ಸ್ಥಿತಿಗೆ ಪರಮಾತ್ಮಾನೊಂದಿಗೆ ಲೀನವಾಗುವದು ಲಯಯೋಗವು ದೇಹದ ಮೇಲ್ಬಾಗದಲ್ಲಿರುವ ಸಹಸಾರದಿಂದ ಕಾರ್ಯ ನಿರ್ವಹಿಸುತ್ತದೆ.

ಈ ತರನಾಗಿರತಕ್ಕಂತ ಎಂಟು ಪ್ರಕಾರದ ಯೋಗ ಪಥಗಳು ನೊಡಿದಾ ಆರೋಗ್ಯದ ದೃಷ್ಠಿಯಲ್ಲಿ ಯೋಗವು ಕೂಡಾ ಒಂದು ದಿವ್ಯಾ ಔಷದಿ ಎಂದು ಕರೆಯಲ್ಪಡುವಾಗ ಭವರೋಗಗಳನ್ನ ದೂರಿಡಲು ಯೋಗಾ ಆರೋಗ್ಯ ಎಂದು ಕರೆಯಬಹುದು.ಸಹಜ,ಸರಳ,ಸುಂದರವಾದ ದೇಹ ಸೌಂದರ್ಯವನ್ನ ವೃದ್ದಿಯೊಂದಿಗೆ ಪ್ರಪುಲ್ಲ ಮನಸ್ಥಿತಿಯನ್ನ ಬೆಳಸಿಕೊಳ್ಳಲು ಸರಳತೆಯಿಂದ ಕ್ಲಿಷ್ಟದವರೆಗೆ ಯೋಗವನ್ನ ಮೈಗುಡಿಸಿಕೊಳ್ಳಬಹುದು. ಕೊನೆಯದಾಗಿ ಹೇಳುವುದಾದರೆ ಸರ್ವರೋಗಕ್ಕು ಯೋಗವೇ ಮದ್ದು.

ಲೇಖನ : ರವಿ.ಹಲಗಿ ದೈಹಿಕ ಶಿಕ್ಷಕರು, ಗಜೇಂದ್ರಗಡ 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Leave a Reply

Your email address will not be published. Required fields are marked *

Back to top button
error: Content is protected !!