ಡಷ್ಟಬಿನ್, ಬಾಕ್ ಎತ್ತಿಬಿಸಾಕಿದ ಎಬಿವಿಪಿ ಕಾರ್ಯಕರ್ತರು.
ಹಾಸ್ಟೆಲ್ ಆಯ್ಕೆ ಪ್ರಕ್ರಿಯೆ ವಿಳಂಬ ಖಂಡಿಸಿ ಎಬಿವಿಪಿ ಪ್ರತಿಭಟನೆ

ಗದಗ : ಹಾಸ್ಟೆಲ್ ಆಯ್ಕೆ ಪ್ರಕ್ರಿಯೆ ವಿಳಂಬ ಖಂಡಿಸಿ ಎಬಿವಿಪಿ ಪ್ರತಿಭಟನೆ
ಗದಗ:ಸತ್ಯಮಿಥ್ಯ ( ಜು -03)
ಹಾಸ್ಟೆಲ್ ಆಯ್ಕೆ ಪ್ರಕ್ರಿಯೆ ವಿಳಂಬ ಖಂಡಿಸಿ ಎಬಿವಿಪಿ ಪ್ರತಿಭಟನೆ ನಡೆಸಿದ್ದು, ನಗರದ ಬಿಸಿಎಂ ಇಲಾಖೆಯ ತಾಲೂಕು ಕಚೇರಿ ಮುತ್ತಿಗೆಗೆ ಯತ್ನಿಸಿದ್ದಾರೆ.ಕಛೇರಿಯಲ್ಲಿದ್ದ ಡಷ್ಟಬಿನ್, ಕಬ್ಬಿಣದ ಟೇಬಲ್ ಎತ್ತಿಬಿಸಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಜೊತೆಗೆ ಕಳೆದ ವರ್ಷ ಸರಿಯಾಗಿ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಿಲ್ಲ ಅಂತಾ ಕಿಡಿಕಾರಿದ್ದಾರೆ.
ಬಿಸಿಎಂ ಇಲಾಖೆಯ ತಾಲೂಕು ಕಚೇರಿ ಕಿಟಕಿ ಗಾಜು ಒಡೆದು ಆಕ್ರೋಶ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಲಿಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದಕ್ಕೆ ಬಗ್ಗದ ಪ್ರತಿಭಟನಾಕಾರರು ಬಿಸಿಎಂ ಹಾಸ್ಟೆಲ್ ಕಚೇರಿಗೆ ಮುತ್ತಿಗೆಗೆ ಯತ್ನಿಸಿದ್ದರು. ಈ ವೇಳೆ ಎಬಿವಿಪಿ ಕಾರ್ಯಕರ್ತರು ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ.
ಕಾಂಪೌಂಡ್ ಹತ್ತಿ ವಿದ್ಯಾರ್ಥಿಗಳು, ಕಾರ್ಯಕರ್ತರು ಒಳನುಗ್ಗಿದ್ದಾರೆ. ಕಚೇರಿ ಅಂಗಳದಲ್ಲಿ ಕೆಲ ಕಾಲ ಹೈಡ್ರಾಮಾ ನಡೆದಿದೆ. ಕಚೇರಿಗೆ ನುಗ್ಗಿ ಕೆಲ ಎಬಿವಿಪಿ ಕಾರ್ಯಕರ್ತರಿಂದ ಡಸ್ಟಬಿನ್, ಪೊರಕೆ ತೂರಾಡಿ ಪ್ರತಿಭಟನೆ ಮಾಡಿದ್ದಾರೆ. ಕಬ್ಬಿಣದ ಬಾಕ್ ಮೇಲಿಂದ ಎತ್ತಿ ಒಗೆಯಲು ಯತ್ನಿಸಿದ್ದು, ವಿದ್ಯಾರ್ಥಿಗಳನ್ನ ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ. ನಂತದ ಮನವಿ ಸಲ್ಲಿಸಿ ಅಲ್ಲಿಂದ ಎಬಿವಿಪಿ ಕಾರ್ಯಕರ್ತರು, ವಿದ್ಯಾರ್ಥಿಗಳು ಹೊರ ನಡೆದಿದ್ದಾರೆ.
ವರದಿ : ಮುತ್ತು.