ಟ್ರೆಂಡಿಂಗ್ ಸುದ್ದಿಗಳು

ಕಾಂ.ಸೀತಾರಾಮ್ ಯೆಚೂರಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ದೇಶದ ನಾಡಿಮಿಡಿತ ಅರಿತ ಸಂಸದೀಯ ಪಟು ಆರ್ಥಿಕ ಸಲಹೆಗಾರ ಸೀತಾರಾಮ್ ಯೆಚೂರಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

Share News

ಕಾಂ.ಸೀತಾರಾಮ್ ಯೆಚೂರಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ದೇಶದ ನಾಡಿಮಿಡಿತ ಅರಿತ ಸಂಸದೀಯ ಪಟು ಆರ್ಥಿಕ ಸಲಹೆಗಾರ ಸೀತಾರಾಮ್ ಯೆಚೂರಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಗಜೇಂದ್ರಗಡ:ಸತ್ಯಮಿಥ್ಯ(ಸ-13)

ಇಂದು ನಗರದ ಎಸ್ ಎಫ್ ಐ ಕಚೇರಿಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (SFI) ಗಜೇಂದ್ರಗಡ ತಾಲ್ಲೂಕು ಸಮಿತಿ ವತಿಯಿಂದ ಅಗಲಿದ ನೇತಾರ ಸೀತಾರಾಮ ಯೆಚೂರಿ ಅವರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಚಂದ್ರು ರಾಠೋಡ ಮಾತನಾಡಿ.SFI ಅಖಿಲ ಭಾರತ ಮಾಜಿ ಅಧ್ಯಕ್ಷರಾದ ಕಾಂ.ಸೀತಾರಾಮ್ ಯೊಚೂರಿ ಅವರು ನಮನ್ನಗಲಿದ್ದಾರೆ. 1975 ರಲ್ಲಿ JNU ವಿವಿ ಯಲ್ಲಿ ಅಧ್ಯಯನ ಮಾಡುವ ಸಮಯದಲ್ಲಿ ಅಂದಿನ ಪ್ರಧಾನಮಂತ್ರಿಯಾಗಿದ್ದ ಇಂದಿರಾಗಾಂಧಿ ವಿರುದ್ಧ ಹೋರಾಟ ಮಾಡಿ ಜೈಲಿಗೆ ಸೇರಿದ್ದರು ಮತ್ತು ಉಪಕುಲಪತಿ ರಾಜೀನಾಮೆ ಪಡೆಯಲು ಯಶಸ್ವಿಯಾಗಿದ್ದರು.ವಿದ್ಯಾರ್ಥಿ ಯುವಜನರು ರೈತರು ಕಾರ್ಮಿಕರ ಪರ ಯಶಸ್ವಿ ಸಂಘರ್ಷಾತ್ಮಕ ಹೋರಾಟಗಳನ್ನು ಕಟ್ಟಿ ಪಾರ್ಲಿಮೆಂಟ್ ಸದಸ್ಯರಾಗಿ ಎರಡು ಬಾರಿ ಅತ್ಯುತ್ತಮ ಸಂಸದೀಯ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ತಮ್ಮ ಜೀವನದ ಕೊನೆಯವರೆಗೂ ದುಡಿಯುವ ಜನರ ಪರವಾಗಿ, ಕೋಮುವಾದಿ ಫ್ಯಾಸಿಸ್ಟ್ ನ ಹಿಮ್ಮೆಟ್ಟಿಸಲು ಶ್ರಮಿಸಿದ ಕಾಮ್ರೇಡ್ ಸೀತಾರಾಮ್ ಯೆಚೂರಿ ಅವರ ಅಗಲಿಕೆ ದೇಶದ ದುಡಿಯುವ ಜನರ ಚಳುವಳಿಗೆ ತುಂಬಲಾರದ ನಷ್ಟ.

ಅವರು ಸಂಸದೀಯ ಅನೇಕ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಆರ್ಥಿಕ ಸಲಹೆ ನೀಡಿದ್ದಾರೆ ದೇಶದ ಜನರ ನಾಡಿ ಮಿಡಿತ, ಆರ್ಥಿಕತೆ, ಸಾಮಾಜಿಕತೆ,ರಾಜಕೀಯ,ಸಾಂಸ್ಕೃತಿಕತೆ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದರು ಸ್ಪಷ್ಟತೆಯ ನಿಲವು ಹೊಂದಿದ್ದರು ಸಲಹೆ ನೀಡುತ್ತಿದ್ದರು ಅವರ ಅಗಲಿಕೆ ದೇಶದ ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ತುಂಬಲಾರದ ನಷ್ಟ ಎಂದರು.

ಈ ಸಂದರ್ಭದಲ್ಲಿ ಎಸ್ ಎಫ್ ಐ ನ ಪದಾಧಿಕಾರಿಗಳಾದ ಅನಿಲ ರಾಠೋಡ, ಸುದೀಪ್ ಹುಬ್ಬಳ್ಳಿ, ಸಿಪಿಎಂ ಪಕ್ಷದ ನಗರ ಸಮಿತಿ ಕಾರ್ಯದರ್ಶಿ ಮೆಹಬೂಬ ಹವಾಲ್ದಾರ್ ಕಾರ್ಮಿಕ ಮುಖಂಡರಾದ ಕನಕರಾಯ ಹಾದಿಮನಿ, ಪ್ರಕಾಶ ಹೊಸಮನಿ, ಶರಣಪ್ಪ ಗೋಸಾವಿ, ಫೀರೋಜಿ ರಾಮಜಿ , ಕಳಕಪ್ಪ ಅವಧೂತ ಇದ್ದರು.

ವರದಿ : ಚನ್ನು. ಎಸ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!