
ಕುಕನೂರು : ಐಟಿಐ ಕಾಲೇಜು – ಉಳಿಕೆ ಸ್ಥಾನಗಳಿಗೆ ಆಫ್‌ಲೈನ್ ಅರ್ಜಿ ಆಹ್ವಾನ

ಕುಕನೂರ – ಸತ್ಯಮಿಥ್ಯ ( ಜುಲೈ -26).
ಪಟ್ಟಣದ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2024-25 ನೇ ಸಾಲಿಗೆ ಮೆರಿಟ್ ಕಂ ರಿಸರ್ವೇಷನ್ ಆಧಾರಿತ ಆನ್‌ಲೈನ್ ಪ್ರವೇಶ ಪ್ರಕ್ರಿಯೆಯು ಮುಕ್ತಾಯಗೊಂಡು ಉಳಿದ ಸ್ಥಾನಗಳಿಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಇಲಾಖೆಯ ನಿರ್ದೇಶನದಂತೆ ಪ್ರವೇಶ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ.
ಐರ್ನರ – 17, ಫಿಟ್ಟರ್ – 14, ಕೋಪಾ – 13, ಇ/ಎಮ್-04, ಎಮ್.ಎಮ್.ವಿ-12, ಮಶಿನಿಸ್ಟ್-18, ಎಮ್.ಇ.ವಿ-16, ಸಿ.ಎನ್.ಸಿ ವೃತ್ತಿಯಲ್ಲಿ 20 ಸ್ಥಾನಗಳು ಲಭ್ಯವಿದ್ದು, ವೃತ್ತಿಯ ಅನುಸಾರವಾಗಿ ವಿವಿಧ ತಾಂತ್ರಿಕ / ತಾಂತ್ರಿಕೇತರ ಐ.ಟಿ.ಐ. ವೃತ್ತಿಗಳಲ್ಲಿ ಉಳಿದ ಸ್ಥಾನಗಳಿಗೆ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿರುತ್ತದೆ. ಪ್ರವೇಶಕ್ಕಾಗಿ 10ನೇ ತರಗತಿ ಉತ್ತೀರ್ಣ/ಅನುತ್ತೀರ್ಣ ಅಭ್ಯರ್ಥಿಗಳು ಆಗಸ್ಟ್ 31 ರವರೆಗೆ ಆಫ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ. ದಿನಾಂಕ: 20/05/2024 ರಂದು 14 ವರ್ಷ ಮೇಲ್ಪಟ್ಟ ವಯೋಮಿತಿಯು ಕಡ್ಡಾಯವಾಗಿರುತ್ತದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಖುದ್ದಾಗಿ ಕುಕನೂರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಭೇಟಿ ನೀಡಿ ಅರ್ಜಿಗಳನ್ನು ಪಡೆದುಕೊಂಡು, ಅಂತಿಮ ದಿನಾಂಕದೊಳಗಾಗಿ ಅರ್ಜಿ ಭರ್ತಿ ಮಾಡಿ ಪ್ರವೇಶ ಪಡೆಯಬಹುದಾಗಿದೆ.
ಪ್ರವೇಶ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಮೊ.ಸಂ: 9964247098, 9481718859, 8618952961, 9945789400, 9164198246 ಗಳಿಗೆ ಅಥವಾ ಖುದ್ದು ಸಂಸ್ಥೆಗೆ ಭೇಟಿ ನೀಡಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಚೆನ್ನಯ್ಯ ಹಿರೇಮಠ