ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಘಟಕದ ಸಿಬ್ಬಂದಿಗಳಿಂದ ವಿಘ್ನೇಶ್ವರನ ಪೂಜೆ.
ನಾಳೆ ಘಟಕದಲ್ಲಿ ಅನ್ನಸಂತರ್ಪಣೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಘಟಕದ ಸಿಬ್ಬಂದಿಗಳಿಂದ ವಿಘ್ನೇಶ್ವರನ ಪೂಜೆ.
ಕೊಪ್ಪಳ:ಸತ್ಯಮಿಥ್ಯ (ಸ-07).
ಜಿಲ್ಲೆಯ ಕುಕನೂರ ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಘಟಕದ ಸಿಬ್ಬಂದಿ ವರ್ಗದವರಿಂದ ಗಣೇಶ ಪ್ರತಿಷ್ಠಾಪನ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
ಪೂಜೆಯನ್ನು ಸಮರ್ಪಿಸಿ ಮಾತನಾಡಿದ ಘಟಕ ವ್ಯವಸ್ಥಾಪಕ ಸೋಮಶೇಖರ ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕದ ವತಿಯಿಂದ ಶ್ರೀ ವಿಘ್ನೇಶ್ವರನ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದು ಮೂರು ದಿನಗಳ ಕಾಲ ಗಣಪತಿಯನ್ನು ಪೂಜಿಸಿ ನಂತರ ವಿಸರ್ಜನೆ ಮಾಡಲಾಗುತ್ತದೆ.
ನಾಳೆಯ ದಿನ ಘಟಕದಲ್ಲಿ ಪ್ರಸಾದ ಸೇವೆಯನ್ನು ನೆರವೇರಿಸಿದ್ದು ಎಲ್ಲಾ ಸಿಬ್ಬಂದಿ ವರ್ಗದವರು ಪ್ರಸಾದವನ್ನು ಸ್ವೀಕರಿಸಿ ಶ್ರೀ ವಿಘ್ನೇಶ್ವರನ ಕೃಪೆಗೆ ಪಾತ್ರರಾಗಬೇಕು . ಶ್ರೀ ವಿಘ್ನೇಶ್ವರನ ಸ್ಥಾಪನೆಗೆ ಸಿಬ್ಬಂದಿ ಸಹಕಾರ ಸಹಾಯ ಹೊಂದಾಣಿಕೆ ಮನೋಭಾವನೆಯಿಂದ ವಿಘ್ನೇಶ್ವರನ ಪ್ರತಿಷ್ಠಾಪನೆ ಕಾರ್ಯಕ್ರಮ ಯಶಸ್ವಿಗೊಳ್ಳುತ್ತಿದ್ದು. ನಮ್ಮ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಮತ್ತು ಎಲ್ಲಾ ನೌಕರಿ ವರ್ಗದ ಬಂಧುಗಳು ಸರ್ವರೂ ಸುಖಮಯದಿಂದ ಇರಲಿ ಎಂದು ವಿಘ್ನೇಶ್ವರನಲ್ಲಿ ಬೇಡಿಕೊಳ್ಳುತ್ತೇನೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿಸಿಬ್ಬಂದಿಗಳಾದ ವೀರಯ್ಯ ಹಿರೇಮಠ, ಮಂಜುನಾಥ ಕಳ್ಳಿಮನಿ, ಕಲ್ಲಪ್ಪ ಬನ್ನಿಕೊಪ್ಪ, ಪ್ರಕಾಶ ಬಂಡಿಹಾಳ, ಶರಣಪ್ಪ ಚೌಹಾಣ್, ಮಂಜೇರ ಹುಸೇನ, ಲಕ್ಷ್ಮಣ ಸಾಲಮನಿ, ಕಲ್ಪನಾ ಗಡಾದ, ಅಶೋಕ್ ಬಂಗಿ, ಸಿಬ್ಬಂದಿ ವರ್ಗದವರು ಇತರರು ಇದ್ದರು.
ವರದಿ : ಚನ್ನಯ್ಯ ಹಿರೇಮಠ.