
ಗಜೇಂದ್ರಗಡ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ತಾಲೂಕ ಘಟಕದ ಅಧ್ಯಕ್ಷರಾಗಿ ರೇಣುಕಾ ಯೆವೂರ ಆಯ್ಕೆ.
ಗದಗ : ಸತ್ಯಮಿಥ್ಯ (ಜುಲೈ -28)
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಗಜೇಂದ್ರಗಡ ತಾಲೂಕಾ ಘಟಕದ ಅಧ್ಯಕ್ಷರಾಗಿ ರೇಣುಕಾ ಯೆವೂರರವರನ್ನು ಜುಲೈ 25 ರಂದು ಆಯ್ಕೆ ಮಾಡಿ ಕಚುಸಾಪ ಜಿಲ್ಲಾ ಅಧ್ಯಕ್ಷರಾದ ಶೋಭಾ ಬಸವರಾಜ ಮೇಟಿಯವರು ಆದೇಶ ಹೊರಡಿಸಿದ್ದಾರೆ.
ಉಪಾಧ್ಯಕ್ಷ, ಖಜಾಂಚಿ, ಸಂಘಟನಾ ಕಾರ್ಯದರ್ಶಿ ಕಾರ್ಯಕಾರಿ ಮಂಡಳಿ ಸಲಹಾ ಸಮಿತಿ ಸೇರಿದಂತೆ ಕಚುಸಾಪ ತಾಲೂಕಾ ಘಟಕದ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ನೂತನ ಅಧ್ಯಕ್ಷರಿಗೆ ಆದೇಶಿಸಲಾಗಿದೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ನೂತನ ಅಧ್ಯಕ್ಷೆ ರೇಣುಕಾ ಯೆವೂರ. ನನ್ನ ಸಮಾಜಮುಖಿ, ಮಹಿಳೆಯರ ಸಬಲೀಕರಣದ ಚಿಂತನೆಯನ್ನು ಮೆಚ್ಚಿ ಈ ಸ್ಥಾನವನ್ನು ನೀಡಿದ್ದಾರೆ. ಚುಟುಕು ಸಾಹಿತ್ಯ ಪರಿಷತ್ತಿನ ಹಿರಿಯರ ಮಾರ್ಗದರ್ಶನದೊಂದಿಗೆ ಕಾರ್ಯಾಚಟುವಟಿಕೆಗಳನ್ನು ರೂಪಿಸಲಾಗುವದು ಎಂದರು.
ವರದಿ : ಸುರೇಶ ಬಂಡಾರಿ.