
ಸಮರ್ಪಕ ಬಸ್ ಒದಗಿಸಲು ಎಬಿವಿಪಿ ಯಿಂದ ಪ್ರತಿಭಟನೆ.
ಗಜೇಂದ್ರಗಡ : ಸತ್ಯಮಿಥ್ಯ (ಅ -05).
ಸಮರ್ಪಕ ಬಸ್ ಒದಗಿಸುವ ಕುರಿತು ನಗರದಲ್ಲಿ ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗಜೇಂದ್ರಗಡ ಶಾಖೆ ವತಿಯಿಂದ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಮುಖಂಡರು ಗಜೇಂದ್ರಗಡ ನಗರದಲ್ಲಿ ಸರಿಯಾದ ಸಮಯಕ್ಕೆ ಬಸ್ಸುಗಳು ಇಲ್ಲದ ಕುರಿತು, ಹಾಗೂ ಗಜೇಂದ್ರಗಡ ತಾಲ್ಲೂಕು ಕೇಂದ್ರವಾಗಿದ್ದರಿಂದ ಸಾವಿರಾರು ವಿದ್ಯಾರ್ಥಿಗಳು ಹಳ್ಳಿಯಿಂದ ವಿದ್ಯಾಭ್ಯಾಸ ಮಾಡಲು ಬರುವ ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗಲು ಬಹಳಷ್ಟು ತೊಂದರೆ ಯಾಗುತ್ತಿದೆ ಎಂದರು.
ಅದಕ್ಕಾಗಿ ಇಂದು ಗಜೇಂದ್ರಗಡ ಬಸ್ ನಿಲ್ದಾಣದ ಮುಂದೆ ಬಸ್ ಗಳನ್ನು ತಡೆಹಿಡಿದು ಪ್ರತಿಭಟನೆ ಮಾಡಿ ಗಜೇಂದ್ರಗಡ KSRTC ಘಟಕದ ಡಿಪೋ ಮ್ಯಾನೇಜರ್ ಗೆ ಮನವಿಯನ್ನು ನೀಡಲಾಯಿತು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅರುಣ್ ಬಾರ್ಕಿ ಧಾರವಾಡ ವಿಭಾಗ ಸೇವಾ ಪ್ರಮುಖರಾದ ರವಿ ನರೇಗಲ್, ತಾಲೂಕು ಸಂಚಾಲಕರು ಅಕ್ಷಯ್ ಕುಮಾರ್ ಇಟಗಿ, ತಾಲೂಕು ಸಹಸಂಚಾಲಕರು ದೇವರಾಜ್ ಮಡಿವಾಳರ, ಕಾರ್ಯಕರ್ತರಾದ ಅರುಣ್ ಬಳಿಗಾರ್, ನವೀನ್ ವ್ಯಾಪಾರಿ, ಶರಣಪ್ಪ ರಾಠೋಡ್, ಗಣೇಶ್ ಜಕ್ಕಲಿ, ಶ್ರೀದೇವಿ ಇಟಗಿ ಐಶ್ವರ್ಯ ತಳವಾರ,ಹಾಗೂ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.