ವಿದ್ಯಾರ್ಥಿ ಮೇಲೆ ಹಲ್ಲೆ ಇದಕ್ಕೆ ಮುಖ್ಯೋಪಾಧ್ಯಾಯ ಮತ್ತು ಶಾಲಾ ಶಿಕ್ಷಕರ ನಿರ್ಲಕ್ಷ ಕಾರಣ – ವಿದ್ಯಾರ್ಥಿ ಚಿಕ್ಕಪ್ಪ ರಮೇಶ ಆರೋಪ.

ವಿದ್ಯಾರ್ಥಿ ಮೇಲೆ ಹಲ್ಲೆ ಇದಕ್ಕೆ ಮುಖ್ಯೋಪಾಧ್ಯಾಯ ಮತ್ತು ಶಾಲಾ ಶಿಕ್ಷಕರ ನಿರ್ಲಕ್ಷ ಕಾರಣ – ವಿದ್ಯಾರ್ಥಿ ಚಿಕ್ಕಪ್ಪ ರಮೇಶ ಆರೋಪ.
ಗಜೇಂದ್ರಗಡ/ಲಕ್ಕಲಕಟ್ಟಿ : ಸತ್ಯಮಿಥ್ಯ (ಜು-09).
ಗಜೇಂದ್ರಗಡ ತಾಲೂಕಿನ ಲಕ್ಕಲಗಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದ ಘಟನೆ ಜರುಗಿದೆ. ಇದಕ್ಕೆ ಮುಖ್ಯೋಪಾಧ್ಯಾಯ ಮತ್ತು ಶಿಕ್ಷಕರ ಬೇಜವಾಬ್ದಾರಿ ಕಾರಣ ಎಂದು ವಿದ್ಯಾರ್ಥಿಯ ಚಿಕ್ಕಪ್ಪ ರಮೇಶ ಬೆನಕನವಾರಿ ಆರೋಪಿಸಿದ್ದಾರೆ.
ಘಟನೆ ವಿವರ : ಮಂಗಳವಾರ ಮದ್ಯಾಹ್ನ 2 ಗಂಟೆ ಸುಮಾರಿಗೆ ಇಬ್ಬರು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದ್ದು. ಆ ಸಂದರ್ಭದಲ್ಲಿ 3 ನೇ ತರಗತಿಯ ಪ್ರೀತಮ್ ಹೊಳಬಸಪ್ಪ ಬೆನಕನವಾರಿ ಎಂಬ ವಿದ್ಯಾರ್ಥಿಯ ಮರ್ಮಾಂಗಕ್ಕೆ ಮತ್ತು ಎಡಗೈಗೆ ಪೆಟ್ಟಾಗಿದೆ.ಆದರೆ ಇದನ್ನೂ ಶಾಲಾ ಮುಖ್ಯೋಪಾಧ್ಯಾಯರಾಗಲಿ ಅಥವಾ ಶಾಲಾ ಶಿಕ್ಷಕರಾಗಲಿ ಪಾಲಕರ ಗಮನಕ್ಕೆ ತಂದಿರುವುದಿಲ್ಲ. ಅಲ್ಲದೇ ಹಲ್ಲೆಗೊಳಗಾದ ವಿದ್ಯಾರ್ಥಿಯ ತಂಗಿ ಅದೇ ಶಾಲೆಯಲ್ಲಿ ಓದುತ್ತಿದ್ದು. ಶಿಕ್ಷಕರು ಆಕೆ ಘಟನೆಯ ವಿವರವನ್ನು ಪಾಲಕರಿಗೆ ಹೇಳಬಾರದೆಂದು ತಾಕಿತು ಮಾಡಿದ್ದಾರೆ ಎಂದು ವಿದ್ಯಾರ್ಥಿ ಪ್ರೀತಮ್ ಚಿಕ್ಕಪ್ಪ ಆರೋಪಿಸುತ್ತಿದ್ದಾರೆ ಅಲ್ಲದೇ ಮುಖ್ಯೋಪಾಧ್ಯಾಯ ಮತ್ತು ಶಿಕ್ಷಕರ ನಿರ್ಲಕ್ಷದಿಂದ ಇಂತಹ ಘಟನೆಗಳು ಹಾಗಾಗ್ಗೆ ಜರುಗುತ್ತಲಿರುತ್ತವೆ ಈ ಕುರಿತು ಡಿ ಡಿ ಪಿ ಐ ಮತ್ತು ಬಿಇಒ ಅವರಿಗೆ ಅನೇಕ ಸಲ ಮಾಹಿತಿಯನ್ನು ನೀಡಿದರು ಶಾಲೆಗೆ ಭೇಟಿ ನೀಡಿ ಕ್ರಮ ಕೈಗೊಂಡಿಲ್ಲ.ಈ ಕೂಡಲೇ ಶಾಲೆಗೆ ಭೇಟಿ ನೀಡಿ ಮುಖ್ಯೋಪಾಧ್ಯಾಯರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗಜೇಂದ್ರಗಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿನ್ನೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಒದಗಿದೆ.
ಈ ಕುರಿತು ಶಾಲೆಯ ಮುಖ್ಯೋಪಾಧ್ಯಾಯ ದನ ಒದ್ದಿದೆ ಎನ್ನುವ ಹಾರೈಕೆ ಉತ್ತರ ನೀಡುತ್ತಿದ್ದಾರೆ.
ವರದಿ: ಚನ್ನು. ಎಸ್.