ರಾಜ್ಯ ಸುದ್ದಿ

ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆ – ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು ಕಾಂಗ್ರೇಸಗೆ ಭಾರಿ ಮುಖಭಂಗ.

555ಮತಗಳಲ್ಲಿ 546 ಮತಚಲಾವಣೆ ಶೇ 99 ರಷ್ಟು ಮತದಾನ.

Share News

ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆ – ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು ಕಾಂಗ್ರೇಸಗೆ ಭಾರಿ ಮುಖಭಂಗ.

555ಮತಗಳಲ್ಲಿ 546 ಮತಚಲಾವಣೆ ಶೇ 99 ರಷ್ಟು ಮತದಾನ.

ಧಾರವಾಡ :ಸತ್ಯಮಿಥ್ಯ ( ಜು -01)

ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ರವಿವಾರ ಚುನಾವಣೆ ಜರುಗಿತು ಇದರಲ್ಲಿ ಬವುತೇಕರು ಬಿಜೆಪಿ ಬೆಂಬಲಿತ ಅಭ್ಯರ್ತಿಗಳು ಆಯ್ಕೆಯಾಗುವ ಮೂಲಕ ಕಾಂಗ್ರೇಸಗೆ ಭಾರಿ ಮುಖಭಂಗವಾಗುದೆ ವಿಜಯೋತ್ಸವದಲ್ಲಿ ಶಾಸಕ ಮಹೇಶ ತೆಂಗಿನಕಾಯಿ ಭಾಗವಹಿಸಿದ್ದರು .

ಗದಗ- ನರಗುಂದ ತಾಲೂಕು ಕ್ಷೇತ್ರದ 1 ನಿರ್ದೇಶಕ ಸ್ಥಾನಕ್ಕೆ ಹನುಮಂತಗೌಡ ಗೋವಿಂದಗೌಡ ಹಿರೇಗೌಡರ ಅವಿರೋಧವಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಇನ್ನುಳಿದ 8 ಸ್ಥಾನಗಳಿಗೆ 17 ಮಂದಿ ಸ್ಪರ್ಧೆ ಮಾಡಿದ್ದರು ರವಿವಾರ ಚುನಾವಣೆ ಜರುಗಿತು ಇದರಲ್ಲಿ ಗರಿಷ್ಠ ಮತಗಳನ್ನು ಪಡೆದ 8 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು .

ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಧಾರವಾಡ ಉತ್ಪನ್ನ ಡೇರಿಯ ಮುಖ್ಯ ಕಚೇರಿ ಆವರಣದಲ್ಲಿ ಮತದಾನಕ್ಕೆ ಪ್ರತ್ಯೇಕ ಮೂರು ಕಡೆ ಮೂರು ಜಿಲ್ಲೆಯ ಮತದಾರರಿಗೆ ಅವಕಾಶ ಮಾಡಿಕೊಡಲಾಗಿತ್ತು. ಆಡಳಿತ ಮಂಡಳಿಯ ಎಂಟು ಸ್ಥಾನಗಳಿಗೆ ನಡೆದ ಮತದಾನದಲ್ಲಿ ಶೇ.98.38 ರಷ್ಟು ಮತದಾನ ದಾಖಲಾಯಿತು. ಒಟ್ಟು 555 ಮತದಾರರ ಪೈಕಿ 546 ಜನ ಮತ ಚಲಾಯಿಸಿದರೆ ಈ ಚಲಾವಣೆಗೊಂಡ ಮತಗಳ ಪೈಕಿ ಯಲ್ಲಾಪೂರ, ದಾಂಡೇಲಿ, ಹಳಿಯಾಳ, ಮುಂಡಗೋಡ, ಅಂಕೋಲಾ, ಜೋಯಿಡಾ ಮತ್ತು ಕಾರವಾರ ತಾಲೂಕು ಮತಕ್ಷೇತ್ರಕ್ಕೆ ಚಲಾವಣೆಯಾದ 91 ಮತಗಳ ಪೈಕಿ 1 ಮತವಷ್ಟೇ ಕುಲಗೆಟ್ಟ ಮತವನ್ನಾಗಿ ಪರಿಗಣಿಸಲಾಯಿತು.

ಕುಂದಗೋಳ, ಹುಬ್ಬಳ್ಳಿ ಗ್ರಾಮೀಣ ಮತ್ತು ಹುಬ್ಬಳ್ಳಿ ನಗರ ತಾಲೂಕು ಮತಕ್ಷೇತ್ರಕ್ಕೆ ಚಲಾವಣೆಯಾದ ಒಟ್ಟು 67 ಮತಗಳಲ್ಲಿ ಸುರೇಶ ಬಣವಿ ಅವರು 36 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಗಂಗಪ್ಪ ಮೂಕಪ್ಪ ಮೊರಬದ ಅವರನ್ನು ಕೇವಲ ನಾಲ್ಕು ಮತಗಳ ಅಂತದಿAದ ಮಣಿಸಿದ್ದಾರೆ. ರೋಣ ಮತ್ತು ಗಜೇಂದ್ರಗಡ ತಾಲೂಕು ಮತಕ್ಷೇತ್ರಕ್ಕೆ ಚಲಾವಣೆಗೊಂಡ ಒಟ್ಟು 41 ಮತಗಳಲ್ಲಿ ನೀಲಕಂಠಪ್ಪ ಅಸೂಟಿ 29 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಗದಿಗೆಪ್ಪ ಕಿರೇಸೂರ ಅವರನ್ನು 19 ಮತಗಳಿಂದ ಮಣಿಸಿದ್ದಾರೆ. ಮುಂಡರಗಿ, ಶಿರಹಟ್ಟಿ ಮತ್ತು ಲಕ್ಷೇಶ್ವರ ತಾಲೂಕು ಮತಕ್ಷೇತ್ರದ ಒಟ್ಟು 71 ಮತಗಳ ಪೈಕಿ 69 ಮತದಾರರು ಮತ ಚಲಾಯಿಸಿದ್ದರು. ಈ ಪೈಕಿ ಲಿಂಗರಾಜಗೌಡ ಹನುಮಂತಗೌಡ ಪಾಟೀಲ 50 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿಯಾಗಿದ್ದ ಶೇಖಣ್ಣ ಕಾಳೆ ಕೇವಲ 19 ಮತಗಳಷ್ಟೇ ಪಡೆದಿದ್ದಾರೆ.

ಶಿರಸಿ‌ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಸುರೇಶ್ಚಂದ್ರ ಹೆಗಡೆ ಕೇಶಿನ್ಮನೆ ಅವರು ವಿಜಯಶಾಲಿಯಾಗಿದ್ದಾರೆ.ಕಳೆದ‌ ಎರಡನೇ ಬಾರಿಯ ಜೊತೆಗೆ ಮೂರನೇ ಬಾರಿಗೆ ಕೂಡ ಸತತ ಗೆಲುವು ಸಾಧಿಸಿದ್ದಾರೆ. ಕೆಶಿನ್ಮನೆ 70 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಉಮಾಮಹೇಶ್ವರ ಹೆಗಡೆ ಕೇವಲ 14 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ

ಸಿದ್ದಾಪುರ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕು ಮತಕ್ಷೇತ್ರದ ಒಟ್ಟು 74 ಮತಗಳ ಪೈಕಿ ಚಲಾವಣೆಗೊಂಡ 73 ಮತಗಳಲ್ಲಿ ಪರಶುರಾಮ ವೀರಭದ್ರ ನಾಯ್ಕ 37 ಮತ ಪಡೆದು ವಿಜಯಶಾಲಿಯಾದರೆ ಪ್ರತಿಸ್ಪರ್ಧಿಗಳಾದ ಸಾಧನಾ ರಾಜೇಶ ಭಟ್ಟ 27, ಮಂಜುನಾಥ ಶಿವರಾಮ ಹೆಗಡೆ 9 ಮತಗಳನ್ನು ಪಡೆದಿದ್ದಾರೆ.

ಯಲ್ಲಾಪೂರ, ದಾಂಡೇಲಿ, ಹಳಿಯಾಳ, ಮುಂಡಗೋಡ, ಅಂಕೋಲಾ, ಜೋಯಿಡಾ ಮತ್ತು ಕಾರವಾರ ತಾಲೂಕು ಮತಕ್ಷೇತ್ರದ ಒಟ್ಟು 94 ಮತಗಳ ಪೈಕಿ ಚಲಾವಣೆಗೊಂಡ 91 ಮತಗಳಲ್ಲಿ ಶಂಕರ ಪರಮೇಶ್ವರ ಹೆಗಡೆ 66 ಮತಗಳನ್ನು ಪಡೆದು 24 ಮತ ಪಡೆದ ಪ್ರಶಾಂತ ಸುಬ್ರಾಯ ಸಭಾಹಿತ ಅವರನ್ನು ಮಣಿಸಿದ್ದಾರೆ ಎಂದು ಚುನಾವಣಾಧಿಕಾರಿ ಡಾ. ಸಂತೋಷ ಬಿರಾದಾರ ತಿಳಿಸಿದ್ದಾರೆ.

ವರದಿ :ಸುನೀಲ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!