
ವ್ಯಾಸನಂದಿಹಾಳ ಗ್ರಾಮದಲ್ಲಿ ಸಂಭ್ರಮದ ಬನ್ನಿ ಹಬ್ಬದ ಆಚರಣೆ.

ವ್ಯಾಸನಂದಿಹಾಳ/ಸತ್ಯಮಿಥ್ಯ (ಅ-03)
ಹಿಂದೂ ಸಾಂಪ್ರದಾಯಿಕ ಹಬ್ಬಗಳಲ್ಲಿ ಪ್ರತಿಯೊಂದು ಹಬ್ಬಗಳ ಆಚರಣೆಯಲ್ಲಿ ಒಂದೊಂದು ವೈಶಿಷ್ಟತೆಗಳನ್ನು ಒಳಗೊಂಡಂತೆ ಹಬ್ಬವನ್ನು ಸೌಹಾರ್ದಯುತವಾಗಿ ಹಾಗೂ ಶಾಂತಿಯುತವಾಗಿ ಆಚರಣೆ ಮಾಡುವುದರ ಮೂಲಕ ಗ್ರಾಮದ ಹಿರಿಮೆಯ ಗರಿಯನ್ನು ಹೆಚ್ಚಿಸಲು ಹಾಗೂ ಗ್ರಾಮದ ಪ್ರತಿಯೊಬ್ಬ ಗ್ರಾಮಸ್ಥರು ಏಕತೆಯಿಂದ ಹಬ್ಬವನ್ನು ಆಚರಣೆ ಮಾಡುವುದರಿಂದ ಹಬ್ಬದ ಸಾಂಪ್ರದಾಯಕ್ಕೆ ಮೆರಗೂ ಬಂದಂತಾಗುತ್ತದೆ.
ಅಂತಹ ಗ್ರಾಮದ ಹಿರಿಮೆಯ ಗರಿಯನ್ನು ಹೆಚ್ಚಿಸುವಂತೆ ನಿನ್ನೆ ವ್ಯಾಸನಂದಿಹಾಳ ಗ್ರಾಮದಲ್ಲಿ ನವರಾತ್ರಿ ಹಬ್ಬದ ಕೊನೆಯ ದಿನವಾದ ನಿನ್ನೆ ಬನ್ನಿ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.
ಗ್ರಾಮದಲ್ಲಿ ನಿನ್ನೆ ಬನ್ನಿ ವಿನಿಮಯದ ಮೂಲಕ “ನಾವು ನೀವು ಬಂಗಾರದಂಗೆ ಇರೋಣ” ಎನ್ನುವ ನುಡಿಯೊಂದಿಗೆ ಕಿರಿಯರು ಹಿರಿಯರಿಂದ ಆಶೀರ್ವಾದವನ್ನು ಪಡೆದುಕೊಂಡರು.
ಗ್ರಾಮದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಗ್ರಾಮದ ಮಹಿಳೆಯರು ಗ್ರಾಮ ದೇವತೆಗೆ ದಿನನಿತ್ಯ ವಿಶೇಷ ಪೂಜೆಯನ್ನು ವಿವಿಧ ಹೂಗಳಿಂದ ವಿವಿಧ ನೈವೇದ್ಯಗಳನ್ನು ದೇವಿಗೆ ಅರ್ಪಿಸುವುದರೊಂದಿಗೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು
ನವರಾತ್ರಿ ಹಬ್ಬವನ್ನು ಗ್ರಾಮದಲ್ಲಿ ಪ್ರತಿ ವರ್ಷವೂ 9 ದಿನಗಳವರೆಗೆ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಮೂಲಕ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಗ್ರಾಮ ಪಂಚಾಯಿತಿಯ ಸದಸ್ಯರಾದ ವೀರಭದ್ರಗೌಡ ಪಾಟೀಲ ಅವರು ಹೇಳಿದರು.
ನವರಾತ್ರಿ ಹಬ್ಬವನ್ನು ಗ್ರಾಮದ ಎಲ್ಲರೂ ಏಕತೆಯಿಂದ ಆಚರಣೆ ಮಾಡುವುದರ ಮೂಲಕ ಹಬ್ಬದ ಸಂಸ್ಕೃತಿಯನ್ನು ಹಿರಿಯರಿಂದ ಕಿರಿಯರಿಗೆ ಹೇಳುವುದರ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದೆವು ಗ್ರಾಮಸ್ಥರಾದ ಸಿದ್ದರಾಮಯ್ಯ ಅವರು ಹೇಳಿದರು.
ಗ್ರಾಮದಲ್ಲಿ ಪ್ರತಿದಿನ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸುವುದರೊಂದಿಗೆ ದೇವಿಯ ಪುರಾಣದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದೆವು ಎಂದು ಶಂಕ್ರವ್ವ ಕಟಗೇರಿ ಅವರು ಹೇಳಿದರು.
ನವರಾತ್ರಿ ಹಬ್ಬದಲ್ಲಿ ನವ ಬಣ್ಣಗಳ ಸೀರೆಯನ್ನು ಸರದಿಯಂತೆ ಸೀರೆಯನ್ನುಟ್ಟು ಗ್ರಾಮ ದೇವತೆಗೆ ವಿಶೇಷ ಪೂಜೆಯನ್ನು ಸಲ್ಲಿಸುವುದರೊಂದಿಗೆ ಹಬ್ಬವನ್ನು ಹಬ್ಬವನ್ನು ಆಚರಣೆ ಮಾಡಿದೆವು ಎಂದು ವಿಜಯಲಕ್ಷ್ಮಿ ಪಾಟೀಲ ಅವರು ಹೇಳಿದರು.
ವರದಿ:ಮುತ್ತು ಗೋಸಲ